CrimeInternationalLatestMain Post

ಎಂದಿಗೂ ಮನೆಗೆ ಬಾರದ ಮಾಲಕಿಗಾಗಿ ಕಾಯುತ್ತಿರುವ ನಾಯಿ – ವೀಡಿಯೋ ವೈರಲ್!

ಮೆಕ್ಸಿಕೋ: ಎಂದಿಗೂ ಮನೆಗೆ ಬಾರದ ಮಾಲಕಿ ಕಾಯುತ್ತಿರುವ ನಾಯಿಯ ಹೃದಯವಿದ್ರಾವಕ ಫೋಟೋ ಮತ್ತು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಉತ್ತರ ಮೆಕ್ಸಿಕೋದ ಗಡಿ ನಗರವಾದ ಟಿಜುವಾನಾದಲ್ಲಿ ಪತ್ರಕರ್ತೆ ಲೌರ್ಡೆಸ್ ಮಲ್ಡೊನಾಡೊ ಲೋಪೆಜ್ ಅವರನ್ನು ಕಾರಿನೊಳಗೆ ಮಾರಣಾಂತಿಕವಾಗಿ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಆದರೆ ನಾಯಿ ತನ್ನ ಮಾಲಕಿಗಾಗಿ ಮನೆಯ ಹೊರಗೆ ಕಾಯುತ್ತಿರುವ ಫೋಟೋ ವೈರಲ್ ಆಗಿದೆ. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳನ್ನ ಬಸ್ಸಿನಲ್ಲಿ ತಾವೇ ಡ್ರೈವ್ ಮಾಡಿ ರೌಂಡ್ ಹಾಕಿಸಿದ ಶಿವಣ್ಣ

ವೀಡಿಯೋದಲ್ಲಿ ಏನಿದೆ?
ಲೌರ್ಡೆಸ್ ಮಲ್ಡೊನಾಡೊ ಲೋಪೆಜ್ ಯುಎಸ್ ಪ್ರಜೆಯಾಗಿದ್ದು, ಈಕೆಯನ್ನು ಗುಂಡಿಟ್ಟು ಕೊಲ್ಲಲಾಗಿದೆ. ಆಕೆ ಕೊಲೆಯಾದ ಒಂದು ದಿನದ ನಂತರ, ಆಕೆಯ ನಾಯಿಯು ಪೊಲೀಸ್ ಟೇಪ್‍ನಿಂದ ಸುತ್ತುವರಿದ ಅವರ ಮನೆಬಾಗಿಲಿನಲ್ಲಿಯೇ ಇದೆ. ಆ ಫೋಟೋ ನೋಡಿದರೆ ಆ ನಾಯಿಗೆ ತನ್ನ ಮಾಲಕಿ ಮೇಲೆ ಎಷ್ಟರ ಮಟ್ಟಿಗೆ ಪ್ರೀತಿ ಇದೆ ಎಂಬುದು ತಿಳಿಯುತ್ತೆ.

ಮಲ್ಡೊನಾಡೊ ಅವರ ಟಿಜುವಾನಾ ಮನೆಯಲ್ಲಿ ಇರುವ ನಾಯಿಯ ವೀಡಿಯೊವನ್ನು ಪತ್ರಕರ್ತೆ ರೋಸಾ ಲಿಲ್ಲಿಯಾ ಸೋಮವಾರ ಸೆರೆಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಮೆಕ್ಸಿಕೊದಲ್ಲಿ ಎರಡು ವಾರಗಳಲ್ಲಿ ಮೂವರು ಪತ್ರಕರ್ತರ ಕ್ರೂರ ಹತ್ಯೆಯಾಗಿದೆ. ಅದರಲ್ಲಿ ಮಲ್ಡೊನಾಡೊ ಒಬ್ಬರು. ಈ ಕೃತ್ಯ ಭಾನುವಾರ ನಡೆದಿದ್ದು, ಮಲ್ಡೊನಾಡೊ ಅವರ ಹತ್ಯೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಶವ ಕಾರಿನಲ್ಲಿ ಪತ್ತೆಯಾಗಿತ್ತು. ಹಾಗೆಯೇ ಜನವರಿ 17 ರಂದು ಟಿಜುವಾನಾ ಫೋಟೋ ಜರ್ನಲಿಸ್ಟ್ ಮಾರ್ಗರಿಟೊ ಮಾರ್ಟಿನೆಜ್ ಮತ್ತು ಜನವರಿ 10 ರಂದು ವೆರಾಕ್ರಜ್ ಪತ್ರಕರ್ತ ಜೋಸ್ ಲೂಯಿಸ್ ಗ್ಯಾಂಬೋವಾ ಹತ್ಯೆ ಮಾಡಲಾಗಿದೆ. ಇದನ್ನೂ ಓದಿ: ಪಿಂಚಣಿ ಪಡೆಯಲು ಚಿಕ್ಕಪ್ಪನ ಶವವನ್ನ ಪೋಸ್ಟ್ ಆಫೀಸ್‍ಗೇ ತಂದ!

ಕಳೆದ ವರ್ಷ ಏಪ್ರಿಲ್‍ನಲ್ಲಿ, ಈಕೆಯ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಈ ಸಂಬಂಧ 2019 ರಲ್ಲಿ, ಮಾಲ್ಡೊನಾಡೊ ಮೆಕ್ಸಿಕೋ ಅಧ್ಯಕ್ಷರಿಗೆ ನನ್ನ ಮೇಲೆ ಜೀವ ಬೆದರಿಕೆ ಇದೆ ಎಂದು ತಿಳಿಸಿದ್ದರು. ಆಗ ಮೆಕ್ಸಿಕನ್ ಸರ್ಕಾರವು ಇವರಿಗೆ ಪೊಲೀಸ್ ರಕ್ಷಣೆಯಲ್ಲಿ ಕೊಟ್ಟಿತ್ತು.

Leave a Reply

Your email address will not be published.

Back to top button