Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Search

Archives

  • November 2026
  • October 2026
  • September 2026
  • August 2026
  • July 2026
  • June 2026
  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
  • ಟ್ರೆಂಡಿಂಗ್ ನ್ಯೂಸ್ ( Trending News )
  • Privacy Policy
  • CSR-Policy
  • Terms of Service
  • POSH POLICY
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.
Reading: ಬಸವಣ್ಣನನ್ನ ಕೊಲೆಗಾರ ಅಂದಿಲ್ಲ, ಧರ್ಮ ವಿರೋಧಿಗಳು ನನ್ನ ವಾದ ಒಪ್ಪಲ್ಲ: ಲೇಖಕ ರವಿ ಹಂಜ್ ಸ್ಪಷ್ಟನೆ
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • POSH POLICY
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.

Home | Districts | Bengaluru City | ಬಸವಣ್ಣನನ್ನ ಕೊಲೆಗಾರ ಅಂದಿಲ್ಲ, ಧರ್ಮ ವಿರೋಧಿಗಳು ನನ್ನ ವಾದ ಒಪ್ಪಲ್ಲ: ಲೇಖಕ ರವಿ ಹಂಜ್ ಸ್ಪಷ್ಟನೆ

Bengaluru City

ಬಸವಣ್ಣನನ್ನ ಕೊಲೆಗಾರ ಅಂದಿಲ್ಲ, ಧರ್ಮ ವಿರೋಧಿಗಳು ನನ್ನ ವಾದ ಒಪ್ಪಲ್ಲ: ಲೇಖಕ ರವಿ ಹಂಜ್ ಸ್ಪಷ್ಟನೆ

Last updated: November 19, 2026 7:48 pm
By
Public TV
Share
7 Min Read
Author Ravi Hanj

– ಅಖಂಡ ಹಿಂದೂ ವೀರಶೈವ ಲಿಂಗಾಯತ ಧರ್ಮೀಯರು ಧರ್ಮ ಭಂಜಕರ ಬಗ್ಗೆ ಎಚ್ಚರ ವಹಿಸಬೇಕು

ಬೆಂಗಳೂರು: 12ನೇ ಶತಮಾನದ ಮಹನೀಯ.. ವಚನಗಾರ, ಕ್ರಾಂತಿಕಾರಿ ಭಕ್ತಿ ಭಂಡಾರಿ ಬಸವಣ್ಣನವರ ವಿರುದ್ಧ ಅಮೆರಿಕ ಮೂಲದ ಲೇಖಕ ರವಿ ಹಂಜ್ (Author Ravi Hanj) ಬರೆದಿರುವ ಪುಸ್ತಕ ʻಬಸವ ಮಂಟಪʼ (Basava Mantapa) ವಿವಾದ ಸೃಷ್ಟಿಸಿದೆ. ಪುಸ್ತಕದಲ್ಲಿ ಸಾಮಾಜಿಕ ಸುಧಾರಕ ಬಸವಣ್ನನವರ ಚಾರಿತ್ರ್ಯ ವಧೆ ಮಾಡಿರುವ ಆರೋಪ ಮಾಡಲಾಗಿದೆ. ಬಸವಣ್ಣನವರನ್ನ ಕೊಲೆಗಾರನ ರೀತಿ ಬಿಂಬಿಸಿರುವ ಲೇಖಕ ಬಿಜ್ಜಳನ ಹತ್ಯೆಯಲ್ಲಿ ಬಸವಣ್ಣನ ಪಾತ್ರ ಎಂದಿದ್ದಾರೆ. ಸದ್ಯ ಇದು ವೀರಶೈವ ಲಿಂಗಾಯತ (Veerashaiva Lingayat) ಸಮುದಾಯದವರನ್ನ ಕೆರಳಿಸಿದೆ. ಲೇಖಕ ರವಿ ಹಂಜ್ ಆಕ್ರೋಶ ಹೊರಹಾಕಿದ್ದು, ಪುಸ್ತಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಮ್ಮ ಲೇಖನಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಲೇಖಕ ರವಿ ಹಂಜ್ ಸ್ಪಷ್ಟನೆ ನೀಡಿದ್ದಾರೆ. ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿರುವ ಅವರು, ವೀರಶೈವ ಲಿಂಗಾಯತ ಒಂದೇ ಅನ್ನೋದಷ್ಟೇ ನನ್ನ ವಾದ. ಧರ್ಮ ವಿರೋಧಿಗಳು ನನ್ನ ವಾದ ಒಪ್ಪೋದಿಲ್ಲ. ಬಸವಣ್ಣನ ವಚನಗಳ ಬಗ್ಗೆ ಆರೋಪ ಮಾಡಿದ್ದವರೂ ಓದಿಕೊಂಡಿಲ್ಲ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಿದ್ದೇನೆ. ಯಾವುದೇ ದೂರು ನೀಡಿದರೂ ಎದುರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

