ನೆಲಮಂಗಲ: ಕೆಲಸ ಮಗಿಸಿ ವಾಪಸ್ ಆಗುವಾಗ ಸಂಭವಿಸಿದ ಅಪಘಾತದಲ್ಲಿ ಯುವಕ ಸಾವನ್ನಪ್ಪಿದ ಘಟನೆ ಬೆಂಗಳೂರು ಉತ್ತರ (Bengaluru North) ತಾಲೂಕಿನ ಲಕ್ಕೆನಹಳ್ಳಿಯಲ್ಲಿ ನಡೆದಿದೆ.
ನೆಲಮಂಗಲ (Nelamangala) ತಾಲೂಕಿನ ಬಾಣಸವಾಡಿ ನಿವಾಸಿ ನರಸಿಂಹ ಮೂರ್ತಿ (27) ಮೃತ ಯುವಕ. ಮಾಕಳಿಯಲ್ಲಿನ ವೇರ್ ಹೌಸ್‌ನಲ್ಲಿ ಕೆಲಸ ಮುಗಿಸಿ ಬೈಕ್‌ನಲ್ಲಿ ವಾಪಸ್ ಆಗುವಾಗ ಈ ಅಪಘಾತ ಸಂಭವಿಸಿದೆ. ಹಿಟ್ ಅಂಡ್ ರನ್‌ಗೆ (Hit And Run) ಯುವಕ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಅಂತ್ಯಕ್ರಿಯೆ ಮುಗಿಸಿ ವಾಪಸ್ ಆಗ್ತಿದ್ದಾಗ ಗೂಡ್ಸ್ ವಾಹನ ಪಲ್ಟಿ – 30 ಜನರಿಗೆ ಗಾಯ
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಸಂಬಂಧ ಚಿಕ್ಕಬಾಣಾವರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಹೆತ್ತ ಮಗಳನ್ನೇ ಕೊಂದ ತಾಯಿ – 3 ತಿಂಗಳ ಬಳಿಕ ಕೊಲೆ ಕೇಸ್ ದಾಖಲು
