– ಗೋಧೂಳಿ ಮುಹೂರ್ತ ಏಕೆ ಅತ್ಯಂತ ಮಂಗಳಕರ?
ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ, ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರ ರಾಜ್ಯಭಾರಕ್ಕೆ ಕೌಂಟ್‌ಡೌನ್ ಶುರುವಾಗಿದೆ. ರಾಜ್ಯಪಾಲರು ರಾಜೀನಾಮೆ ಅಂಗೀಕರಿಸುತ್ತಿದ್ದಂತೆ, ಹೊಸ ಸರ್ಕಾರ ರಚನೆ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಶುಕ್ರವಾರ (ಮೇ 29) ಉಪರಾಷ್ಟ್ರಪತಿಗಳು ಬೆಂಗಳೂರಿಗೆ (Bengaluru) ಆಗಮಿಸುತ್ತಿದ್ದು, ರಾಜ್ಯಪಾಲರು ಕಾರ್ಯದ ಒತ್ತಡದಲ್ಲಿದ್ದಾರೆ. ಶುಕ್ರವಾರ ಸಂಜೆಯೊಳಗೆ ರಾಜೀನಾಮೆ ಅಂಗೀಕಾರವಾಗಬೇಕಿದೆ. ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆಗಳಿದೆ. ಸಿಎಲ್‌ಪಿ ನಾಯಕರಾಗಿ ಡಿಕೆಶಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸೋಮವಾರ ಸಂಜೆ ಗೋದೂಳಿ ಮುಹೂರ್ತದಲ್ಲಿ ಡಿಕೆಶಿ ಪ್ರಮಾಣವಚನ ಸ್ವೀಕರಿಸೋ ಸಾಧ್ಯತೆಗಳಿವೆ. ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ – ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿಗೆ ಪತ್ರ ಹಸ್ತಾಂತರ

ಎಲ್ಲಿ ಪ್ರಮಾಣ ಸ್ವೀಕಾರ?
ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮೇಲೆ ಅಥವಾ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕರಿಸೋ ಸಾಧ್ಯತೆಗಳಿವೆ. ದೊಡ್ಡ ಪ್ರಮಾಣದಲ್ಲಿ ಜನರನ್ನ ಸೇರಿಸಿ ಪದಗ್ರಹಣ ನಡೆಸಲು ಸಿದ್ಧತೆ ನಡೆಸಲಾಗಿದೆ. ಇದನ್ನೂ ಓದಿ: ಸಂವಿಧಾನವೇ ನನ್ನ ಧರ್ಮ, ಮತದಾರರೇ ನನ್ನ ಅಭಿಮಾನಿ ದೇವರು: ಸಿದ್ದರಾಮಯ್ಯ
ಗೋಧೂಳಿ ಮುಹೂರ್ತ ಏಕೆ ಮಂಗಳಕರ?
ಸೂರ್ಯಾಸ್ತ ಅಥವಾ ಕತ್ತಲಿನ ನಡುವಿನ ಸಮಯವನ್ನು ಗೋಧೂಳಿ ಅವಧಿ ಎಂದು ಕರೆಯಲಾಗುತ್ತದೆ. ಈ ಸಮಯ ಸಂಜೆ 05 ರಿಂದ 07 ರವರೆಗೆ ಮಾತ್ರ ಇರುತ್ತದೆ. ಈ ಗೋಧೂಳಿ ಅವಧಿಯನ್ನು ಅಥವಾ ಸಮಯವನ್ನು ಹಿಂದೂ ಧರ್ಮದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಏಕೆಂದರೆ ಈ ಸಮಯದಲ್ಲಿ ಹಸುಗಳು ತಮ್ಮ ಮನೆಗಳಿಗೆ ಹಿಂದಿರುಗುತ್ತವೆ ಮತ್ತು ಇದನ್ನು ಲಕ್ಷ್ಮಿ ದೇವಿಯ ಆಗಮನದ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಹಸುಗಳು, ಪ್ರಾಣಿಗಳು, ಪಕ್ಷಿಗಳು ಮತ್ತು ಇತರ ಜನರು ತಮ್ಮ ಮನೆಗಳಿಗೆ ಮರಳುತ್ತಾರೆ. ಪಕ್ಷಿಗಳು ಸಹ ತಮ್ಮ ಗೂಡಿನ ಕಡೆಗೆ ಆಕಾಶದಲ್ಲಿ ಸಾಲಾಗಿ ಹಾರುತ್ತವೆ. ಈ ಸಮಯವು ಉತ್ಸಾಹ, ಸಂತೋಷ ಮತ್ತು ತಂಪಾದ ವಾತಾವರಣದಿಂದ ಕೂಡಿರುತ್ತದೆ. ಇದನ್ನೂ ಓದಿ: ರಾಜೀನಾಮೆ ಬೆನ್ನಲ್ಲೇ ದೆಹಲಿಗೆ ಸಿದ್ದರಾಮಯ್ಯ – ಹೈಕಮಾಂಡ್ ನಾಯಕರ ಭೇಟಿ ಹಿಂದಿನ ಗುಟ್ಟೇನು?
ಗೋಧೂಳಿ ವೇಳೆ ಅನೇಕ ದೋಷಗಳಿಂದ ಮುಕ್ತಿ
ಈ ಸಮಯವನ್ನು ಶುಭ ಕೆಲಸಗಳಿಗೆ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಶುಭ ಸಮಯದಲ್ಲಿ ಲಕ್ಷ್ಮಿಯನ್ನು ಪೂಜಿಸುವುದರಿಂದ ಶುಭ ಫಲಗಳು ದೊರೆಯುತ್ತವೆ. ಈ ಸಮಯದಲ್ಲಿ ಮಾಡುವ ಪೂಜೆಯು ಅನೇಕ ದೋಷಗಳನ್ನು ಕೂಡ ತೆಗೆದುಹಾಕುತ್ತದೆ. ಅಲ್ಲದೆ, ಸಂಧ್ಯಾಕಾಲವು ಲಗ್ನದ ದೋಷಗಳನ್ನು ಸಹ ತೆಗೆದುಹಾಕುತ್ತದೆ ಮತ್ತು 8ನೇ ಮನೆಯಲ್ಲಿ ಅಂದರೆ ಪಾಪ ಮನೆಯಲ್ಲಿ ಗ್ರಹಗಳ ಸಂಚಾರದಿಂದ ಉಂಟಾಗುವ ದುಷ್ಪರಿಣಾಮಗಳಿಂದ ನಿಮ್ಮನ್ನು ಮುಕ್ತವಾಗಿಸುತ್ತದೆ.
