ಚೆನ್ನೈ: ವಿಶ್ವದ ಟಾಪ್ 10 ಅತ್ಯುತ್ತಮ ಕಾರ್ಯಕ್ಷಮತೆಯ ಪಟ್ಟಿಯಲ್ಲಿ ಸೇರಿಕೊಂಡ ಏಕೈಕ ಭಾರತೀಯ ವಿಮಾನ ನಿಲ್ದಾಣವಾಗಿ ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಸ ದಾಖಲೆ ನಿರ್ಮಿಸಿದೆ.
ಪ್ರಯಾಣ, ಹಣಕಾಸು, ಏರೋಸ್ಪೇಸ್ ಹಾಗೂ ವಾಯುಯಾನ ಉದ್ಯಮಕ್ಕೆ 2021ರ ಜಾಗತಿಕ ಕಾರ್ಯಕ್ಷಮತೆಯ ವಿಮಾನ ನಿಲ್ದಾಣವೆಂದು ಚೆನ್ನೈನ ವಿಮಾನ ನಿಲ್ದಾಣ ಟಾಪ್ 10ರ ಪಟ್ಟಿಗೆ ಸೇರಿದೆ. ಅಮೆರಿಕಾದ ಮಿಯಾಮಿ ವಿಮಾನ ನಿಲ್ದಾಣ, ಫುಕುವೋ ವಿಮಾನ ನಿಲ್ದಾಣ ಹಾಗೂ ಜಪಾನ್‌ನ ಹನೆಡಾ ವಿಮಾನ ನಿಲ್ದಾಣ ವಿಶ್ವದ ಅಗ್ರ ಮೂರು ವಿಮಾನ ನಿಲ್ದಾಣಗಳಾಗಿವೆ. ಇದನ್ನೂ ಓದಿ: ಹುಟ್ಟೂರಿಗೆ ನೆರವಾದ ಸೋನು ಸೂದ್-1,000 ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ
Advertisement
Advertisement
ಸಿರಿಯಮ್ ಜಾಗತಿಕವಾಗಿ ವಿಶ್ಲೇಶಿಸಿದಾಗ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶೇ.89.32ರಷ್ಟು ಅತ್ಯುತ್ತಮ ಸಮಯೋಚಿತ ಕಾರ್ಯಕ್ಷಮತೆಯ ಫಲಿತಾಂಶ ನೀಡಿದೆ. ಹೀಗೆ ಚೆನ್ನೈನ ವಿಮಾನ ನಿಲ್ದಾಣ ವಿಶ್ವದ 10 ಅತ್ಯುತ್ತಮ ಕಾರ್ಯಕ್ಷಮತೆಯ ಪಟ್ಟಿಯಲ್ಲಿ ಸೇರಿಕೊಂಡಿದೆ. ಇದನ್ನೂ ಓದಿ: ನೂತನ ದಾಖಲೆ ಬರೆದ ಭಾರತ ಮೂಲದ ಹರ್‌ಪ್ರೀತ್ ಚಂಡಿ