– ಸೆಮಿಫೈನಲ್‌ನಲ್ಲಿ ಶ್ರೀಲಂಕಾ 45 ರನ್‌ಗೆ ಆಲೌಟ್; ಟೀಂ ಇಂಡಿಯಾಗೆ 124 ರನ್‌ಗಳ ಭರ್ಜರಿ ಜಯ
ನಿಸ್ಶಿನ್: ಏಷ್ಯನ್ ಗೇಮ್ಸ್ 2026ರ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಸುಲಭ ಜಯ ಸಾಧಿಸಿದ ಭಾರತ ತಂಡ ಫೈನಲ್‌ಗೆ ಲಗ್ಗೆಯಿಟ್ಟಿದೆ. ಪಾಕಿಸ್ತಾನ ವಿರುದ್ಧ ಫೈನಲ್ ಪಂದ್ಯದಲ್ಲಿ ಶನಿವಾರ ಚಿನ್ನದ ಪದಕಕ್ಕಾಗಿ ಭಾರತ ಸೆಣಸಲಿದೆ.
ಇಂದು ನಡೆದ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ 124 ರನ್‌ಗಳ ಗೆಲುವು ದಾಖಲಿಸಿ ಫೈನಲ್‌ಗೆ ಎಂಟ್ರಿ ಕೊಟ್ಟಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ ಇಶಾನ್ ಕಿಶನ್ ಅವರ 80 ರನ್ (54 ಬಾಲ್, 5 ಸಿಕ್ಸರ್, 4 ಫೋರ್) ಹಾಗೂ ವೈಭವ್ ಸೂರ್ಯವಂಶಿ 38 ರನ್ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು.
ನಂತರ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಕಳಪೆ ಪ್ರದರ್ಶನದಿಂದ ಭಾರತಕ್ಕೆ ಸುಲಭ ತುತ್ತಾಯಿತು. ಕೇವಲ 45 ರನ್‌ಗೆ ಆಲೌಟ್ ಆಗಿ ಹೀನಾಯ ಸೋಲನುಭವಿಸಿತು. ಟೀಂ ಇಂಡಿಯಾ ಪರ ಭಾರತದ ಬೌಲರ್‌ಗಳು ಅಬ್ಬರಿಸಿದರು.
ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ಅಭಿಷೇಕ್ ಶರ್ಮಾ ತಲಾ 2 ವಿಕೆಟ್ ಪಡೆದರು. ವಾಷಿಂಗ್ಟನ್ ಸುಂದರ್ 1 ವಿಕೆಟ್ ಗಳಿಸಿದರು.

