– ಜಾಗತಿಕ ಜಿಡಿಪಿಯಲ್ಲಿ ಬ್ರಿಕ್ಸ್ ಪಾಲು ಶೇ. 40, ಜಿ7 ಕೇವಲ ಶೇ. 29
– ಅಮೆರಿಕ, ಯುರೋಪ್ ವಿರುದ್ಧ ಪರೋಕ್ಷ ಆಕ್ರೋಶ
ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್(Vladimir Putin) ಅವರು ಜಗತ್ತಿಗೆ ಬ್ರಿಕ್ಸ್ ಕೊಡುಗೆಯನ್ನು ಉಲ್ಲೇಖಿಸಿ ಭಾರತದ ಮಹೀಂದ್ರಾ(Mahindra) ಕಂಪನಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬ್ರಿಕ್ಸ್(BRICS) ಬಿಸಿನೆಸ್ ಫೋರಂ ಅನ್ನುದ್ದೇಶಿಸಿ ಮಾತನಾಡಿದ ಪುಟಿನ್, ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಪಾಲು ಬ್ರಿಕ್ಸ್ ದೇಶಗಳಲ್ಲಿದೆ. ಈ ಕಾರಣದಿಂದಾಗಿಯೇ ಅವುಗಳು ಅತ್ಯಂತ ಕ್ರಿಯಾತ್ಮಕ ಆಂತರಿಕ ಮಾರುಕಟ್ಟೆಗಳನ್ನು ಹೊಂದಿವೆ. ನಮ್ಮ ದೇಶಗಳಲ್ಲಿ ನಗರ ಪ್ರದೇಶಗಳ ಬೆಳವಣಿಗೆಯ ಭಾರಿ ಏರಿಕೆ ಕಂಡುಬರುತ್ತಿದೆ. ನಗರೀಕರಣವು ಅತ್ಯಂತ ವೇಗವಾಗಿ ನಡೆಯುತ್ತಿದ್ದು, ರಾಷ್ಟ್ರೀಯ ಕಂಪನಿಗಳು ಮುಂಚೂಣಿಗೆ ಬರುತ್ತಾ ಜಾಗತಿಕ ಮಟ್ಟದ ನಾಯಕರಾಗಿ ಹೊರಹೊಮ್ಮುತ್ತಿವೆ ಎಂದು ತಿಳಿಸಿದರು.
ಭಾರತದ ಮಹೀಂದ್ರಾ ಕಂಪನಿಯು ಐಟಿ (IT) ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ಪರಿಹಾರಗಳನ್ನು ಒದಗಿಸುತ್ತಿದೆ. ಚೀನಾದ ಹುವಾವೇ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧ ತಂತ್ರಜ್ಞಾನ ದೈತ್ಯವಾಗಿದೆ. ಬ್ರೆಜಿಲ್‌ನ ಎಂಬ್ರೇರ್ ಸಂಸ್ಥೆಯು ಏರೋಸ್ಪೇಸ್ ಉದ್ಯಮದಲ್ಲಿ ಪ್ರಬಲ ಸ್ಥಾನ ಪಡೆದಿದೆ. ಯುಎಇಯ ಡಿಪಿಒ ಸಂಸ್ಥೆಯು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ರಷ್ಯಾದ ರೊಸಾಟೊಮ್ ಸಂಸ್ಥೆಯು ಶಾಂತಿಯುತ ಪರಮಾಣು ಶಕ್ತಿ ಬಳಕೆಯಲ್ಲಿ ವಿಶ್ವದ ಅಗ್ರಮಾನ್ಯ ನಂಬರ್ ಒನ್ ಕಂಪನಿಯಾಗಿ ಗುರುತಿಸಿಕೊಂಡಿದೆ. ನಮ್ಮ ವ್ಯಾಪಾರ ಸಮುದಾಯದಿಂದ ಇಂತಹ ಇನ್ನೂ ಅನೇಕ ಯಶಸ್ಸಿನ ಕಥೆಗಳಿವೆ, ಆದರೆ ಈ ಪ್ರತಿಯೊಂದರ ಹಿಂದೆಯೂ ದಿನನಿತ್ಯದ ಕಠಿಣ ಪರಿಶ್ರಮವಿದೆ ಎಂದು ಹೇಳಿದರು.
