ನವದೆಹಲಿ: ಮಾದಕವ್ಯಸನಿಯೊಬ್ಬ ಪುನರ್ವಸತಿ ಕೇಂದ್ರದಿಂದ ಹಿಂದಿರುಗಿದ ಕೆಲವೇ ದಿನಗಳಲ್ಲಿ ತನ್ನ ಇಡೀ ಕುಟುಂಬವನ್ನೇ (Family) ಕೊಂದ ಘೋರ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (NewDelhi) ನಡೆದಿದೆ.
ಕೇಶವ್ (25) ಬಂಧಿತ ಆರೋಪಿ. ಕೇಶವ್ ಒಂದು ತಿಂಗಳ ಹಿಂದೆ ಗುರ್ಗಾಂವ್‍ನಲ್ಲಿ ಕೆಲಸ ಬಿಟ್ಟಿದ್ದ. ಈ ಹಿನ್ನೆಲೆಯಿಂದ ದೀಪಾವಳಿಯಿಂದ ನಿರುದ್ಯೋಗಿಯಾಗಿದ್ದ. ಕೇಶವ್‍ನ ಅತಿಯಾದ ಮದ್ಯವಸನದಿಂದಾಗಿ ಆತನ ಕುಟುಂಬಸ್ಥರು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು. ಅದಾದ ಬಳಿಕ ಮರಳಿ ನೈಋತ್ಯ ದೆಹಲಿಯ ಪಾಲಮ್‍ನಲ್ಲಿರುವ ಮನೆಗೆ ಬಂದಿದ್ದ. ಆದರೆ ಮಂಗಳವಾರ ಆತ ಡ್ರಗ್ಸ್‌ನ ಅಮಲಿನಲ್ಲಿ ತನ್ನ ಅಜ್ಜಿ ದೀವಾನಾ ದೇವಿ (75), ತಂದೆ ದಿನೇಶ್ (50), ತಾಯಿ ದರ್ಶನಾ ಮತ್ತು ಸಹೋದರಿ ಊರ್ವಶಿ (18)ಗೆ ಅನೇಕ ಬಾರಿ ಚಾಕುವಿನಿಂದ ಕತ್ತನ್ನು ಸೀಳಿ ತನ್ನ ವಿಕೃತಿಯನ್ನು ಮರೆದಿದ್ದಾನೆ.
Advertisement
Advertisement
ಈ ವೇಳೆ ಮನೆಯಲ್ಲಿದ್ದವರ ಕಿರುಚಾಟ ಕೇಳಿದ ಅದೇ ಕಟ್ಟಡದಲ್ಲಿದ್ದ ನೆರೆಹೊರೆಯವರು ಪೊಲೀಸರಿಗೆ (Police) ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಕೇಶವ್ ಕುಟುಂಬಸ್ಥರ ಜೀವ ಹೊರಟು ಹೋಗಿದ್ದು, ಇಡೀ ಮನೆಯು ರಕ್ತಸಿಕ್ತವಾಗಿತ್ತು. ಕೇಶವ್‍ನ ತಂದೆ- ತಾಯಿಯ ಶವವು ಸ್ನಾನಗೃಹದಲ್ಲಿ ಮತ್ತು ಆತನ ಸಹೋದರಿ ಮತ್ತು ಅಜ್ಜಿಯ ಮೃತದೇಹಗಳು ಇತರ ಕೊಠಡಿಗಳಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಚಿಲುಮೆ ವೋಟರ್ ಐಡಿ ಅಕ್ರಮ ಪ್ರಕರಣ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಆಗಲಿ : ಜೆಡಿಎಸ್ ಒತ್ತಾಯ
Advertisement
Advertisement
ಪೊಲೀಸರು ಸ್ಥಳಕ್ಕಾಗಮಿಸಿದ್ದನ್ನು ಗಮನಿಸಿದ ಕೇಶವ್ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದು, ಸ್ಥಳೀಯರು ಹಾಗೂ ಸಂಬಂಧಿಕರು ಆತನನ್ನು ಸೆರೆ ಹಿಡಿದಿದ್ದಾರೆ. ಇದನ್ನೂ ಓದಿ: ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಮದುವೆಯಾದ ಒಂದೇ ವರ್ಷಕ್ಕೆ ಆತ್ಮಹತ್ಯೆಗೆ ಶರಣಾದ ಟೆಕ್ಕಿ