ನ್ಯೂಯಾರ್ಕ್: ಇತ್ತೀಚೆಗೆ ಫಿಫಾ ವಿಶ್ವಕಪ್ (FIFA World Cup) ಕ್ವಾರ್ಟರ್ ಫೈನಲ್‌ನಲ್ಲಿ ಫ್ರಾನ್ಸ್ ಎದುರು ಮೊರಾಕ್ಕೊ (Morocco) ಸೋತಿದ್ದಕ್ಕೆ ನೋರಾ ಫತೇಹಿ (Nora Fatehi) ಭಾವುಕರಾಗಿ ಕಣ್ಣೀರಿಟ್ಟಿರುವ ದೃಶ್ಯದ ವೀಡಿಯೋವೊಂದು ವೈರಲ್ ಆಗಿದೆ.
ಪಂದ್ಯದ ವೇಳೆ ಕೆಂಪು ಜೆರ್ಸಿ ಧರಿಸಿ ತಂಡವನ್ನು ಹುರಿದುಂಬಿಸುತ್ತಿದ್ದ ನೋರಾ ಫತೇಹಿ, ಸೋಲಿನ ಬಳಿಕ ಕಣ್ಣೀರಿಟ್ಟಿದ್ದಾರೆ. ಆಗ ಸ್ನೇಹಿತ ನಟಿಯನ್ನು ಸಮಾಧಾನಪಡಿಸುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಇದನ್ನೂ ಓದಿ: ಕೊನೆಯ ಕ್ಷಣದಲ್ಲಿ ಮೆರಿನೊ ಮ್ಯಾಜಿಕ್ – ಬೆಲ್ಜಿಯಂ ವಿರುದ್ಧ ಗೆದ್ದು ಸೆಮಿಗೆ ಸ್ಪೇನ್ ಲಗ್ಗೆ
Nora Fatehi started crying after Morocco lost and was eliminated from the FIFA World Cup in the quarterfinals.
Have you ever seen her cry after India lost critical World Cup cricket matches?
They earn here, but they are not emotionally connected here. pic.twitter.com/dyTNCPz3vI
— Chota Don (@choga_don) July 10, 2026
ನೋರಾ ಫತೇಹಿ ಫಿಫಾ ಜೊತೆ ನಿಕಟ ಸಂಬಂಧ ಹೊಂದಿದ್ದಾರೆ. ಈ ವರ್ಷದ ಆರಂಭದಲ್ಲಿ ಅವರು ವಿಶ್ವಕಪ್ 2026 ರ ಆಲ್ಬಂನ ಭಾಗವಾಗಿರುವ ತಮ್ಮ ಸಿಯರ್ ಸಿಯರ್ ಹಾಡಿನೊಂದಿಗೆ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಿದರು. ಫ್ರೆಂಚ್ ಗಾಯಕ ವೆಗೆಡ್ರೀಮ್ ಮತ್ತು ಸಂಗೀತ ನಿರ್ಮಾಪಕ ಸನ್‌ಜಾಯ್ ಅವರ ಸಹಯೋಗದೊಂದಿಗೆ ರಚಿಸಲಾದ ಈ ಟ್ರ್ಯಾಕ್ ಜೂನ್ 8 ರಂದು ಬಿಡುಗಡೆಯಾಯಿತು. 5.8 ಕೋಟಿಗಿಂತಲೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.
ನೋರಾ ಫತೇಹಿ ಇತ್ತೀಚೆಗೆ ಡಲ್ಲಾಸ್‌ನಲ್ಲಿ ಅಪಾರ ಪ್ರೀತಿಯನ್ನು ಪಡೆದ ಬಗ್ಗೆ ಮತ್ತು ಮೊರಾಕ್ಕೊವನ್ನು ಬೆಂಬಲಿಸುವ ಭಾರತೀಯ ಅಭಿಮಾನಿಗಳು ಹೇಗೆ ಭಾವುಕರಾದರು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಫಿಫಾ ವಿಶ್ವಕಪ್‌ನಲ್ಲಿ ಮೊರಾಕ್ಕೋ ಸೋಲಿನ ಬೆನ್ನಲ್ಲೇ ಹಿಂಸಾಚಾರ; ಪ್ಯಾರಿಸ್, ಲಂಡನ್‌ನಲ್ಲಿ ಮುಸ್ಲಿಂ ವಲಸಿಗರ ಹುಚ್ಚಾಟ
ನೋರಾ ವಂಶಾವಳಿಯ ಬೇರು ಮೊರೊಕ್ಕೊದಲ್ಲಿದೆ. ಆದರೆ, ನಟಿ ಕೆನಡಾದಲ್ಲಿ ಬೆಳೆದು ಈಗ ಭಾರತದಲ್ಲಿ ನೆಲೆಸಿದ್ದಾರೆ. ಎರಡೂ ದೇಶಗಳ ಮೇಲಿನ ತನ್ನ ಪ್ರೀತಿಯ ಬಗ್ಗೆ ಯಾವಾಗಲೂ ಧ್ವನಿ ಎತ್ತಿದ್ದಾರೆ.
