ನವದೆಹಲಿ: ಸಮುದ್ರ ಮಾರ್ಗಗಳು ಸುರಕ್ಷಿತವಾಗಿದ್ದಾಗ ಮಾತ್ರ ಜಾಗತಿಕ ವ್ಯಾಪಾರ ಸಾಧ್ಯ ಎಂದು ʻಹಾರ್ಮುಜ್ʼ ಜಲಸಂಧಿ (Strait of Hormuz) ಉದ್ವಿಗ್ನತೆಯನ್ನ ಉಲ್ಲೇಖಿಸಿ ಪ್ರಧಾನಿ ಮೋದಿ (PM Modi) ಹೇಳಿದರು.
ಬ್ರಿಕ್ಸ್ ಶೃಂಗಸಭೆಯ ಬಿಸಿನೆಸ್ ಫೋರಂನಲ್ಲಿ (BRICS Business Forum) ಮಾತನಾಡಿದ ಅವರು, ಬ್ರಿಕ್ಸ್ ರಾಷ್ಟ್ರಗಳು ಮತ್ತು ಜಾಗತಿಕ ಆರ್ಥಿಕತೆಯ ಬೆಳವಣಿಗೆಯ ನಡುವಿನ ಹೋಲಿಕೆಯನ್ನ ವಿವರಿಸಿದ್ರು.
The India-Russia economic partnership continues to gather momentum.
In Delhi, President Putin and I participated in INNOPROM, bringing together several companies from both countries. It reflects the growing depth of our business engagement.
Индийско-Российское экономическое… pic.twitter.com/s6MClfA4cF
— Narendra Modi (@narendramodi) September 11, 2026
ಜಾಗತಿಕ ವ್ಯಾಪಾರಕ್ಕೆ ಸುರಕ್ಷಿತ ಸಮುದ್ರ ಮಾರ್ಗಗಳು ಮತ್ತು ನಾವಿಕರ ಸುರಕ್ಷತೆ ಅತ್ಯಂತ ಮುಖ್ಯ. ಸಮುದ್ರ ಮಾರ್ಗಗಳು ಸುರಕ್ಷಿತವಾಗಿದ್ದಾಗ, ಸರಬರಾಜು ಮಾರ್ಗಗಳು ಮುಕ್ತವಾಗಿದ್ದಾಗ ಮತ್ತು ನಾವಿಕರು ಸುರಕ್ಷಿತವಾಗಿದ್ದಾಗ ಮಾತ್ರ ಜಾಗತಿಕ ವ್ಯಾಪಾರದ ಪ್ರಗತಿ ಸಾಧ್ಯ. ಅದಕ್ಕಾಗಿಯೇ ಭಾರತ ನೌಕಾಯಾನ ಸ್ವಾತಂತ್ರ್ಯ ಮತ್ತು ನಾವಿಕರ ಸುರಕ್ಷತೆಯನ್ನ ಬಲವಾಗಿ ಬೆಂಬಲಿಸುತ್ತದೆ ಎಂದು ಒತ್ತಿ ಹೇಳಿದರು.
From Bishkek to Delhi, the productive discussions continue.
Happy to have met Dr. Masoud Pezeshkian, the President of Iran. This visit is more special because it is his first visit to India.
We talked about the India-Iran friendship. We believe that we should move forward… pic.twitter.com/DtxWuhB9Ba
— Narendra Modi (@narendramodi) September 11, 2026
ಕಳೆದ 12 ವರ್ಷಗಳಿಂದ ಭಾರತದ ಆರ್ಥಿಕ ಮತ್ತು ವ್ಯಾಪಾರ ನೀತಿಗಳಲ್ಲಿ ‘ಸ್ಥಿತಿಸ್ಥಾಪಕತೆ, ನಾವೀನ್ಯತೆ ಮತ್ತು ಸಹಕಾರಕ್ಕಾಗಿ ನಿರ್ಮಾಣ’ ಎಂಬ ಮಂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಇದು ಕಾರ್ಯಕ್ರಮದ ಆಶಯಕ್ಕೂ ಹೊಂದಿಕೆಯಾಗುತ್ತದೆ. ಬ್ರಿಕ್ಸ್ ರಾಷ್ಟ್ರಗಳ ಒಟ್ಟು ಜಿಡಿಪಿ ಜಾಗತಿಕ ಆರ್ಥಿಕತೆಯ ಬೆಳವಣಿಗೆಗಿಂತ ಹಲವು ಪಟ್ಟು ಹೆಚ್ಚಾಗಿದೆ. ಬ್ರಿಕ್ಸ್ ರಾಷ್ಟ್ರಗಳ ಒಟ್ಟು ಜಿಡಿಪಿ ಸುಮಾರು 4 ಪಟ್ಟು ವಿಸ್ತರಿಸಿದ್ದರೆ, ಜಾಗತಿಕ ಆರ್ಥಿಕತೆಯ ಬೆಳವಣಿಗೆ ಶೇ.2.5ರಷ್ಟಿದೆ ಎಂದು ಶ್ಲಾಘಿಸಿದರು.
ಆರ್ಥಿಕ ಬೆಳವಣಿಗೆಯಲ್ಲಿ ಮಹಿಳಾ ಉದ್ಯಮಿಗಳ ಪಾತ್ರವನ್ನೂ ಉಲ್ಲೇಖಿಸಿದ ಮೋದಿ, ʻಬ್ರಿಕ್ಸ್ ವುಮೆನ್ಸ್ ಬಿಸಿನೆಸ್ ಅಲಯನ್ಸ್ʼ ಭಾರತದ ದೃಷ್ಟಿಕೋನದ ಪ್ರಮುಖ ಭಾಗವಾಗಿದೆ. ಮಹಿಳಾ ಉದ್ಯಮಿಗಳು ನಮ್ಮ ಅಭಿವೃದ್ಧಿಯನ್ನ ಮುನ್ನಡೆಸಬೇಕು ಎಂಬುದು ನಮ್ಮ ಆಶಯ. ಭಾರತದಲ್ಲಿ ನಡೆದ ಈ ಸಭೆಯಲ್ಲಿ ಸುಮಾರು 200 ಮಹಿಳಾ ಉದ್ಯಮಿಗಳು ಭಾಗವಹಿಸಿರುವುದು ನಮಗೆ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮುಂದುವರಿದು.. ನಾವು ರಸ್ತೆ, ರೈಲು, ಬಂದರು ಮತ್ತು ವಿಮಾನ ನಿಲ್ದಾಣಗಳ ಮೂಲಸೌಕರ್ಯವನ್ನ ವೇಗವಾಗಿ ವಿಸ್ತರಿಸುತ್ತಿದ್ದೇವೆ. ಇದರ ಜೊತೆಗೆ, ಹಡಗು ನಿರ್ಮಾಣ, ಸೆಮಿಕಂಡಕ್ಟರ್, ಕ್ವಾಂಟಮ್ ತಂತ್ರಜ್ಞಾನ, ಪ್ರಮುಖ ಖನಿಜಗಳು ಮತ್ತು ಜೈವಿಕ ತಂತ್ರಜ್ಞಾನ ಸೇರಿದಂತೆ ಕಾರ್ಯತಂತ್ರದ ಮಹತ್ವದ ಕ್ಷೇತ್ರಗಳಲ್ಲಿ ಹೊಸ ಸಾಮರ್ಥ್ಯಗಳನ್ನು ನಿರ್ಮಿಸುತ್ತಿದ್ದೇವೆ ಎಂದು ತಿಳಿಸಿದರು.

