– ಪೋಕ್ಸೋ ಕೇಸ್‌ನಲ್ಲಿ ಇಂದು ಕೋರ್ಟ್ ಆದೇಶ
ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ (Harihara Panchamasali Peetha) ವಚನಾನಂದ ಸ್ವಾಮೀಜಿ (Vachanananda Swamiji) ವಿರುದ್ಧದ ಪೋಕ್ಸೋ ಪ್ರಕರಣ (POCSO Case) ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಶ್ರೀಗಳ ಜಾಮೀನು ರದ್ದು ಕೋರಿ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಸಲ್ಲಿಸಿದ್ದ ಅರ್ಜಿಯ ಮಹತ್ವದ ತೀರ್ಪನ್ನು ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯ ಇಂದು ಪ್ರಕಟಿಸಲಿದೆ.
ಪೊಲೀಸರು ಈಗಾಗಲೇ 410 ಪುಟಗಳ ಬಲವಾದ ಚಾರ್ಜ್ ಶೀಟ್ ಸಲ್ಲಿಸಿದ್ದು, ಇಂದು ಕೋರ್ಟ್ ಏನಾದರೂ ಜಾಮೀನು ರದ್ದು ಮಾಡಿದರೆ ವಚನಾನಂದ ಶ್ರೀಗಳಿಗೆ ಜೈಲು ಫಿಕ್ಸ್ ಆಗಲಿದೆ. ಇದನ್ನೂ ಓದಿ: ಶಾಂತಿ ಒಪ್ಪಂದಕ್ಕೆ ಅಮೆರಿಕ – ಇರಾನ್ ಸಹಿ; ತಕ್ಷಣದಿಂದಲೇ ಹಾರ್ಮುಜ್ ಜಲಸಂಧಿ ಓಪನ್
ಹರಿಹರದ ಪಂಚಮಸಾಲಿ ಪೀಠದ ಜಟಾಪಟಿ ಕಳೆದ ಹಲವು ತಿಂಗಳಿಂದ ನಡೆಯುತ್ತಲೇ ಇದೆ. ಇದೇ ಸಮಯದಲ್ಲಿಯೇ ವಚನಾನಂದ ಸ್ವಾಮೀಜಿ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿತ್ತು. ಪಂಚಮಸಾಲಿ ಪೀಠದ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳ ಮೇಲೆ ಸ್ವಾಮೀಜಿ ಲೈಂಗಿಕ ದೌರ್ಜನ್ಯದ ಜೊತೆಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ, ಹರಿಹರ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಸ್ ದಾಖಲಾಗುವ ಮುನ್ನವೇ ವಚನಾನಂದ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆದು, ತನಿಖೆಗೆ ಸಹಕಾರ ಕೊಟ್ಟಿದ್ದರು. ಅಲ್ಲದೇ ನಿರೀಕ್ಷಣಾ ಜಾಮೀನು ರದ್ದುಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಮುಗಿದಿದ್ದು, ಇಂದು ಆದೇಶ ಪ್ರಕಟವಾಗಲಿದೆ. ಜೂನ್ 11ರಂದೇ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ಎರಡೂ ಕಡೆಯ ವಾದ ಪ್ರತಿವಾದವನ್ನು ಆಲಿಸಿದ್ದಾರೆ. ಇದನ್ನೂ ಓದಿ: ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಇಂದು ಚುನಾವಣೆ – ಕಾಂಗ್ರೆಸ್‌ನ 5ನೇ ಅಭ್ಯರ್ಥಿ ಗೆಲುವು ಸಾಧಿಸ್ತಾರಾ?
ಸಂತ್ರಸ್ತ ಬಾಲಕರ ಪರವಾಗಿ ವಾದ ಮಂಡನೆ ಮಾಡಿರುವ ಸರ್ಕಾರಿ ಅಭಿಯೋಜಕರಾದ ಬಸವರಾಜ್ ವಚನಾನಂದ ಸ್ವಾಮೀಜಿಗೆ ನೀಡಲಾಗಿರುವ ಜಾಮೀನನ್ನು ರದ್ದುಗೊಳಿಸಬೇಕು. ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದು. ಜಾಮೀನಿನ ಮೇಲೆ ಹೊರಗಿದ್ದರೆ ಸಂತ್ರಸ್ತರಿಗೆ ಬೆದರಿಕೆ ಹಾಗೂ ಅಮೀಷ ಒಡ್ಡುವ ಮೂಲಕ ಪ್ರಕರಣವನ್ನು ಹಾದಿ ತಪ್ಪಿಸುವ ಸಾಧ್ಯತೆ ಇದೆ ಎಂದು ವಾದ ಮಂಡನೆ ಮಾಡಿದ್ದು, ಜೊತೆಗೆ ಸಂತ್ರಸ್ತರ ತಾಯಿ ದೂರದಾರರಾಗಿದ್ದು, ಅವರಿಗೆ ಸ್ವಾಮೀಜಿ ಬೆಂಬಲಿಗರು ಬೆದರಿಕೆ ಕರೆ ಮಾಡಿರುವ ಆಡಿಯೋವನ್ನು ಪೆನ್ ಡ್ರೈವ್ ಮೂಲಕ ನ್ಯಾಯಾಲಯದ ಮುಂದೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಭಟ್ಕಳದಲ್ಲಿ ಮತ್ತೆ ಉದ್ವಿಗ್ನತೆ| ಹಿಂದೂ ಕಾರ್ಯಕರ್ತರ ವಿರುದ್ಧ ಕೇಸ್- ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ!