Author Ravi Hanj 2

ಸುದೀರ್ಘ ಹೇಳಿಕೆಯಲ್ಲಿ ಏನಿದೆ?
ಅಲ್ಲದೇ, ಪ್ರಕಟಣೆ ಮೂಲಕ ಸುದೀರ್ಘ ಹೇಳಿಕೆ ನೀಡಿರುವ ಅವರು, ಕರ್ನಾಟಕದ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಮಹಾಪುರುಷರಾದ ʻಶ್ರೀ ಬಸವಣ್ಣನವರನ್ನು ನಾನು ಕಳ್ಳ ಮತ್ತು ಕೊಲೆಗಾರ ಎಂದು ಕರೆದಿದ್ದೇನೆʼ ಎಂಬ ಆರೋಪಗಳು ಇತ್ತೀಚೆಗೆ ಕೇಳಿಬಂದಿವೆ. ಈ ಆರೋಪಗಳು ಸಂಪೂರ್ಣವಾಗಿ ದಾರಿ ತಪ್ಪಿಸುವಂತಹವುಗಳಾಗಿದ್ದು, ವಾಹಿನಿಯೊಂದಕ್ಕೆ ನಾನು ನೀಡಿದ ಸುಮಾರು 90 ನಿಮಿಷಗಳ ಸಂದರ್ಶನದ ಕೆಲವು ಹೇಳಿಕೆಗಳನ್ನ ಸಂದರ್ಭದಿಂದ ಹೊರಗಿಟ್ಟು ವ್ಯಾಖ್ಯಾನಿಸಿರುವುದರಿಂದ ಉದ್ಭವಿಸಿವೆ.

More Read

Gadag Food department raid
ಗದಗ | ಆಹಾರ ಆಯೋಗದ ದಿಢೀರ್ ದಾಳಿ; ಕಲಬೆರಕೆ ಖಾರದ ಪುಡಿ ಫ್ಯಾಕ್ಟರಿ ಬಂದ್
Chennai Drug Seize
ಚೆನ್ನೈ | 700 ಕೋಟಿ ಮೌಲ್ಯದ 70 ಕೆಜಿ ಹೆರಾಯಿನ್‌ ಸೀಜ್‌ – ಇಬ್ಬರು ಅರೆಸ್ಟ್
Ramanagara Students escape
ಶಿಕ್ಷಕರು ಬೈದಿದ್ದಕ್ಕೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ನಾಲ್ಕು ಮಕ್ಕಳು ಎಸ್ಕೇಪ್

ಸಂದರ್ಶನದ ಸಂದರ್ಭದಲ್ಲಿ, ಬಸವಣ್ಣನವರು ಹಾಗೂ ಅವರ ಕಾಲಘಟ್ಟಕ್ಕೆ ಸಂಬಂಧಿಸಿದ ಕೆಲವು ವಚನಗಳು, ಪುರಾಣ ಕಥನಗಳು ಮತ್ತು ಐತಿಹಾಸಿಕ ದಾಖಲೆಗಳ ನಡುವೆ ಕಂಡುಬರುವ ಐತಿಹಾಸಿಕ ಹಾಗೂ ವ್ಯಾಖ್ಯಾನಾತ್ಮಕ ಭಿನ್ನತೆಗಳ ಕುರಿತು ನಾನು ಚರ್ಚಿಸುತ್ತಿದ್ದೆ. ಈ ವಿಭಿನ್ನ ಐತಿಹಾಸಿಕ ದೃಷ್ಟಿಕೋನಗಳನ್ನ ಪರಿಶೀಲಿಸುವುದು ಮತ್ತು ಅವುಗಳತ್ತ ಗಮನ ಸೆಳೆಯುವುದು ನನ್ನ ಉದ್ದೇಶವಾಗಿತ್ತೇ ಹೊರತು, ಬಸವಣ್ಣನವರನ್ನ ಅವಮಾನಿಸುವುದು, ಅವರ ಘನತೆಯನ್ನು ಕುಗ್ಗಿಸುವುದು ಅಥವಾ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವುದು ನನ್ನ ಉದ್ದೇಶವಾಗಿರಲಿಲ್ಲ.