#WATCH | Putin Takes A Dig At G7, Hails Mahindra As BRICS Success Story
Russian President Vladimir Putin, speaking at the BRICS Business Forum in New Delhi, takes a swipe at the G7, saying BRICS countries accounted for more than half of global economic growth, compared with 18%… pic.twitter.com/7XFfaUx7Ur
— ET NOW (@ETNOWlive) September 11, 2026
ಕಳೆದ ಐದು ವರ್ಷಗಳಲ್ಲಿ, ವಿಶ್ವದ ಜಿಡಿಪಿಯ ಶೇ.40 ಕ್ಕಿಂತ ಹೆಚ್ಚು ಬ್ರಿಕ್ಸ್ ದೇಶಗಳಿಂದ ಉತ್ಪಾದಿಸಲ್ಪಟ್ಟಿದೆ. ಆದರೆ ಜಿ7 ರಾಷ್ಟ್ರಗಳ ಕೊಡುಗೆ ಕೇವಲ ಶೇ. 29 ರಷ್ಟಿದೆ. ಅವರನ್ನು ಏಕೆ ಗ್ರೂಪ್ ಆಫ್ ಸೆವೆನ್ ಎಂದು ಕರೆಯುತ್ತಾರೆ ಎಂಬುದು ನನಗೆ ತಿಳಿದಿಲ್ಲ ಎಂದು ಹೇಳುವ ಮೂಲಕ ಪುಟಿನ್ ವ್ಯಂಗ್ಯವಾಡಿದರು. ಇದನ್ನೂ ಓದಿ: ಭಾರತದಲ್ಲಿ ಹೂಡಿಕೆ ಮಾಡಿ, ಲಾಭ ಪಡೆಯಿರಿ – ಬ್ರಿಕ್ಸ್ ರಾಷ್ಟ್ರಗಳಿಗೆ ಮೋದಿ ಆಹ್ವಾನ
VIDEO | BRICS Business Forum: Russian President Vladimir Putin says, “…We have been told for quite some time that competition is the sacred sign not to be touched by our Western competitors, who are doing everything to get rid of that best competitive edge, and sometimes this… pic.twitter.com/PGy5jqYCUx
— Press Trust of India (@PTI_News) September 11, 2026
ನಮ್ಮ ಪಾಶ್ಚಿಮಾತ್ಯ ಪ್ರತಿಸ್ಪರ್ಧಿಗಳು ನಮಲ್ಲಿರುವ ಅತ್ಯುತ್ತಮ ಸ್ಪರ್ಧಾತ್ಮಕ ಶಕ್ತಿಯನ್ನು ನಾಶಮಾಡಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕೆಲವೊಮ್ಮೆ ಈ ಸ್ಪರ್ಧೆಯು ಅತ್ಯಂತ ವಿಕೃತ ರೂಪಗಳನ್ನು ಪಡೆದುಕೊಳ್ಳುತ್ತಿದೆ. ಕೆಲವೊಮ್ಮೆ ಪೈಪ್‌ಲೈನ್‌ಗಳನ್ನು ನಾಶಪಡಿಸುವುದು, ಅಂತರರಾಷ್ಟ್ರೀಯ ಸಾರಿಗೆ ಕಾರಿಡಾರ್‌ಗಳನ್ನು ನಿರ್ಬಂಧಿಸಲು ಯತ್ನಿಸುವುದು, ಸರಕು ಹಡಗುಗಳನ್ನು ವಶಪಡಿಸಿಕೊಳ್ಳುವುದು ಮತ್ತು ಇತರ ಕಾನೂನುಬಾಹಿರ ನಿರ್ಬಂಧಗಳನ್ನು ಹೇರುವಂತಹ ಭೌತಿಕ ಹಾನಿಯ ಕ್ರಮಗಳಿಗೆ ಇಳಿಯಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
VIDEO | BRICS Business Forum: Russian President Vladimir Putin says, “…The world is always changing, and this is attested to by the objective facts of the last five years. And I think these statistics have already been cited by our colleague from Indonesia. Over the last five… pic.twitter.com/UZkKgGfH89
— Press Trust of India (@PTI_News) September 11, 2026
ಬೇರೆಯವರ ಹಿತಾಸಕ್ತಿಗಳ ಹಿಂದೆ ಹೋಗದೆ ತಮ್ಮ ಸ್ವಂತ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಬಯಸುವವರ ಮೇಲೆ ಸೆಕೆಂಡರಿ ನಿರ್ಬಂಧ (Secondary Sanctions) ಹೇರುವ ಬೆದರಿಕೆಯೂ ಇದೆ. ಇದನ್ನು ಬೆಂಬಲಿಸಲು ನನ್ನ ಸಹೋದ್ಯೋಗಿಗಳು ನೂರಾರು ಉದಾಹರಣೆಗಳನ್ನು ನೀಡಬಲ್ಲರು ಎಂದು ನನಗೆ ತಿಳಿದಿದೆ. ರಷ್ಯಾದ ಮೇಲೆ ಬರೋಬ್ಬರಿ 30,000ಕ್ಕೂ ಹೆಚ್ಚು ನಿರ್ಬಂಧಗಳನ್ನು ವಿಧಿಸಲಾಗಿದೆ. ಇದು ವಿಶ್ವದ ಉಳಿದೆಲ್ಲ ದೇಶಗಳ ಮೇಲೆ ಹೇರಲಾದ ಒಟ್ಟು ನಿರ್ಬಂಧಗಳ ಸಂಖ್ಯೆಗಿಂತ ಎರಡರಷ್ಟಿದೆ. ನಾವು ಯಾರ ವಿರುದ್ಧವೂ ಇಲ್ಲ, ನಾವು ಮಾಡುತ್ತಿರುವ ಕೆಲಸವೂ ಯಾರ ವಿರುದ್ಧವೂ ಅಲ್ಲ. ನಾವು ನಮ್ಮ ಹಿತಾಸಕ್ತಿಗಳ ಪರವಾಗಿದ್ದೇವೆ ಮತ್ತು ನಮ್ಮ ಹಳೆಯ ಹಾಗೂ ಹೊಸ ಎಲ್ಲ ಪಾಲುದಾರರೊಂದಿಗೆ ಒಟ್ಟಾಗಿ ಕೆಲಸ ಮಾಡಲು ಸದಾ ಸಿದ್ಧರಿದ್ದೇವೆ. ಇಡೀ ವಿಶ್ವದೊಂದಿಗೆ ಕೆಲಸ ಮಾಡಲು ನಾವು ಸದಾ ಮುಕ್ತವಾಗಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: BRICS Summit – ಮೋದಿ-ಪುಟಿನ್ 4ನೇ ಬಾರಿ ಜಂಟಿ ಕಾರು ಪ್ರಯಾಣ

