* ಕನ್ನಾಳೆಯಿಂದ ನಾನು 1.7 ಕೋಟಿ ಹಣ ಪಡೆದಿದ್ದೇನೆ ಅಷ್ಟೇ
* ಇ.ಡಿ ಮುಂದೆ ತಪ್ಪೊಪ್ಪಿಕೊಂಡ ಐಎಎಸ್ ಅಧಿಕಾರಿ ಗ್ಯಾನೇಂದ್ರ
ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣ ಕೇಸ್‌ನ ವಿಚಾರಣೆಯಲ್ಲಿ ಸ್ಫೋಟಕ ವಿಚಾರಗಳು ಬಹಿರಂಗಗೊಂಡಿವೆ. ಅಭ್ಯರ್ಥಿಗಳಿಗೆ ರೆಸಾರ್ಟ್‌ಗಳಲ್ಲಿ ಮಾತ್ರವಲ್ಲ ಲಾಡ್ಜ್‌ಗಳಲ್ಲೂ ತರಬೇತಿ ನೀಡಲಾಗುತ್ತಿತ್ತು ಎಂಬ ವಿಚಾರವನ್ನು ಐಎಎಸ್ ಅಧಿಕಾರಿ ಗ್ಯಾನೇಂದ್ರ ಒಪ್ಪಿಕೊಂಡಿದ್ದಾರೆ.
ಪ್ರಶ್ನೆಗಳನ್ನು ಹಂಚಿಕೆ ಮಾಡೋದು ಮತ್ತು ಟ್ರೈನಿಂಗ್ ಜವಾಬ್ದಾರಿ ಕನ್ನಾಳೆ ಬಳಿಯಲ್ಲಿತ್ತು. ನಾನು ಕೇವಲ ಯಾವ ಎಕ್ಸಾಂ ಸೆಂಟರ್‌ಗೆ ಯಾವ ಸೀರಿಸ್ ಬರಲಿದೆ ಅಂತ ಹೇಳಿದೆ. ಮೊದಲೇ ಮಾತನಾಡಿದಂತೆ ಎಕ್ಸಾಂ ಸೆಂಟರ್ ಪೇಪರ್ ಸೀರಿಸ್ ನಿಗದಿ ಮಾಡಿದ್ವಿ ಎಂದು ವಿಚಾರಣೆ ವೇಳೆ ಗ್ಯಾನೇಂದ್ರ ತಿಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಿಬಿಎಂಪಿ ಎಇ ಪರೀಕ್ಷೆಯಲ್ಲೂ ಅಕ್ರಮ? – ಅನುಮಾನಕ್ಕೆ ಎಡೆ ಮಾಡಿಕೊಟ್ಟ ಕನ್ನಾಳೆಯ ಸೀಕ್ರೆಟ್ ಡೈರಿ
ಪ್ರಶ್ನೆಪತ್ರಿಕೆ ಹಂಚಿಕೆ ಮಾಡೋದ್ರಲ್ಲಿ ಕೂಡ ವಂಚನೆ ಬೆಳಕಿಗೆ ಬಂದಿದೆ. ಎಕ್ಸಾಂ ಸೆಂಟರ್ ಬಳಿ ಇರುವ ಲಾಡ್ಜ್‌ನಲ್ಲಿ ಅಭ್ಯರ್ಥಿಗಳು ಇದ್ದರು. ಆ ಲಾಡ್ಜ್‌ಗಳಿಗೆ ಹೋಗಿ ಟ್ರೈನಿಂಗ್ ಕೊಟ್ಟಿದ್ದಾನೆ ಕನ್ನಾಳೆ. ಜನವರಿ 8ನೇ ತಾರೀಕು ಮಧ್ಯಾಹ್ನದಿಂದ ಅತೀ ಹೆಚ್ಚು ಡೀಲ್ ಮಾಡಿದ್ದ. 9ರಂದು ಪರೀಕ್ಷೆಗೆ ಹೆಚ್ಚು ಡೀಲ್ ಮಾಡಿದ್ದ ಕನ್ನಾಳೆ. ಆತನಿಂದ ನಾನು ಇದುವರೆಗೂ 1.7 ಕೋಟಿ ಹಣ ಪಡೆದಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ.
ಪಶುವೈದ್ಯಾಧಿಕಾರಿ ಪರೀಕ್ಷೆಯಲ್ಲಿ ಹಣ ಪಡೆದಿಲ್ಲ. ಅದಕ್ಕೂ ಮುನ್ನ ಹಣ ನೀಡಿದ್ದಾನೆ ಎಂದು ED ಮುಂದೆ ಸವಿಸ್ತಾರವಾಗಿ ಗ್ಯಾನೇಂದ್ರ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: KPSC Scam| ಬಸವರಾಜ್ ಕನ್ನಾಳೆ ರಹಸ್ಯ ಡೈರಿ ಪತ್ತೆ- ಲಕ್ಷ ಲಕ್ಷ ಡೀಲ್ ಬಯಲು

