ಬೀದರ್: ಕೋರ್ಟ್ ವಿಚಾರಣೆಗೆ ಗೈರಾದ ಹಿನ್ನೆಲೆ ಬಿಜೆಪಿ (BJP) ಬಸವಕಲ್ಯಾಣ (Basava Kalyana) ಶಾಸಕ ಶರಣು ಸಲಗರ್‌ಗೆ (Sharanu Salagar) ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.
ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್‌ಗೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಅಕ್ರಮವಾಗಿ ಗೋಹತ್ಯೆ ಆರೋಪ ಪ್ರಕರಣವನ್ನು ತನಿಖೆ ನಡೆಸಿದ ಪೊಲೀಸರು ಈಗಾಗಲೇ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಸಂಬಂಧ ನಡೆಯಬೇಕಿದ್ದ ಸಾಕ್ಷ್ಯ ವಿಚಾರಣೆಗೆ ಶಾಸಕ ಸಲಗರ್ ಗೈರಾಗಿದ್ದು, ಈ ಹಿನ್ನೆಲೆ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್‌ನಿಂದ ವಾರಂಟ್ ಜಾರಿಯಾಗಿದೆ. ಇದನ್ನೂ ಓದಿ: ಅಂತ್ಯಕ್ರಿಯೆ ಮುಗಿಸಿ ವಾಪಸ್ ಆಗ್ತಿದ್ದಾಗ ಗೂಡ್ಸ್ ವಾಹನ ಪಲ್ಟಿ – 30 ಜನರಿಗೆ ಗಾಯ
2023ರ ಜು.1ರಂದು ಬಕ್ರೀದ್ ಹಬ್ಬದ ವೇಳೆ ಅಕ್ರಮವಾಗಿ ಗೋಹತ್ಯೆ ಮಾಡಿದ್ದಾರೆಂದು ಆರೋಪಿಸಿ, ಗಲಾಟೆ ಮಾಡಿದ್ದರು. ಮುಸ್ಲಿಂ ಸಮುದಾಯದ ಮನೆಯೊಂದಕ್ಕೆ ಹೋಗಿ ಗೋಹತ್ಯೆ ತಡೆದಾಗ ಗಲಾಟೆ ಶುರುವಾಗಿತ್ತು.
