ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಶುಕ್ರವಾರ ನವದೆಹಲಿಯಲ್ಲಿ ನಡೆದ ಬ್ರಿಕ್ಸ್ (BRICS) ಬಿಸಿನೆಸ್ ಫೋರಂನ ರೆಡ್‌ಕಾರ್ಪೆಟ್ ಮೇಲೆ ವಿಶ್ವ ನಾಯಕರೊಂದಿಗೆ ಹೆಜ್ಜೆ ಹಾಕಿದ ದೃಶ್ಯ ಗಮನ ಸೆಳೆಯಿತು.
Business forum, bilateral meetings and more…all the action from Bharat Mandapam today. pic.twitter.com/vUhQZqTMBF
— Narendra Modi (@narendramodi) September 11, 2026
ಹೌದು. ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ (Masoud Pezeshkian) ಹಾಗೂ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಸೇರಿದಂತೆ ಹಲವು ಬ್ರಿಕ್ಸ್ ನಾಯಕರೊಂದಿಗೆ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ನಾಯಕರು ಒಟ್ಟಿಗೆ ಸಾಗುವ ವೇಳೆ ಪ್ರಧಾನಿ ಮೋದಿ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಕೈ ಹಿಡಿದುಕೊಂಡು ನಡೆದ ದೃಶ್ಯ ಗಮನ ಸೆಳೆಯಿತು. ಪ್ರಸ್ತುತ ಭೌಗೋಳಿಕ-ರಾಜಕೀಯ ಪರಿಸ್ಥಿತಿಯಲ್ಲಿ BRICS ಸದಸ್ಯ ರಾಷ್ಟ್ರಗಳ ನಡುವಿನ ನಿಕಟ ಬಾಂಧವ್ಯ ಮತ್ತು ಸಹಕಾರವನ್ನ ಈ ಚಿತ್ರ ಪ್ರತಿಬಿಂಬಿಸುವಂತಿತ್ತು.
50% of humanity and 40% of global GDP.
Naturally, BRICS matters!
At the BRICS Business Forum, highlighted India’s approach of ‘Make in India, Innovate with India, Scale for the World.’
My other message…let’s make the next decade about action. Let us:
Remove the top 10 trade… pic.twitter.com/eua1rZ97qw
— Narendra Modi (@narendramodi) September 11, 2026
ಪ್ರಸ್ತುತ ಬ್ರಿಕ್ಸ್ ಒಕ್ಕೂಟದಲ್ಲಿ ಬ್ರೆಜಿಲ್, ಚೀನಾ, ಈಜಿಪ್ಟ್, ಇಥಿಯೋಪಿಯಾ, ಭಾರತ, ಇಂಡೋನೇಷ್ಯಾ, ಇರಾನ್, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ ಮತ್ತು ಯುಎಇ ಸೇರಿದಂತೆ 11 ರಾಷ್ಟ್ರಗಳಿವೆ.
ಫೋಟೋ ಗಮನ ಸೆಳೆದಿದ್ದೇಕೆ?
ಪ್ರಸ್ತುತ ಜಾಗತಿಕ ರಾಜಕೀಯ ಪರಿಸ್ಥಿತಿ ಗಮನಿಸಿದ್ರೆ, ಈ ಚಿತ್ರ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಇರಾನ್ ಸಂಘರ್ಷದ ಕೇಂದ್ರಬಿಂದುವಾಗಿದ್ದು, ಇದರಿಂದ ಇಂಧನ ಪೂರೈಕೆ ಮತ್ತು ಸಮುದ್ರ ಮಾರ್ಗದ ವ್ಯಾಪಾರದ ಮೇಲೆ ಪರಿಣಾಮ ಉಂಟಾಗಿದೆ. ಮತ್ತೊಂದೆಡೆ, ಉಕ್ರೇನ್ ಯುದ್ಧದ ಹಿನ್ನೆಲೆ ರಷ್ಯಾ ಪಾಶ್ಚಿಮಾತ್ಯ ರಾಷ್ಟ್ರಗಳ ವ್ಯಾಪಕ ನಿರ್ಬಂಧಗಳನ್ನ ಎದುರಿಸುತ್ತಿದೆ. ಇಂತಹ ಸಂಕೀರ್ಣ ಭೌಗೋಳಿಕ-ರಾಜಕೀಯ ಪರಿಸ್ಥಿತಿಯ ನಡುವೆಯೂ ಭಾರತವು ಇರಾನ್ ಮತ್ತು ರಷ್ಯಾ ಎರಡೂ ರಾಷ್ಟ್ರಗಳೊಂದಿಗೆ ತನ್ನ ರಾಜತಾಂತ್ರಿಕ ಸಂಪರ್ಕ ಮುಕ್ತವಾಗಿರಿಸಿಕೊಂಡಿದೆ. ಇದೇ ವೇಳೆ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ತನ್ನ ಕಾರ್ಯತಂತ್ರದ ಪಾಲುದಾರಿಕೆಯನ್ನ ಭಾರತ ಮತ್ತಷ್ಟು ಬಲಪಡಿಸುತ್ತಿದೆ.
ಹೀಗಾಗಿ ಪುಟಿನ್ ಮತ್ತು ಪೆಜೆಶ್ಕಿಯನ್ ಅವರೊಂದಿಗೆ ಪ್ರಧಾನಿ ಮೋದಿ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವು ಜಾಗತಿಕ ದಕ್ಷಿಣದ ರಾಷ್ಟ್ರಗಳೊಂದಿಗೆ ಭಾರತದ ಬಾಂಧವ್ಯ ಹಾಗೂ ಸಮತೋಲಿತ ವಿದೇಶಾಂಗ ನೀತಿಯ ಸಂದೇಶವನ್ನು ಸಾರುವಂತಿದೆ.