ಇತ್ತ ಸ್ವಾಮೀಜಿ ಪರ ವಕೀಲರಾದ ಎಸ್‌ವಿ ಪಾಟೀಲ್ ಕೂಡ ವಾದ ಮಂಡನೆ ಮಾಡಿದ್ದು, ವಚನಾನಂದ ಸ್ವಾಮೀಜಿಗಳನ್ನು ಮಠದಿಂದ ಹೊರ ಹಾಕಲು ಟ್ರಸ್ಟಿಗಳು ನಡೆಸಿದ ಷಡ್ಯಂತ್ರ ಇದು ಎಂದಿದ್ದಾರೆ. ಎರಡೂ ಕಡೆಯ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಇಂದಿಗೆ ಆದೇಶ ಕಾಯ್ದಿರಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಕೇಸ್ – ಎಸ್‌ಐಟಿಯಿಂದ 42 ಜನರ ವಿಚಾರಣೆ
ಇನ್ನು ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಹೈಕೋರ್ಟ್‌ಗೆ ಸಂತ್ರಸ್ತ ಬಾಲಕನ ತಾಯಿ ಅರ್ಜಿ ಸಲ್ಲಿಕೆ ಮಾಡಿದ್ದು, ಸ್ವಾಮೀಜಿ ವಿರುದ್ಧ ಗಂಭೀರ ಸೆಕ್ಷನ್‌ಗಳುಳ್ಳ ಪೋಕ್ಸೋ ಕೇಸ್ ದಾಖಲಾಗಿದೆ. ದೂರು ದಾಖಲಾಗುವ ಮುನ್ನವೇ ನಿರೀಕ್ಷಣಾ ಜಾಮೀನು ಕೊಟ್ಟಿದ್ದಾರೆ. ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಕೊಟ್ಟ ರೀತಿ ಆಘಾತಕಾರಿ, ಮೇಲ್ನೋಟಕ್ಕೆ ನಿರೀಕ್ಷಣಾ ಜಾಮೀನು ನೀಡಿದ ವಿಧಾನ ಸರಿಯಲ್ಲ ಎಂದು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ವಿಶೇಷ ಲೋಕ ಅದಾಲತ್ ಉತ್ತಮ ವೇದಿಕೆ – ಶಾಲಿನಿ ರಜನೀಶ್
ವಚನಾನಂದ ಸ್ವಾಮೀಜಿ ವಿರುದ್ದ ನ್ಯಾಯಾಲಯಕ್ಕೆ 410 ಪುಟಗಳಷ್ಟು ಚಾರ್ಜ್ ಶೀಟ್, 63 ಸಾಕ್ಷಾಧಾರಗಳನ್ನು ಕಲೆಹಾಕಿದ್ದು, ಇವು ಸ್ವಾಮೀಜಿಗೆ ಕಂಟಕವಾಗಲಿದೆ. ಇಂದು ಮಧ್ಯಾಹ್ನ ನ್ಯಾಯಾಧೀಶರು ನೀಡುವ ಆದೇಶದ ಮೇಲೆ ವಚನಾನಂದ ಸ್ವಾಮೀಜಿಗೆ ಜೈಲು ಅಥವಾ ಜಾಮೀನಿನ ಭವಿಷ್ಯ ನಿಂತಿದೆ. ಇದನ್ನೂ ಓದಿ: ಭಾರತಕ್ಕೂ ಬಂತು ವಾಟ್ಸಪ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಪ್ಲಸ್ – ತಿಂಗಳಿಗೆ ಎಷ್ಟು ದರ? ಏನು ವಿಶೇಷ ಫೀಚರ್ ಸಿಗುತ್ತೆ?
