ಬೆಂಗಳೂರು: ಕುಡಿಯಲು ನೀರು (Drinking Water) ಕೊಡಲ್ಲ ಎಂದಿದ್ದಕ್ಕೆ ಚಾಕು ಇರಿದು ಲಾರಿ ಕ್ಲೀನರ್ (Lorry Cleaner) ಹತ್ಯೆ ಮಾಡಿರುವ ಘಟನೆ ಆರ್‌ಎಂಸಿ ಯಾರ್ಡ್‌ನ (RMC Yard) ಫ್ಯಾಕ್ಟರಿಯೊಂದರ ಬಳಿ ನಡೆದಿದೆ.
ಆಂಧ್ರ ಮೂಲದ ಬರ್ಕತ್ ಕೊಲೆಯಾದ ದುರ್ದೈವಿ. ಮಧುಗಿರಿ ಮೂಲದ ಸೀನಪ್ಪ ಬಂಧಿತ ಆರೋಪಿ. ಬರ್ಕತ್ ಹಾಗೂ ಸೀನಪ್ಪ ಇಬ್ಬರೂ ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಊಟದ ಬಳಿಕ ಬರ್ಕತ್ ಬಳಿ ಸೀನಪ್ಪ ನೀರು ಕೇಳಿದ್ದಾನೆ. ಈ ವೇಳೆ ಬರ್ಕತ್ ನೀರು ಕೊಡಲ್ಲ ಎಂದಾಗ ಗಲಾಟೆ ನಡೆದಿದೆ. ಇದನ್ನೂ ಓದಿ: ಕೋಲ್ಕತ್ತಾ ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ – ಮಗು ಸೇರಿ 9 ಮಂದಿ ದುರ್ಮರಣ
ಗಲಾಟೆ ವೇಳೆ ಸೀನಪ್ಪ ಚಾಕುವಿನಿಂದ ಹಲ್ಲೆ ಮಾಡಿ ಬರ್ಕತ್‌ನ ಹತ್ಯೆ ಮಾಡಿದ್ದಾನೆ. ಕೊಲೆ ಬಳಿಕ ಆರೋಪಿ ಸೀನಪ್ಪ ಎಸ್ಕೇಪ್ ಆಗಿದ್ದಾನೆ. ನಂತರ ಲಾರಿ ಡ್ರೈವರ್‌ಗಳ ಮಾಹಿತಿ ಮೇರೆಗೆ ಕೇಸ್ ದಾಖಲಿಸಿದ ಆರ್‌ಎಂಸಿ ಯಾರ್ಡ್ ಪೊಲೀಸು ಆರೋಪಿ ಸೀನಪ್ಪನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿ | ತುಂಗಭದ್ರಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಮೂವರು ನಾಪತ್ತೆ

