– ಮುಂದಿನ ಚುನಾವಣೆ ಗುರಿಯಾಗಿಸಿಕೊಂಡು ಇಡಿ ದಾಳಿ
ಮಂಡ್ಯ: ಕೆಆರ್‌ಎಸ್ (KRS) ಜಲಾಶಯದಿಂದ ಪ್ರಸ್ತುತ 8 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಯುತ್ತಿದ್ದರೂ, 6 ಸಾವಿರ ಕ್ಯೂಸೆಕ್ ಕೂಡ ಬಿಡುತ್ತಿಲ್ಲ ಎಂದು ಹೇಳುವ ಮೂಲಕ ಜಲವಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ (Cauvery Water) ನೀರು ಬಿಡುಗಡೆಯನ್ನು ಸಮರ್ಥಿಸಿಕೊಳ್ಳುವ ಬರದಲ್ಲಿ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಇರುವುದರಿಂದ ಲೀಗಲ್ ಟೀಮ್ ನೀರು ಬಿಡುವಂತೆ ಸೂಚಿಸಿದೆ. ನ್ಯಾಯಾಲಯದ ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂಬ ಕಾರಣಕ್ಕೆ ನೀರು ಹರಿಸಲಾಗುತ್ತಿದೆ. ಆದೇಶ ಬಂದ ದಿನ ಕೇವಲ 2 ಸಾವಿರ ಕ್ಯೂಸೆಕ್ ನೀರು ಹೋಗುತ್ತಿತ್ತು. ನಾನು ಅಧಿಕಾರಿಗಳಿಗೆ 6 ಸಾವಿರ ಕ್ಯೂಸೆಕ್‌ಗಿಂತ ಕಡಿಮೆ ಬಿಡುವಂತೆ ಸೂಚಿಸಿದ್ದೆ. ಸದ್ಯ 6 ಸಾವಿರ ಕ್ಯೂಸೆಕ್ ಕೂಡ ಹೋಗುತ್ತಿಲ್ಲ ಎನಿಸುತ್ತದೆ ಎಂದು ಸಚಿವರು ವಾದಿಸಿದ್ದಾರೆ. ಜಲಾಶಯದಿಂದ ಈಗಾಗಲೇ 8 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ ಎಂದು ಮಾಧ್ಯಮಗಳು ಗಮನಕ್ಕೆ ತಂದಾಗ, 8 ಸಾವಿರ ಕ್ಯೂಸೆಕ್ ಹೋಗುತ್ತಿರುವುದು ನನಗೆ ಗೊತ್ತಿಲ್ಲ, ಈಗಲೇ ಚೆಕ್ ಮಾಡುತ್ತೇನೆ ಎಂದು ಜಾರಿಕೊಂಡಿದ್ದಾರೆ.
ಒಂದೆಡೆ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯ ನಡುವೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದಕ್ಕೆ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೇ ಡ್ಯಾಂನಿಂದ ಹೊರಹೋಗುತ್ತಿರುವ ನೀರಿನ ನಿಖರ ಲೆಕ್ಕವಿಲ್ಲದೆ ಹೇಳಿಕೆ ನೀಡಿರುವುದು ರೈತರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.ಇದನ್ನೂ ಓದಿ: BRICS | ʻಹಾರ್ಮುಜ್ʼ ಬಗ್ಗೆ ಮೋದಿ ಕಳವಳ – ಸಮುದ್ರ ಮಾರ್ಗಗಳು ಸುರಕ್ಷಿತವಾಗಿದ್ರೆ ಮಾತ್ರ ಜಾಗತಿಕ ವ್ಯಾಪಾರ ಸಾಧ್ಯ: ಮೋದಿ
ಮುಂದಿನ ಚುನಾವಣೆ ಗುರಿಯಾಗಿಸಿಕೊಂಡು ಇಡಿ ದಾಳಿ
ಜಾರಕಿಹೋಳಿ ಕುಟುಂಬದ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ಕುರಿತು ಸಚಿವರು ಪ್ರತಿಕ್ರಿಯಿಸಿ, ಮುಂದಿನ ಚುನಾವಣೆ ಗುರಿಯಾಗಿಸಿಕೊಂಡು ಕಾಂಗ್ರೆಸ್ ಮೇಲೆ ಇಡಿ ದಾಳಿ ಆಗುತ್ತಿದೆ. ಇಡಿ ಒಂದು ಸಂಸ್ಥೆ ರಾಜಕೀಯವಾಗಿ ಪ್ರೇರಣೆಯೋ ಏನೋ ಗೊತ್ತಿಲ್ಲ. ಕಾಂಗ್ರೆಸ್ ಆಡಳಿತ ಇದ್ದ ರಾಜ್ಯದಲ್ಲಿ ಈ ದಾಳಿ ನಡೆಯುತ್ತಿದೆ. ಮುಂದೆ ಚುನಾವಣೆ ಇದೆ ಅದಕ್ಕೆ ಈ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.ಇದನ್ನೂ ಓದಿ: ಬ್ರಿಕ್ಸ್ ಬಲಪಡಿಸಲು ಪ್ರಧಾನಿ ಮೋದಿ ಶ್ರಮ – ಇರಾನ್ ಅಧ್ಯಕ್ಷ ಮೆಚ್ಚುಗೆ; ಅಮೆರಿಕ, ಇಸ್ರೇಲ್ ಮಿಲಿಟರಿ ಆಕ್ರಮಣಕ್ಕೆ ಖಂಡನೆ

