ಲಕ್ನೋ: ಅಯೋಧ್ಯೆ (Ayodhya) ರಾಮಮಂದಿರ (Ram Mandir) ದೇಣಿಗೆ ಲೂಟಿ ಸಂಬಂಧ ಎಸ್‌ಐಟಿ (SIT) ತನಿಖೆ ತೀವ್ರಗೊಳಿಸಿದೆ. ಈವರೆಗೂ ಟ್ರಸ್ಟ್ ಪದಾಧಿಕಾರಿಗಳು, ಸಿಬ್ಬಂದಿ ಸೇರಿ 42 ಜನರನ್ನು ವಿಚಾರಣೆಗೆ ಒಳಪಡಿಸಿದೆ.
3ನೇ ದಿನವಾದ ಇವತ್ತು 2021ರಿಂದ ಈವರೆಗಿನ ದಾಖಲೆಗಳ ಪರಿಶೀಲನೆ ಮಾಡಿದೆ. ಜೊತೆಗೆ, ನೇಮಕಾತಿ ಪ್ರಕ್ರಿಯೆ, ದೇಣಿಗೆ ಸ್ವೀಕರಿಸುವ ಸಿಬ್ಬಂದಿಯ ಪೂರ್ವಾಪರ ವಿಚಾರಿಸಿ, ಹೊಣೆಗಾರಿಕೆಗಳ ಬಗ್ಗೆ ಪರಾಮರ್ಶಿಸಿದೆ. ಜೊತೆಗೆ, ದೇಣಿಗೆ ವಿಭಾಗದ ಮುಖ್ಯವಾಗಿ ಹಣ ಎಣಿಕೆ ಹಾಗೂ ಉಸ್ತುವಾರಿ ಸಿಬ್ಬಂದಿಯ ಹೇಳಿಕೆ ದಾಖಲಿಸಿಕೊಂಡಿದೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ವಿಶೇಷ ಲೋಕ ಅದಾಲತ್ ಉತ್ತಮ ವೇದಿಕೆ – ಶಾಲಿನಿ ರಜನೀಶ್
ಇನ್ನೂ, ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಪ್ರತಿಕ್ರಿಯಿಸಿ, ಎಸ್‌ಐಟಿ ತನಿಖೆಗೆ ಸಂಪೂರ್ಣ ಸಹಕಾರ ನೀಡ್ತೇವೆ. ಅಂದಹಾಗೆ, ಎಸ್‌ಐಟಿಯು 7 ದಿನಗಳ ಒಳಗೆ ಪ್ರಾಥಮಿಕ ವರದಿ ಹಾಗೂ 15 ದಿನಗಳ ಒಳಗೆ ಅಂತಿಮ ವರದಿಯನ್ನು ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಸಲ್ಲಿಸಬೇಕಿದೆ.
ಸೋಮವಾರ (ಜೂ.15) ಮಧ್ಯಾಹ್ನ 3 ಗಂಟೆಗೆ ಎಸ್‌ಐಟಿ ದೇವಾಲಯಕ್ಕೆ ಆಗಮಿಸಿ, ರಾತ್ರಿ 9 ಗಂಟೆಗೆ ಸುದೀರ್ಘ ವಿಚಾರಣೆ ನಡೆಸಿದೆ. ಈ ವೇಳೆ ರಾಮ ಮಂದಿರಕ್ಕೆ ಸಂಬಂಧಿಸಿದ 42 ಸಿಬ್ಬಂದಿಯನ್ನು ವಿಚಾರಣೆ ನಡೆಸಿದೆ. ಜೊತೆಗೆ ನಿರ್ಮಾಣ ಉಸ್ತುವಾರಿ ಗೋಪಾಲ್ ರಾವ್ ಅವರನ್ನು ಸಹ ವಿಚಾರಣೆ ನಡೆಸಿದೆ ಎಂದು ಮೂಲಗಳು ತಿಳಿಸಿದೆ. ಆನಂತರ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರೊಂದಿಗೆ ಸಂವಹನ ನಡೆಸಿ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡಿದೆ.ಇದನ್ನೂ ಓದಿ: ಅಫ್ಘಾನ್ ವಿರುದ್ಧ ಭಾರತಕ್ಕೆ 170 ರನ್‌ಗಳ ಭರ್ಜರಿ ಜಯ: ಸರಣಿ ಕೈವಶ ಮಾಡಿಕೊಂಡ ಗಿಲ್ ಪಡೆ!
