ಕೊಪ್ಪಳ: ಇಲ್ಲಿನ ಗಂಗಾವತಿ ಬಸ್ ನಿಲ್ದಾಣದಲ್ಲಿ (Gangavathi Bus Stand) ಹುಡುಗಿಯರ ಫೋಟೋ ಕ್ಲಿಕ್ಕಿಸುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರಿಗೆ ಧರ್ಮದೇಟು ನೀಡಿರುವ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಮಾನ್ವಿ (Manvi) ನಿವಾಸಿಯೊಬ್ಬ ಗಂಗಾವತಿ ಬಸ್ ನಿಲ್ದಾಣದಲ್ಲಿ ಮೊಬೈಲ್ನಲ್ಲಿ ಯುವತಿಯರ ಫೋಟೋ ಸೆರೆಹಿಡಿಯುತ್ತಿದ್ದ. ಈ ವೇಳೆ ಗಮನಿಸಿದ ಮಹಿಳೆಯರು ಆತನಿಗೆ ಪ್ರಶ್ನೆ ಮಾಡಿದ್ದಾರೆ. ಬಳಿಕ ಸ್ಥಳದಲ್ಲಿದ್ದ ಸಾರ್ವಜನಿಕರು ವ್ಯಕ್ತಿಗೆ ಧರ್ಮದೇಟು ನೀಡಿದ್ದಾರೆ. ಇದನ್ನೂ ಓದಿ: ಎಲ್ಲೆಲ್ಲಿ ಫಾರ್ಮ್ 7 ಕೊಟ್ಟಿದ್ದಾರೆ 12 ಗಂಟೆ ಒಳಗೆ ಮಾಹಿತಿ ಕೊಡಿ – SIR ಬಗ್ಗೆ ರಾಜ್ಯದ ಜನರಿಗೆ ಡಿಕೆಶಿ ಸಂದೇಶ
ಆನಂತರ ಆತನ ಮೊಬೈಲ್ ಪರಿಶೀಲಿಸಿದಾಗ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ಫೋಟೋಗಳು ಪತ್ತೆಯಾಗಿವೆ. ಅಲ್ಲದೆ ಆತ ಅಶ್ಲೀಲ ಚಿತ್ರಗಳನ್ನೂ ತೆಗೆದಿದ್ದಕ್ಕೆ ಸ್ಥಳೀಯರು ವ್ಯಕ್ತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

