ತುಮಕೂರು: ಒಂದು ತಿಂಗಳ ಹಿಂದೆ ರೈತರ ಪಂಪ್‌ಸೆಟ್‌ಗೆ (Tumakuru) ಬಾಂಬ್ ಇಟ್ಟು ಸ್ಫೋಟಿಸಿದ್ದಾನೆ ಎನ್ನಲಾದ ನಕಲಿ ನಕ್ಸಲ್ (Fake Naxalites ) ಕನಕಲ ಬಂಡೆ ವೆಂಕಟೇಶ್ ಇದೀಗ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟು ಬ್ಲಾಕ್‌ಮೇಲ್ ಮಾಡಿರುವ ಆರೋಪ ಕೇಳಿಬಂದಿದೆ.
ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಆರು ಮಂದಿ ನಕ್ಸಲರು ಶರಣಾಗುವ ಮೂಲಕ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿದೆ. ಆದರೆ, ತುಮಕೂರು ಜಿಲ್ಲೆ ಪಾವಗಡದಲ್ಲಿ ನಕಲಿ ನಕ್ಸಲ್ ಕಾಟ ಮಾತ್ರ ನಿಂತಿಲ್ಲ.
ಪಾವಗಡ ತಾಲೂಕಿನ ಗಂಗಸಾಗರದ ಮುತ್ತವ್ವ ಭೂಷಪ್ಪ ಎಂಬುವವರ ತೋಟದ ಶೆಡ್ ಬಾಗಿಲಿಗೆ ಬೆದರಿಕೆ ಪತ್ರವೊಂದನ್ನು ಅಂಟಿಸಲಾಗಿದೆ. ಸಿಪಿಐ(ಎಂಎಲ್), ಸಿಪಿಎಂ ಪೀಪಲ್ ವಾರ್ ಜನಶಕ್ತಿ ಪಾರ್ಟಿ ಹೆಸರಿನಲ್ಲಿ ತೆಲುಗಿನಲ್ಲಿ ಪತ್ರ ಬರೆಯಲಾಗಿದೆ ಎನ್ನಲಾಗಿದೆ.
ಸೆಪ್ಟೆಂಬರ್ 16ರೊಳಗೆ 5 ಲಕ್ಷ ರೂಪಾಯಿ ಹಣವನ್ನು ವಕೀಲ ಸುಬ್ಬರಾಯಪ್ಪ ಅವರ ಬಳಿ ಕಳಿಸಿಕೊಡಬೇಕು. ಬಳಿಕ ಆ ಹಣವನ್ನು ಕ್ರಾಮೆಡ್ ದೇವಣ್ಣ ದಳಂ ಅವರಿಗೆ ನೀಡಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ.
ಕನಕಲ ಬಂಡೆ ವೆಂಕಟೇಶ್ ವಿರುದ್ಧ ಹಲವು ಕೇಸ್‌ಗಳಿದ್ದು, ಅವುಗಳನ್ನು ನಡೆಸಲು ಹೆಚ್ಚಿನ ಹಣದ ಅವಶ್ಯಕತೆ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಒಂದೇ ದಿನ 20 ಲಕ್ಷಕ್ಕೂ ಹೆಚ್ಚು ಟಿಕೆಟ್ ಬುಕ್ಕಿಂಗ್- ದಾಖಲೆ ಬರೆದ ಭಾರತೀಯ ರೈಲ್ವೇ
ಬೆದರಿಕೆ ಪತ್ರ ಸಿಕ್ಕ ಹಿನ್ನೆಲೆಯಲ್ಲಿ ಮುತ್ತವ್ವ ಭೂಷಪ್ಪ ಅವರ ಕುಟುಂಬ ಪಾವಗಡ ಪೊಲೀಸರಿಗೆ ದೂರು ನೀಡಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಬ್ರಿಕ್ಸ್ ಬಲಪಡಿಸಲು ಪ್ರಧಾನಿ ಮೋದಿ ಶ್ರಮ – ಇರಾನ್ ಅಧ್ಯಕ್ಷ ಮೆಚ್ಚುಗೆ; ಅಮೆರಿಕ, ಇಸ್ರೇಲ್ ಮಿಲಿಟರಿ ಆಕ್ರಮಣಕ್ಕೆ ಖಂಡನೆ