ವಿಶೇಷವಾಗಿ, ಬಿ.ಎಲ್ ರೈಸ್ ಅವರು ʻದಿ ಮೈಸೂರು ಗೆಜೆಟಿಯರ್ ಸಂಪುಟ 1ರ 332ನೇʼ ಪುಟದಲ್ಲಿ ದಾಖಲಿಸಿರುವ ಐತಿಹಾಸಿಕ ವಿವರವನ್ನ ನಾನು ಉಲ್ಲೇಖಿಸಿದ್ದೆ. ಈ ವಿವರವು ʻಬಿಜ್ಜಳಾಂಕ ಕಾವ್ಯʼ, ʻಬಿಜ್ಜಳರಾಯ ಚರಿತೆʼ ಸೇರಿದಂತೆ ಜೈನ ಸಾಹಿತ್ಯ ಮೂಲಗಳು ಹಾಗೂ ʻಬಸವ ಪುರಾಣʼದಂತಹ ಗ್ರಂಥಗಳಲ್ಲಿನ ನಿರೂಪಣೆಗಳನ್ನ ಆಧರಿಸಿದೆ. ಈ ಗ್ರಂಥಗಳ ಆಧಾರವಾಗಿ ಬಸವಣ್ಣನ ವಚನಗಳನ್ನ ತಾಳೆ ಹಾಕಿದಾಗ ಎಂತಹ ವೈರುಧ್ಯ ಸೃಷ್ಟಿಯಾಗುತ್ತದೆ. ಮೇಲಾಗಿ ವಚನಗಳು ಓದುಗರು ಅವರವರ ಭಾವಕ್ಕೆ ಅರ್ಥೈಸಿಕೊಳ್ಳುತ್ತಾರೆಯೇ ಹೊರತು ಅವುಗಳನ್ನುಹೀಗೆಯೇ ಅರ್ಥಮಾಡಿಕೊಳ್ಳಬೇಕು ಎಂದು ನಿರ್ದೇಶಿಸುವುದು ಸಲ್ಲದು. ಆ ಕಾರಣಕ್ಕಾಗಿ ಅವು ಧರ್ಮಗ್ರಂಥ ಎನ್ನಲು ಆಗದು.

ಐತಿಹಾಸಿಕ ಆಕರ – ಮೈಸೂರು ಗೆಜೆಟಿಯರ್, ಸಂಪುಟ 1, ಪುಟ 332 ರಲ್ಲಿ ಏನಿದೆ?
ʻʻಬಿಜ್ಜಳನು ಜೈನ ಧರ್ಮದವನಾಗಿದ್ದನು. ಈ ಹಿಂದೆ ವಿವರಿಸಿದಂತೆ, ಚಾಲುಕ್ಯರ ಸೇನೆಯ ದಂಡನಾಯಕನಾಗಿದ್ದ ತನ್ನ ಅಧಿಕಾರವನ್ನು ಬಳಸಿಕೊಂಡು ಸಿಂಹಾಸನವನ್ನು ವಶಪಡಿಸಿಕೊಂಡನು. ಆದರೆ ಹಲವಾರು ವರ್ಷಗಳವರೆಗೆ ರಾಜಪದವಿಯ ಬಿರುದುಗಳನ್ನ ಧರಿಸಲಿಲ್ಲ. ತನ್ನ ಅಧಿಕಾರವನ್ನು ಕಸಿದುಕೊಂಡ 6ನೇ ವರ್ಷವಾದ ಕ್ರಿ.ಶ. 1162ರಲ್ಲಿ, ದಕ್ಷಿಣಕ್ಕೆ ತೆರಳಿದ್ದ ಚಾಲುಕ್ಯ ರಾಜಕುಮಾರನ ವಿರುದ್ಧ ದಂಡಯಾತ್ರೆ ಕೈಗೊಂಡು, ತನ್ನನ್ನು ಸಾರ್ವಭೌಮನೆಂದು ಘೋಷಿಸಿಕೊಂಡನು.

