ಕೋಲಾರ: ಅಂತಾರಾಷ್ಟ್ರೀಯ ಐಐಎಸ್ಎಫ್ (IISF) ಕ್ರೀಡಾಕೂಟದ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನ ಕೋಲಾರದ ಕುವರಿ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕೋಲಾರ (Kolar) ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್ ಗ್ರಾಮದ ದಿವ್ಯಾ ಈ ಸಾಧನೆ ಮಾಡಿದ್ದಾರೆ. ದಿವ್ಯಾ ಶೂಟಿಂಗ್ ಕ್ರೀಡಾಪಟುವಾಗಿದ್ದು, ತಾಡಿಗೊಳ್ ಸುಬ್ಬರಾಜು ಎಂಬುವವರ ಮಗಳು. ಕತಾರ್ ದೇಶದ ದೋಹಾದಲ್ಲಿ ನಡೆಯುತ್ತಿರುವ ಕ್ರೀಡಾಕೂಟದ 2026ನೇ ಸಾಲಿನ ಅಂತರಾಷ್ಟ್ರೀಯ ಐಐಎಸ್ಎಫ್ ಕ್ರೀಡಾಕೂಟದ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಕೋಲಾರಕ್ಕೆ ಕೀರ್ತಿ ತಂದಿದ್ದಾರೆ. ಇದನ್ನೂ ಓದಿ: ED ಅಧಿಕಾರ ಮರುಪರಿಶೀಲನೆ ಕೋರಿ ಅರ್ಜಿ – ಜನವರಿಯಲ್ಲಿ ವಿಚಾರಣೆ ನಡೆಸಲಿರುವ ಸುಪ್ರೀಂ
ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ದೇಶಕ್ಕೆ ಕೀರ್ತಿ ತಂದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೋಲಾರದ ದಿವ್ಯಾ ಪ್ರತಿಭೆ ಸಾಧನೆ ಮಾಡಿರುವುದಕ್ಕೆ ಅಭಿನಂದನೆಗಳ ಭರಪೂರವೇ ಹರಿದುಬರುತ್ತಿದೆ. ಅಲ್ಲದೇ ಕೋಲಾರದ ಯುವತಿ ಸಾಧನೆಗೆ ಜಿಲ್ಲೆಯ ಗಣ್ಯರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ತಿಳಿಸಿದ್ದಾರೆ.
