ಕೋಲಾರ : ಕೋಲಾರದ (Kolar) ಮನೆಯೊಂದರ ಹಾಸಿಗೆಯಲ್ಲಿ ಅಡಗಿದ್ದ ನಾಗರಹಾವನ್ನು(Snake) ಉರಗ ರಕ್ಷಕ ನಾಗರಾಜ್ ಅವರು ರಕ್ಷಣೆ ಮಾಡಿದ್ದಾರೆ.
ಈ ಘಟನೆ ಕೋಲಾರ ನಗರದ ಬಂಗಾರಪೇಟೆ ವೃತ್ತದ ಬಳಿಯ ಹಳೆ ಹೆಂಚಿನ ಕಾರ್ಖಾನೆ ಸಮೀಪದ ಮನೆಯಲ್ಲಿ ನಡೆದಿದೆ. ರತನ್ ಲೋಕ್ ಸ್ಟೀಲ್ ಅಂಗಡಿ ಮಾಲೀಕರ ಮನೆಯ ಹಾಸಿಗೆಯೊಳಗೆ ನಾಗರಹಾವು ಅಡಗಿಕೊಂಡಿತ್ತು.
ಹಾವನ್ನು ಕಂಡ ತಕ್ಷಣ ಮನೆಯವರು ಗಾಬರಿಗೊಂಡು ಉರಗ ರಕ್ಷಕ ನಾಗರಾಜ್ ಅವರಿಗೆ ಕರೆ ಮಾಡಿದ್ದಾರೆ. ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಬಂದ ಅವರು, ಎಚ್ಚರಿಕೆಯಿಂದ ಹಾಸಿಗೆಯನ್ನು ಪರಿಶೀಲಿಸಿ ನಾಗರಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.ಇದನ್ನೂ ಓದಿ: ಕಾರವಾರ ಬಂದರಿನಲ್ಲಿ ಹಡಗಿನಿಂದ ಸಾವಿರಾರು ಲೀಟರ್ ಬಿಸಿ ಡಾಂಬರ್ ಸಮುದ್ರಕ್ಕೆ ಸೋರಿಕೆ
ಬಳಿಕ ಹಾವನ್ನು ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ಸಮಯಕ್ಕೆ ಸರಿಯಾಗಿ ಉರಗ ರಕ್ಷಕರು ಆಗಮಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.ಇದನ್ನೂ ಓದಿ: ಎಸ್.ಜಾನಕಿ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ: ಬೊಮ್ಮಾಯಿ
