ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯ ಭಾರತ್ ಮಂಟಪದಲ್ಲಿ(Bharat Mandapam) ನಡೆಯುತ್ತಿರುವ ಬ್ರಿಕ್ಸ್ (BRICS) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಮತ್ತೊಮ್ಮೆ ಜಂಟಿಯಾಗಿ ಕಾರ್ ಪ್ರಯಾಣ ನಡೆಸುವ ಮೂಲಕ ತಮ್ಮ ನಡುವಿನ ಆಪ್ತ ಒಡನಾಟವನ್ನು ಪ್ರದರ್ಶಿಸಿದ್ದಾರೆ.
ಉಭಯ ನಾಯಕರ ನಡುವೆ ಸುಮಾರು 45 ನಿಮಿಷಗಳ ಕಾಲ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಯಿತು. ಭಾರತ-ರಷ್ಯಾ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಸಮಾಲೋಚನೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಪ್ರಾಚೀನ ತಮಿಳು ಮಹಾಕಾವ್ಯ, ಸಂತ-ಕವಿ ತಿರುವಳ್ಳುವರ್ ರಚಿತ ‘ತಿರುಕ್ಕುರಲ್’ ಕೃತಿಯ ರಷ್ಯನ್ ಅನುವಾದದ ಪ್ರತಿಯನ್ನು ಅಧ್ಯಕ್ಷ ಪುಟಿನ್ ಅವರಿಗೆ ಉಡುಗೊರೆಯಾಗಿ ನೀಡಿದರು. ಮಾತುಕತೆಯ ನಂತರ, ಭಾರತ್ ಮಂಟಪಂನಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನವನ್ನು ವೀಕ್ಷಿಸಲು ಇಬ್ಬರೂ ನಾಯಕರು ಒಟ್ಟಿಗೆ ಒಂದೇ ಕಾರಿನಲ್ಲಿ ತೆರಳಿದರು.
⚡️PM Modi & Putin Walk & Ride Side By Side To Check Out INNOPROM.India #BRICS2026 #BRICSIndia2026 #IndiaBRICSChairship pic.twitter.com/Wu8vxEK77I
— RT_India (@RT_India_news) September 11, 2026
ಮೋದಿ ಮತ್ತು ಪುಟಿನ್ ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿರುವುದು ಇದು ಮೊದಲೇನಲ್ಲ. ಇದು ಇಬ್ಬರೂ ಜೊತೆಯಾಗಿ ನಡೆಸಿದ 4ನೇ ಕಾರು ಪ್ರಯಾಣವಾಗಿದೆ. ಇದನ್ನೂ ಓದಿ: ಬ್ರಿಕ್ಸ್‌ನಿಂದ ಭಾರತಕ್ಕೆ ಲಾಭವಿಲ್ಲ ಎಂದ ಚಿದಂಬರಂಗೆ ತರೂರ್ ತಿರುಗೇಟು
⚡️ Key 2026 Moment: Putin & PM Modi Meet For Bilateral On BRICS Sidelines In New Delhi
The pair share another friendly hug and handshake as the two break the record for the frequency of meetings between leaders of the two nations. Both Putin and PM Modi met just last week at… pic.twitter.com/cGCqXFRjAW
— RT_India (@RT_India_news) September 11, 2026
ಎರಡನೇ ಪ್ರಯಾಣ (ದೆಹಲಿ, ಡಿಸೆಂಬರ್ 2025): ರಷ್ಯಾ ಅಧ್ಯಕ್ಷರ ಭೇಟಿಯ ವೇಳೆ ಪ್ರಧಾನಿ ಮೋದಿ ನಿಯಮಗಳನ್ನು ಬದಿಗೊತ್ತಿ ಸ್ವತಃ ಪಾಲಂ ವಿಮಾನ ನಿಲ್ದಾಣಕ್ಕೆ ತೆರಳಿ ಪುಟಿನ್ ಅವರನ್ನು ಬರಮಾಡಿಕೊಂಡಿದ್ದರು. ಬಳಿಕ ಇಬ್ಬರೂ ಒಂದೇ ಕಾರಿನಲ್ಲಿ ಪ್ರಧಾನಿ ಅಧಿಕೃತ ನಿವಾಸ ‘7, ಲೋಕ ಕಲ್ಯಾಣ ಮಾರ್ಗ’ಕ್ಕೆ ಖಾಸಗಿ ಔತಣಕೂಟಕ್ಕಾಗಿ ತೆರಳಿದ್ದರು.
ಮೂರನೇ ಪ್ರಯಾಣ (ಬಿಶ್ಕೆಕ್): ಕಳೆದ ತಿಂಗಳು ಕಿರ್ಗಿಸ್ತಾನ್ ಬಿಶ್ಕೆಕ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ನೇಪಥ್ಯದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯ ನಂತರವೂ ಇಬ್ಬರೂ ಒಟ್ಟಿಗೆ ಪ್ರಯಾಣಿಸಿದ್ದರು.
ನಾಲ್ಕನೇ ಪ್ರಯಾಣ (ದೆಹಲಿ): ಇದೀಗ ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆದ ದ್ವಿಪಕ್ಷೀಯ ಸಭೆಯ ನಂತರ ಪ್ರದರ್ಶನ ವೀಕ್ಷಿಸಲು ಇಬ್ಬರೂ ನಾಯಕರು ಮತ್ತೊಮ್ಮೆ ಜಂಟಿಯಾಗಿ ಪ್ರಯಾಣಿಸಿದ್ದಾರೆ.

