ಬೆಂಗಳೂರು: ಬಿಬಿಎಂಪಿ ಎಇ ಪರೀಕ್ಷೆಯಲ್ಲೂ ಅಕ್ರಮದ ಅನುಮಾನ ವ್ಯಕ್ತವಾಗಿದೆ. ಬಸವರಾಜ್ ಕನ್ನಾಳೆಯ (Basavaraj Kannale) ಸೀಕ್ರೆಟ್ ಡೈರಿಯಲ್ಲಿ ಈ ವಿಚಾರ ಬಯಲಾಗಿದೆ.
ಕೆಪಿಎಸ್ಸಿ ನೇಮಕಾತಿ ಹಗರಣ ಕೇಸ್ನಲ್ಲಿ ಕನ್ನಾಳೆ ಈಗಾಗಲೇ ಜೈಲು ಸೇರಿದ್ದಾರೆ. ಈಗ ಕನ್ನಾಳೆ ಡೈರಿಯಲ್ಲಿ ಬಿಬಿಎಂಪಿ ಎಇ ಪರೀಕ್ಷೆಯ ಕರ್ಮಕಾಂಡದ ಸೀಕ್ರೆಟ್ ಹೊರಬಿದ್ದಿದೆ. ಇದನ್ನೂ ಓದಿ: ಕೆಪಿಎಸ್ಸಿ ಹಗರಣ ಕೇಸ್; ಆರೋಪಿ ಗ್ಯಾನೇಂದ್ರ ಕುಮಾರ್ 8 ದಿನ ಇಡಿ ಕಸ್ಟಡಿಗೆ
ಕನ್ನಾಳೆ ಸಿಕ್ರೇಟ್ ಡೈರಿಗೂ ಕೆಪಿಎಸ್ಸಿ ಸೆಲೆಕ್ಷನ್ ಲಿಸ್ಟ್ಗೂ ಟ್ಯಾಲಿಯಾಗಿದೆ ಎನ್ನಲಾಗಿದೆ. ಕನ್ನಾಳೆ ಡೈರಿಯಲ್ಲಿ ಬರೆದ ಹೆಸರು ಕೆಪಿಎಸ್ಸಿ ಸೆಲೆಕ್ಷನ್ ಲಿಸ್ಟ್ನಲ್ಲಿದೆ. ಕನ್ನಾಳೆ ಡೈರಿಯಲ್ಲಿ ಉಲ್ಲೇಖ ಮಾಡಿದ್ದ ಅಭ್ಯರ್ಥಿ ಸೆಲೆಕ್ಷನ್ ಲಿಸ್ಟ್ನಲ್ಲಿರುವುದು ಗೊತ್ತಾಗಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಎಲಿಜಿಬಿಲಿಟಿ ಲಿಸ್ಟ್ ಹೊರಬಿದ್ದಿತ್ತು. ಅದರಲ್ಲಿ ಕನ್ನಾಳೆ ಡೈರಿಯಲ್ಲಿದ್ದ ಅಭ್ಯರ್ಥಿ ಹೆಸರು ಸೆಲೆಕ್ಷನ್ ಆಗಿದೆ. ಒಬ್ಬ ಅಭ್ಯರ್ಥಿಯ ಹೆಸರನ್ನು ಕನ್ನಾಳೆ ಡೈರಿಯಲ್ಲಿ ಉಲ್ಲೇಖಿಸಿದ್ದರು. ಇದನ್ನೂ ಓದಿ: ಕೆಪಿಎಸ್ಸಿ ಹಗರಣ – ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಶಾಂತಾ ಹೊಸಮನಿ