ಇತ್ತೀಚಿಗಷ್ಟೇ ರಾಮಮಂದಿರ ನೌಕರನ ಮನೆಯಲ್ಲಿ 10 ಲಕ್ಷ ರೂ. ನಗದು ಪತ್ತೆಯಾಗಿದೆ. ಅಯೋಧ್ಯೆಯ ರುಡೌಲಿ ಪ್ರದೇಶದ ದೇವಾಲಯದ ಉದ್ಯೋಗಿಯೊಬ್ಬರ ನಿವಾಸದಿಂದ ಪೊಲೀಸರು 10 ಲಕ್ಷದಿಂದ 12 ಲಕ್ಷ ರೂ.ವರೆಗಿನ ಹಣವನ್ನು ವಶಪಡಿಸಿಕೊಂಡಿದ್ದರು.
ಏನಿದು ಪ್ರಕರಣ?
ರಾಮಮಂದಿರ ನಿರ್ಮಾಣದ ಸಂದರ್ಭದಲ್ಲಿ ಹಾಗೂ ಅದಾದ ಬಳಿಕ ದೇಣಿಗೆ ಲೂಟಿಯಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. 2021ರಲ್ಲಿ ರಾಮಮಂದಿರ ಟ್ರಸ್ಟ್ ಖರೀದಿಸಿದ ಭೂಮಿಯ ಬೆಲೆಯಲ್ಲಿ ಭಾರಿ ವ್ಯತ್ಯಾಸವಿದೆ, ಕೆಲವೇ ನಿಮಿಷಗಳಲ್ಲಿ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಳ್ಳಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಆದರೆ ಟ್ರಸ್ಟ್ ಈ ಆರೋಪವನ್ನು ತಳ್ಳಿಹಾಕಿ, ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿ ಬ್ಯಾಂಕ್ ಮುಖಾಂತರವೇ ನಡೆದಿವೆ ಮತ್ತು ಮಾರುಕಟ್ಟೆ ದರದಲ್ಲೇ ಭೂಮಿ ಖರೀದಿಸಲಾಗಿದೆ ಎಂದು ಸ್ಪಷ್ಟನೆ ನೀಡಿತ್ತು.
ಆನಂತರ ರಾಮಮಂದಿರದ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಲೂಟಿ ಮಾಡಲು ಕೆಲವು ಸೈಬರ್ ವಂಚಕರು ನಕಲಿ ವೆಬ್‌ಸೈಟ್‌ಗಳು, ನಕಲಿ ಕ್ಯೂಆರ್ ಕೋಡ್ ಮತ್ತು ನಕಲಿ ಟ್ರಸ್ಟ್ ಖಾತೆಗಳನ್ನು ಸೃಷ್ಟಿಸಿದ್ದರು. ಈ ಮೂಲಕ ಮುಗ್ಧ ಭಕ್ತರಿಂದ ಹಣ ವಸೂಲಿ ಮಾಡಲಾಗುತ್ತಿತ್ತು. ಇದರ ವಿರುದ್ಧ ಅಯೋಧ್ಯೆ ಪೊಲೀಸರು ಮತ್ತು ಸೈಬರ್ ಕ್ರೈಂ ವಿಭಾಗದವರು ಪ್ರಕರಣ ದಾಖಲಿಸಿಕೊಂಡು, ಹಲವು ವಂಚಕರನ್ನು ಈಗಾಗಲೇ ಬಂಧಿಸಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತನಗೆ ಬಂದಿರುವ ಪ್ರತಿಯೊಂದು ರೂಪಾಯಿ ದೇಣಿಗೆಗೂ ಲೆಕ್ಕಪತ್ರವನ್ನು ಇಟ್ಟಿದ್ದು, ಯಾವುದೇ ಅಧಿಕೃತ ದೇಣಿಗೆ ಲೂಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.ಇದನ್ನೂ ಓದಿ: ಭಾರತಕ್ಕೂ ಬಂತು ವಾಟ್ಸಪ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಪ್ಲಸ್ – ತಿಂಗಳಿಗೆ ಎಷ್ಟು ದರ? ಏನು ವಿಶೇಷ ಫೀಚರ್ ಸಿಗುತ್ತೆ?
