ಫ್ಲೋರಿಡಾ: ಮಿಯಾಮಿ ಹಾರ್ಡ್ ರಾಕ್ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕ ಫಿಫಾ ವಿಶ್ವಕಪ್ (FIFA World Cup) 2026 ರ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ (England) ತಂಡವು ನಾರ್ವೆ(Norway) ವಿರುದ್ಧ 2-1 ಗೋಲುಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ನಾಲ್ಕನೇ ಬಾರಿಗೆ ವಿಶ್ವಕಪ್ ಸೆಮಿಫೈನಲ್ ತಲುಪಿದ ಇತಿಹಾಸ ನಿರ್ಮಿಸಿದೆ.
ಪಂದ್ಯದ 36ನೇ ನಿಮಿಷದಲ್ಲಿ ನಾರ್ವೆಯ ಆ್ಯಂಡ್ರಿಯಾಸ್ ಶೇಲ್ಡೆರಪ್ ಅವರು ಗೋಲು ಬಾರಿಸುವ ಮೂಲಕ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.
ಮೊದಲಾರ್ಧ ಮುಕ್ತಾಯಗೊಳ್ಳುವ ಕೆಲವೇ ಕ್ಷಣಗಳ ಮುನ್ನ (45+2ನೇ ನಿಮಿಷ) ಇಂಗ್ಲೆಂಡ್‌ನ ಸ್ಟಾರ್ ಮಿಡ್‌ಫೀಲ್ಡರ್ ಜೂಡ್ ಬೆಲ್ಲಿಂಗ್‌ಹ್ಯಾಂ(Jude Bellingham) ಅತ್ಯಾಕರ್ಷಕ ಗೋಲು ಹೊಡೆದು ಪಂದ್ಯವನ್ನು 1-1 ರಿಂದ ಸಮಬಲಗೊಳಿಸಿದರು.
JUDE BELLINGHAM SCORES AGAIN FOR ENGLAND WITH AN UNBELIEVABLE GOAL IN EXTRA TIME OF ENGLAND VS NORWAY IN THE QUARTER FINAL OF THE WORLD CUP 😱 #WorldCup2026 #FIFAWorldCup #fifaworldcup26 #WorldCup pic.twitter.com/nh0rvYRqh7
— Caleb𓃵 (@CalebDesignsX) July 11, 2026
ಪಂದ್ಯದ ದ್ವಿತೀಯಾರ್ಧದಲ್ಲಿ ನಾರ್ವೆಯ ಟಾರ್ಬ್‌ಜಾರ್ನ್ ಹೆಗ್ಗೆಮ್ ಗೋಲು ಬಾರಿಸಿದರಾದರೂ, ಬಿಲ್ಡ್-ಅಪ್ ವೇಳೆ ಎರ್ಲಿಂಗ್ ಹಾಲಂಡ್(Erling Haaland) ಫೌಲ್ ಮಾಡಿದ್ದರಿಂದ VAR ಪರಿಶೀಲನೆಯ ನಂತರ ಆ ಗೋಲನ್ನು ನಿರಾಕರಿಸಲಾಯಿತು. ಇದನ್ನೂ ಓದಿ: Viral Video: ಫಿಫಾ ವಿಶ್ವಕಪ್‌ನಲ್ಲಿ ಮೊರಾಕ್ಕೊ ಸೋತಿದ್ದಕ್ಕೆ ಕಣ್ಣೀರಿಟ್ಟ ನೋರಾ ಫತೇಹಿ
ಈ ಪಂದ್ಯದಲ್ಲಿ ಎರಡು ಗೋಲು ಗಳಿಸಿದ ಜೂಡ್ ಬೆಲ್ಲಿಂಗ್‌ಹ್ಯಾಂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದರೊಂದಿಗೆ ಚುಕ್ಕಾಣಿ ಹಿಡಿದಿರುವ ಥಾಮಸ್ ಟುಶಲ್ ಅವರ ಇಂಗ್ಲೆಂಡ್ ತಂಡವು ಜುಲೈ 15 ರಂದು ಅಟ್ಲಾಂಟಾದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಅಥವಾ ಸ್ವಿಟ್ಜರ್ಲೆಂಡ್ ತಂಡವನ್ನು ಎದುರಿಸಲಿದೆ. ನಾರ್ವೆ ತಂಡದ ಐತಿಹಾಸಿಕ ವಿಶ್ವಕಪ್ ಪಯಣ ಕ್ವಾರ್ಟರ್‌ಫೈನಲ್ ಹಂತದಲ್ಲಿ ಕೊನೆಗೊಂಡಿದೆ.
