– ಇದು ಅಮೆರಿಕದ ವೈಫಲ್ಯ ತೋರಿಸುತ್ತೆ – ಒಪ್ಪಂದದ ಬಳಿಕವೂ ಕೆಣಕಿದ ಇರಾನ್
ವಾಷಿಂಗ್ಟನ್/ಪ್ಯಾರಿಸ್: ಮಧ್ಯಪ್ರಾಚ್ಯದಲ್ಲಿ ಯುದ್ಧ ಕೊನೆಗೊಳಿಸಲು ಕೆಲ ದಿನಗಳಿಂದ ನಡೆಯುತ್ತಿದ್ದ ಸಂಧಾನ ಮಾತುಕತೆ ಕೊನೆಗೂ ಫಲ ನೀಡಿದೆ. ಅಮೆರಿಕ ಮತ್ತು ಇರಾನ್ ಮೂರು ತಿಂಗಳಿಗೂ ಹೆಚ್ಚು ಕಾಲ (108 ದಿನ) ನಡೆದ ಸಂಘರ್ಷ ಕೊನೆಗೊಳಿಸಲು ಶಾಂತಿ ಒಪ್ಪಂದಕ್ಕೆ (US Iran Peace Deal) ಸಹಿ ಹಾಕಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಖಚಿತಪಡಿಸಿದ್ದಾರೆ.
Le Président Trump a signé ce soir à Versailles l’accord entre l’Iran et les États-Unis.
Cet accord ouvre la voie à une paix durable et permet la réouverture du détroit d’Ormuz.
C’est un pas important dans la bonne direction pour nos compatriotes… pic.twitter.com/b1XgZrBv0m
— Emmanuel Macron (@EmmanuelMacron) June 18, 2026
ಈ ಒಪ್ಪಂದಕ್ಕೆ ಟ್ರಂಪ್ ಮತ್ತು ಇರಾನಿನ (Iran) ಪ್ರತಿನಿಧಿಯಾಗಿ ಮಸೌದ್ ಪೆಜೆಶ್ಕಿಯಾನ್ ಡಿಜಿಟಲ್ ಮೂಲಕ ಸಹಿ ಹಾಕಿದ್ದಾರೆ. ಇದನ್ನೂ ಓದಿ: ಮೋದಿ ಶಾಂತ, ಸಂಯಮಶೀಲ, ಒಬ್ಬ ಪಕ್ಕಾ ಕಿಲ್ಲರ್: ಟ್ರಂಪ್ ಹೊಗಳಿಕೆ

ಅಮೆರಿಕದ ಅಧಿಕಾರಿಯೊಬ್ಬರ ಪ್ರಕಾರ, ಅಧ್ಯಕ್ಷ ಟ್ರಂಪ್ ಫ್ರಾನ್ಸ್‌ನ ವರ್ಸೈಲ್ಸ್ (Versailles) ಅರಮನೆಯಲ್ಲಿ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಜೊತೆಗಿನ ಔತಣ ಕೂಟದ ವೇಳೆ ಅಮೆರಿಕ-ಇರಾನ್ ಒಪ್ಪಂದದ ಮುದ್ರಿತ ಪ್ರತಿಗೆ ಅಧಿಕೃತವಾಗಿ ಸಹಿ ಹಾಕಿದರು. ಸಹಿ ಮಾಡಿದ ಒಪ್ಪಂದದ ಪ್ರತಿಗಳನ್ನ ಇರಾನ್ ಮತ್ತು ಮಧ್ಯಸ್ಥಿಕೆ ವಹಿಸುವ ದೇಶಗಳಿಗೆ ಕಳುಹಿಸಲಾಗಿದೆ.
ನಿಗದಿತ ಸಮಯದ ಪ್ರಕಾರ ನಾಳೆ (ಶುಕ್ರವಾರ) ಜಿನೇವಾದಲ್ಲಿ ಒಪ್ಪಂದಕ್ಕೆ ಸಹಿ ಮಾಡಲು ದಿನಾಂಕ ನಿಗದಿಪಡಿಸಲಾಗಿತ್ತು. ಆದ್ರೆ ಒಂದು ದಿನ ಮೊದಲೇ ಒಪ್ಪಂದಕ್ಕೆ ಸಹಿ ಮಾಡಿರುವುದು ಗಮನಾರ್ಹವಾಗಿದೆ. ಇದನ್ನೂ ಓದಿ: PublicTV Explainer: ಸೊಳ್ಳೆ ಗಾತ್ರದ ಡ್ರೋನ್ ಸೃಷ್ಟಿಸಿದ ಚೀನಾ – ಮಿಲಿಟರಿ ಕಣ್ಗಾವಲಿನಲ್ಲಿ ಹೊಸ ಮೈಲಿಗಲ್ಲು

ಇರಾನ್ ಕೂಡ ಒಪ್ಪಂದಕ್ಕೆ ಸಹಿ ಮಾಡಿರುವುದಾಗಿ ದೃಢಪಡಿಸಿದೆ. ಆದಾಗ್ಯೂ ಇದು ಅಮೆರಿಕದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದೆ. ಈಗ ಒಪ್ಪಂದದಲ್ಲಿ ಪ್ರಸ್ತಾಪಿಸಲಾದ ಅಂಶಗಳನ್ನ ಜಾರಿಗೆ ತರಬೇಕಿರುವುದು ನಿಜವಾದ ಅಗ್ನಿಪರೀಕ್ಷೆಯಾಗಿದೆ. ಒಪ್ಪಂದದ ಎಲ್ಲಾ ಅಂತಿಮ ನಿಯಮಗಳ ಮಾತುಕತೆ ನಡೆಸಲು ಇನ್ನೂ 60 ದಿನಗಳು ಬೇಕಾಗುತ್ತದೆ ಎಂದು ತಿಳಿಸಿದೆ.
ಒಟ್ಟಿನಲ್ಲಿ ಇರಾನ್ ಮತ್ತು ಅಮೆರಿಕ ಯುದ್ಧಕೊನೆಗೊಳಿಸುವ ಒಪ್ಪಂದಕ್ಕೆ ಸಹಿ ಮಾಡಿದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿಯನ್ನ ತೆರೆಯಲಾಗಿದೆ. ಹಾಗಾಗಿ ಹಲವು ದಿನಗಳಿಂದ ತೈಲ ಹೊತ್ತು ನಿಂತಿದ್ದ ಹಡಗುಗಳು ಪ್ರಯಾಣ ಶುರು ಮಾಡಿವೆ ಎಂದು ವರದಿಗಳು ತಿಳಿಸಿವೆ.
