– ಜನಿವಾರ ವಿವಾದಕ್ಕೆ ಸಿಲುಕಿದ್ದ 4 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ
ಬೆಂಗಳೂರು: ಕಳೆದ ಏ.22, 23, 24 ರಂದು ನಡೆದಿದ್ದ 2026ರ ಯುಜಿ ಸಿಇಟಿ (UG CET) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆ ಬರೆದಿದ್ದ 3,09,014 ವಿದ್ಯಾರ್ಥಿಗಳ ಪೈಕಿ, 2,92,782 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.
ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಕುಮಾರ್ ಮಾತನಾಡಿದ್ದು, ಜನಿವಾರ ವಿವಾದಕ್ಕೆ ಸಿಲುಕಿದ್ದ 4 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಇಟಿ ಫಲಿತಾಂಶ ಪ್ರಕಟ – ಮಧ್ಯಾಹ್ನ 2 ಗಂಟೆ ಬಳಿಕ ವೆಬ್‌ಸೈಟ್‌ನಲ್ಲಿ ಲಭ್ಯ
ಅಲ್ಲದೇ, ಹಿಜಬ್ ಹಾಕಿದ್ದ ವಿದ್ಯಾರ್ಥಿನಿ ಮೊದಲ ದಿನದ ಪರೀಕ್ಷೆ ಬರೆದಿರಲಿಲ್ಲ. ಹೀಗಾಗಿ ಹಿಜಬ್ ವಿಚಾರಕ್ಕೆ ಪರೀಕ್ಷೆ ಬರೆಯದ ವಿದ್ಯಾರ್ಥಿನಿಗೆ 3 ಸಬ್ಜೆಕ್ಟ್‌ನ ಸರಾಸರಿ ಅಂಕ ನೀಡಿ ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ರು. ಆಕೆಗೆ ಸ್ಪಾಟ್ ರ‍್ಯಾಂಕ್ ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: UG CET 2026 Result | ಇಂಜಿನಿಯರಿಂಗ್‌ನಲ್ಲಿ RV ಕಾಲೇಜಿನ ತನಿಷಾ 1st ರ‍್ಯಾಂಕ್

2,92,782 ವಿದ್ಯಾರ್ಥಿಗಳು ಅರ್ಹತೆ
ಸಿಇಟಿ ಪರೀಕ್ಷಾ ಫಲಿತಾಂಶದ ಕುರಿತು ಮಾಹಿತಿ ನೀಡಿದ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು, ಒಟ್ಟು 3,30,646 ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 3,09,014 ಮಕ್ಕಳು ಸಿಇಟಿ ಪರೀಕ್ಷೆ ಬರೆದಿದ್ರು. ಭೌತಶಾಸ್ತ್ರದಲ್ಲಿ 3,09,014 ಮಕ್ಕಳು, ರಸಾಯನ ಶಾಸ್ತ್ರದಲ್ಲಿ 3,08,946 ಮಕ್ಕಳು, ಗಣೀತದಲ್ಲಿ 3,02,384 ಮಕ್ಕಳು ಹಾಗೂ ಜೀವಶಾಸ್ತ್ರದಲ್ಲಿ 2,31,023 ಮಕ್ಕಳು ಪರೀಕ್ಷೆ ಬರೆದಿದ್ರು. ಈ ಪೈಕಿ 2,92,782 ಮಕ್ಕಳು ಈ ಬಾರಿ ಅರ್ಹತೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲದೇ ಈ ಸಲ ಸಂಪೂರ್ಣ ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗಿದೆ. ಫೇಸ್ ರೆಕಗ್ನೇಷನ್ ಮೂಲಕ ಪರೀಕ್ಷೆ ನಡೆಸಲಾಗಿ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ವೆಬ್‌ಕಾಸ್ಟಿಂಗ್ ಆಗಿದೆ. ಭೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರದ ತಲಾ ಒಂದು ಪ್ರಶ್ನೆಗೆ ಕೃಪಾಂಕ ನೀಡಲಾಗಿದೆ ಎಂದು ತಿಳಿಸಿದ್ದಾರೆ.
