ನವದೆಹಲಿ: ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ (IRCTC) ಪೋರ್ಟಲ್‌ನಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ರೈಲು ಟಿಕೆಟ್‌ಗಳು(Ticket Booking) ಬುಕ್ ಆಗುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ.
ಸೆಪ್ಟೆಂಬರ್ 7ರಂದು ಐಆರ್‌ಟಿಸಿ ಮೂಲಕ ಒಟ್ಟು 20,06,353 ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದೆ. ಇದು ಐಆರ್‌ಟಿಸಿ ಇತಿಹಾಸದಲ್ಲೇ ಒಂದೇ ದಿನದಲ್ಲಿ ನಡೆದ ಅತಿ ಹೆಚ್ಚು ಟಿಕೆಟ್ ಬುಕ್ಕಿಂಗ್ ಆಗಿದೆ.
ಇದು ಕಳೆದ ವರ್ಷದ ಹಬ್ಬದ ಋತುವಿನಲ್ಲಿ ದಾಖಲಾಗಿದ್ದ ಗರಿಷ್ಠ 18,40,203 ಟಿಕೆಟ್‌ಗಳ ದಾಖಲೆಯನ್ನು ಹಿಂದಿಕ್ಕಿದೆ. ಅಲ್ಲದೆ, ಸೆಪ್ಟೆಂಬರ್ 8 ರಂದು ಈ ಮತ್ತೆ 19,50,699 ಬುಕ್ಕಿಂಗ್‌ಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಇದನ್ನೂ ಓದಿ: ಗೌರಿ-ಗಣೇಶ ಹಬ್ಬಕ್ಕೆ ಪ್ರಯಾಣಿಕರಿಗೆ ಸಿಹಿಸುದ್ದಿ – KSRTC ಯಿಂದ ಹೆಚ್ಚುವರಿ 2,400 ಬಸ್‌ಗಳ ವ್ಯವಸ್ಥೆ
ಪ್ರಸ್ತುತ ಒಟ್ಟು ಕಾಯ್ದಿರಿಸಿದ ರೈಲ್ವೆ ಟಿಕೆಟ್‌ಗಳಲ್ಲಿ ಸುಮಾರು 89% ರಷ್ಟು ಆನ್‌ಲೈನ್‌ನಲ್ಲೇ ಬುಕ್ ಆಗುತ್ತಿವೆ. ದಿನದ ಒಟ್ಟು ಬುಕ್ಕಿಂಗ್‌ನಲ್ಲಿ ಕೇವಲ 8.43% ರಿಂದ 14.14% ರಷ್ಟು ಮಾತ್ರ ಮೊದಲ ಗಂಟೆಯಲ್ಲಿ (ಬೆಳಿಗ್ಗೆ 8 ರಿಂದ 9 ಗಂಟೆ) ಪೂರ್ಣಗೊಳ್ಳುತ್ತವೆ ಮತ್ತು 85% ಕ್ಕೂ ಹೆಚ್ಚು ಬುಕ್ಕಿಂಗ್‌ಗಳು ದಿನದ ನಂತರದ ಅವಧಿಯಲ್ಲಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಅದರಲ್ಲೂ ಮೊದಲ 15 ನಿಮಿಷಗಳು (ಬೆಳಿಗ್ಗೆ 8 ರಿಂದ 8:15) ನಿರಂತರವಾಗಿ ಅತ್ಯಧಿಕ ಬುಕಿಂಗ್ ಪ್ರಮಾಣವನ್ನು ದಾಖಲಿಸುತ್ತವೆ. ಇದನ್ನೂ ಓದಿ: ಬ್ರಿಕ್ಸ್ ದೇಶಗಳನ್ನು ಕೊಂಡಾಡಿ, ಜಿ7 ದೇಶಗಳಿಗೆ ಗುದ್ದು- ಮಹೀಂದ್ರಾ ಸಾಧನೆಗೆ ಪುಟಿನ್ ಮೆಚ್ಚುಗೆ
ಹೆಚ್ಚುತ್ತಿರುವ ಟ್ರಾಫಿಕ್ ನಿಭಾಯಿಸಲು ಹೊಸ ಸರ್ವರ್‌ಗಳನ್ನು ಅಳವಡಿಸಲಾಗಿದ್ದು, ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯ ಸಾಮರ್ಥ್ಯವನ್ನು ಸುಮಾರು ದುಪ್ಪಟ್ಟುಗೊಳಿಸಲಾಗಿದೆ.
ಪ್ರಯಾಣಿಕರು ಒಂದೇ ಪರದೆಯ ಮೇಲೆ ವಿವಿಧ ತರಗತಿಗಳ ಸೀಟು ಲಭ್ಯತೆಯನ್ನು ವೀಕ್ಷಿಸಲು ಅನುಕೂಲವಾಗುವಂತೆ ಐಆರ್‌ಸಿಟಿಸಿ ಜುಲೈ 15 ರಂದು ಹೊಸ ವೆಬ್‌ಸೈಟ್ ಮತ್ತು ಬಳಕೆದಾರ ಇಂಟರ್‌ಫೇಸ್ (UI) ಅನ್ನು ಬಿಡುಗಡೆ ಮಾಡಿತ್ತು.

