LatestLeading NewsMain PostNational

2ನೇ ಬಾರಿಗೆ ದಾಖಲೆ GST ಸಂಗ್ರಹ – 1.52 ಲಕ್ಷ ಕೋಟಿಯಲ್ಲಿ ಯಾವ ರಾಜ್ಯದ ಪಾಲು ಎಷ್ಟು?

ನವದೆಹಲಿ: ಈ ಬಾರಿ ಅಕ್ಟೋಬರ್ ತಿಂಗಳಲ್ಲಿ 1.52 ಲಕ್ಷ ಕೋಟಿ ಜಿಎಸ್‌ಟಿ (GST) ಸಂಗ್ರಹವಾಗಿದ್ದು, ದೇಶದಲ್ಲಿ ಜಿಎಸ್‌ಟಿ ಜಾರಿಯಾದ ಬಳಿಕ 2ನೇ ಬಾರಿಗೆ ಅತಿಹೆಚ್ಚಿನ ಜಿಎಸ್‌ಟಿ (GST) ಸಂಗ್ರವಾಗಿದೆ ಎಂದು ಕೇಂದ್ರಿಯ ಹಣಕಾಸು ಸಚಿವಾಲಯ (Ministry of Finance) ಮಂಗಳವಾರ ತಿಳಿಸಿದೆ.

ಕಳೆದ ಏಪ್ರಿಲ್ ತಿಂಗಳಲ್ಲಿ 1.68 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಸೆಪ್ಟಂಬರ್‌ನಲ್ಲಿ 1.48 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿತ್ತು. ಇದೀಗ ಅಕ್ಟೋಬರ್ ತಿಂಗಳಲ್ಲಿ 1.52 ಲಕ್ಷ ಕೋಟಿ ಸಂಗ್ರಹವಾಗಿದ್ದು, ಇದು 2ನೇ ಬಾರಿಗೆ ದಾಖಲೆಯ ಸಂಗ್ರಹವಾಗಿದೆ. ಇದನ್ನೂ ಓದಿ: 4 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಗದ್ದೆಯಲ್ಲಿ ಎಸೆದ – ಆರೋಪಿ ಅರೆಸ್ಟ್

ಅಕ್ಟೋಬರ್ 2022ರಲ್ಲಿ ಒಟ್ಟು 1,51,718 ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸಲಾಗಿದೆ. ಇದರಲ್ಲಿ ಕೇಂದ್ರ ಜಿಎಸ್‌ಟಿ 26,039 ಕೋಟಿ ರೂ. ಆಗಿದ್ದರೆ, ರಾಜ್ಯ ಜಿಎಸ್‌ಟಿ (GST) 33,396 ಕೋಟಿ ರೂ., ಇಂಟಿಗ್ರೇಟೆಡ್ ಜಿಎಸ್‌ಟಿ 81,778 ಕೋಟಿ ರೂ. (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ 37,297 ಕೋಟಿ ರೂ. ಸೇರಿ), ಸೆಸ್ 10,505 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 825 ಕೋಟಿ ರೂ. ಸೇರಿ) ಸೇರಿವೆ. ಇದು ಇಲ್ಲಿಯವರೆಗಿನ 2ನೇ ಅತಿ ಹೆಚ್ಚು ಎಂದು ಹಣಕಾಸು ಸಚಿವಾಲಯ ಅಧಿಕೃತವಾಗಿ ತಿಳಿಸಿದೆ.

ರಾಜ್ಯದ ತೆರಿಗೆ ಶೇ.33 ರಷ್ಟು ಹೆಚ್ಚಳ: ಕರ್ನಾಟಕದಲ್ಲಿ (Karnataka) ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.33 ರಷ್ಟು ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆಯಾಗಿದೆ. 10,996 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ 8,259 ಕೋಟಿ ರೂ. ಸಂಗ್ರಹವಾಗಿತ್ತು. ಇದನ್ನೂ ಓದಿ: ಆಗಸ್ಟ್‌ ಜಿಎಸ್‌ಟಿ ಶೇ.28 ಏರಿಕೆ – 1.43 ಲಕ್ಷ ಕೋಟಿ ರೂ.ನಲ್ಲಿ ಯಾವ ರಾಜ್ಯದ ಪಾಲು ಎಷ್ಟು?

ಇನ್ನೂ ರಾಜ್ಯಗಳ ಪೈಕಿ ಈ ಬಾರಿಯೂ ಮಹಾರಾಷ್ಟ್ರದಲ್ಲಿ (Maharashtra) ಅತ್ಯಂತ ಹೆಚ್ಚಿನ ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ವರ್ಷ 19,355 ಕೋಟಿ ರೂ. ಸಂಗ್ರಹವಾಗಿದ್ದ ಮಹಾರಾಷ್ಟ್ರಕ್ಕೆ 23,037 ಕೋಟಿ ಜಿಎಸ್‌ಟಿ ಹರಿದುಬಂದಿದ್ದು, ಕಳೆದ ವರ್ಷಕ್ಕಿಂತ ಶೇ.19 ರಷ್ಟು ಹೆಚ್ಚಾಗಿದೆ. ಗುಜರಾತ್ (Gujarat) 9,469 ಕೋಟಿ ರೂ., ತಮಿಳುನಾಡು (Tamil Nadu) 9,540 ಕೋಟಿ ರೂ., ಪಶ್ಚಿಮ ಬಂಗಾಳ (West Bengal) 5,367 ಕೋಟಿ ರೂ., ತೆಲಂಗಾಣಕ್ಕೆ 4,284 ಕೋಟಿ ರೂ., ಒಡಿಶಾಗೆ 3,769 ಕೋಟಿ ರೂ. ಹಾಗೂ ಆಂಧ್ರಪ್ರದೇಶದಲ್ಲಿ 3,579 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ.

Live Tv

Leave a Reply

Your email address will not be published. Required fields are marked *

Back to top button