– ಕೇವಲ ಇಬ್ಬರು ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಕೊಡೋದಾಗಿ ಗ್ಯಾನೇಂದ್ರಗೆ ನಂಬಿಸಿದ್ದ ಕನ್ನಾಳೆ
– ಕನ್ನಾಳೆ ಜೊತೆಗಿನ ಸ್ನೇಹದ ಬಗ್ಗೆ ಐಎಎಸ್ ಅಧಿಕಾರಿ ಹೇಳಿದ್ದೇನು?
ಬೆಂಗಳೂರು: ಕೆಪಿಎಸ್ಸಿ ಹಗರಣ (KPSC Scam) ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ (Gyanendra Kumar) ಅವರು ಇಡಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇಡಿ ಮುಂದೆ ತಪ್ಪೊಪ್ಪಿಗೆ ಮಾಡಿಕೊಂಡ ಗ್ಯಾನೇಂದ್ರ, ಕನ್ನಾಳೆ ಜೊತೆಗಿನ ಸ್ನೇಹದ ಮಾಹಿತಿ ಹೊರಹಾಕಿದ್ದಾರೆ.
ಜನವರಿ 8 ಮತ್ತು 9 ತಾರೀಖು ಸಾಕಷ್ಟು ವಿಲ್ಲಾಗಳನ್ನು ಬುಕ್ ಮಾಡಲಾಗಿತ್ತು. ಅರ್ಕಿಡ್ ನಿರ್ವಾಣ ಸೇರಿದಂತೆ ಬೇರೆ ವಿಲ್ಲಾಗಳಲ್ಲಿ 20 ಅಭ್ಯರ್ಥಿಗಳು ಟ್ರೈನಿಂಗ್ ಪಡೆದಿದ್ದಾರೆ. ಜನವರಿ 7 ಹೆಚ್ಪಿ ಪೆನ್ಡ್ರೈವ್ ಮೂಲಕ ಗ್ಯಾನೇಂದ್ರ, ಕನ್ನಾಳೆಗೆ ಪ್ರಶ್ನೆ ಮತ್ತು ಉತ್ತರ ನೀಡಿದ್ದರು. ಎರಡೂ ಪ್ರಶ್ನೆ ಪತ್ರಿಕೆಯ 80 ಅಂಕದ ಪ್ರಶ್ನೆಗಳನ್ನು ಪೆನ್ಡ್ರೈವ್ನಲ್ಲಿ ಹಾಕಿಕೊಟ್ಟಿದ್ದೆ. ಅಂತಿಮ ಹಂತದ ಪ್ರಶ್ನೆಪತ್ರಿಕೆಯನ್ನೇ ನಾನು ನಕಲು ಮಾಡಿದ್ದೆ. ಕಚೇರಿಯಲ್ಲಿದ್ದ ಶಿಯೋಮಿ ಟ್ಯಾಬ್ಲೆಟ್ ಅಲ್ಲಿ ನಕಲು ಮಾಡಿದ್ದಾಗಿ ಅಧಿಕಾರಿ ಗ್ಯಾನೇಂದ್ರ ಇಡಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಕೆಪಿಎಸ್ಸಿ ನೇಮಕಾತಿ ಹಗರಣ – 14 ದಿನ ಇಡಿ ಕಸ್ಟಡಿಗೆ ಬಸವರಾಜ್ ಕನ್ನಾಳೆ
ಬಳಿಕ ಅದೇ ದಿನ ಸಿಕ್ಕಬಾರದು ಅಂದ ಟ್ಯಾಬ್ಲೆಟ್ ಅನ್ನು ಪುಡಿಪುಡಿ ಮಾಡಿ ಬಿಸಾಡಿದ್ದಾರೆ. ಕೇವಲ ಇಬ್ಬರು ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಕೊಡೋದಾಗಿ ಕನ್ನಾಳೆ ಗಂಗ್ವಾರ್ ನಂಬಿಸಿದ್ದ. 80 ಲಕ್ಷ ಮೊದಲು ಬೇಡಿಕೆ ಬಳಿಕ 40 ಲಕ್ಷಕ್ಕೆ ಇಳಿಕೆ ಮಾಡಿದ್ದ ಕನ್ನಾಳೆ. 1 ಕೋಟಿ 70 ಲಕ್ಷ ಕನ್ನಾಳೆ ಬಳಿ ಗ್ಯಾನೇಂದ್ರ ಪಡೆದುಕೊಂಡಿದ್ದಾರೆ. 2025 ರ ಅವಧಿಯಲ್ಲಿ ಗ್ಯಾನೇಂದ್ರ ತನ್ನ ಅತ್ತಿಗೆಗೆ 15.39 ಲಕ್ಷ ಹಣ ನೀಡಿದ್ದಾರೆ. ಸಹೋದರ ಬ್ಯಾಂಕ್ ಅಕೌಂಟ್ಗೆ 10.94 ಲಕ್ಷ ಹಣ ಸಂದಾಯ ಮಾಡಿದ್ದಾರೆ. ಅಕ್ರಮದ ಹಣವನ್ನು ಸ್ವಂತ ಹಣವನ್ನಾಗಿ ಬಿಂಬಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.
ಅಧಿಕಾರಿಯ ಮನೆ ಮೇಲೆ ದಾಳಿ ನಡೆದಾಗ ಕೆಲ ದಾಖಲಾತಿ ವಶಕ್ಕೆ ಪಡೆಯಲಾಗಿದೆ. ಇಬ್ಬರು ಪಶುವೈದ್ಯಾಧಿಕಾರಿ ಅಭ್ಯರ್ಥಿಗಳ ಹೆಸರು ಕೂಡ ಪಟ್ಟಿಯಲ್ಲಿದೆ. 1:3ರ ಅನುಪಾತದಲ್ಲಿ ಆಯ್ಕೆ ಪಟ್ಟಿ ಮಾಡಲಾಗಿದೆ. ಕೆಪಿಎಸ್ಸಿ ಇನ್ನಿತರ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅಪರಾಧದಿಂದ ಬಂದ ಹಣವನ್ನು ಉಮೇಶ್ ಮತ್ತು ಓಂಕಾರ್ಗೆ ವರ್ಗಾಯಿಸಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕೆಪಿಎಸ್ಸಿ ಹಗರಣ ಕೇಸ್; ಅಭ್ಯರ್ಥಿಗಳಿಗೆ ರೆಸಾರ್ಟ್ ಮಾತ್ರವಲ್ಲ ಲಾಡ್ಜ್ಗಳಲ್ಲೂ ತರಬೇತಿ