Basavanna

ಅವನ ಆಳ್ವಿಕೆಯ ಅವಧಿಯಲ್ಲಿ, ಆರಾಧ್ಯನ ಮಗನಾದ ಬಸವನು ಕಲ್ಯಾಣಕ್ಕೆ ಬಂದು ನೆಲೆಸಿದನು. ಅಲ್ಲಿ ಅವನು ಮುಖ್ಯಮಂತ್ರಿಯ ಅಳಿಯನಾದನು. ಅವನಿಗೆ ಪದ್ಮಾವತಿ ಎಂಬ ಅತ್ಯಂತ ಸುಂದರಿಯಾದ ಸಹೋದರಿ ಇದ್ದಳು. ಬಿಜ್ಜಳನು ಅವಳನ್ನು ಕಂಡು ಮೋಹಗೊಂಡು ವಿವಾಹವಾದನು. ಹೀಗೆ ಕಾಲಕ್ರಮೇಣ ಬಸವನು ಮುಖ್ಯಮಂತ್ರಿಯೂ ಸೇನಾಧಿಪತಿಯೂ ಆದನು. ರಾಜನು ತನ್ನ ಸುಂದರ ಪತ್ನಿಯ ಮೋಹದಲ್ಲಿ ಮುಳುಗಿ, ಆಡಳಿತದ ಸಂಪೂರ್ಣ ಅಧಿಕಾರವನ್ನು ಬಸವನ ಕೈಗೆ ಬಿಟ್ಟುಕೊಟ್ಟನು. ಈ ಅವಕಾಶವನ್ನ ಬಳಸಿಕೊಂಡ ಬಸವನು ತನ್ನ ಪ್ರಭಾವವನ್ನ ಬಲಪಡಿಸಿಕೊಳ್ಳಲು ಆರಂಭಿಸಿದನು. ಹಳೆಯ ಅಧಿಕಾರಿಗಳನ್ನು ಸ್ಥಾನಚ್ಯುತಗೊಳಿಸಿ, ತನ್ನ ಅನುಯಾಯಿಗಳನ್ನು ಪ್ರಮುಖ ಹುದ್ದೆಗಳಿಗೆ ನೇಮಿಸಿದನು. ಅದೇ ಸಮಯದಲ್ಲಿ ರಾಜಕುಮಾರನ ವಿಶ್ವಾಸವನ್ನೂ ಗಳಿಸಲು ಪ್ರಯತ್ನಿಸಿದನು. ಈ ಕ್ರಮಗಳ ಮೂಲಕ ಹಾಗೂ ಹೊಸ ಧರ್ಮದ ಪ್ರಸಾರದ ಮೂಲಕ ಅವನ ಅಧಿಕಾರ ಮತ್ತು ಪ್ರಭಾವ ಬಹುಬೇಗ ಹೆಚ್ಚಾಯಿತು.

ಕೊನೆಗೆ ಬಿಜ್ಜಳನಿಗೆ ಬಸವನ ಪ್ರಭಾವದ ಬಗ್ಗೆ ಆತಂಕ ಉಂಟಾಗಿ, ಅವನನ್ನು ಬಂಧಿಸಲು ಪ್ರಯತ್ನಿಸಿದನು. ಆದರೆ ಬಸವನು ತಪ್ಪಿಸಿಕೊಂಡು, ತನ್ನನ್ನು ಹಿಂಬಾಲಿಸಲು ಕಳುಹಿಸಲಾದ ಸೈನಿಕರನ್ನು ಸೋಲಿಸಿದನು. ಅವನ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅವನೊಂದಿಗೆ ಸೇರಿಕೊಂಡರು. ದಂಗೆಯನ್ನು ಹತ್ತಿಕ್ಕಲು ಸ್ವತಃ ಬಿಜ್ಜಳನೇ ಮುನ್ನಡೆದಾಗ, ಅವನು ಸೋಲನುಭವಿಸಿ, ಬಸವನಿಗೆ ಮತ್ತೆ ಅವನ ಹಿಂದಿನ ಅಧಿಕಾರ ಮತ್ತು ಸ್ಥಾನಮಾನಗಳನ್ನು ನೀಡಬೇಕಾಯಿತು. ಬಸವನು ತನ್ನ ಹಿಂದಿನ ಅಧಿಕಾರವನ್ನು ಮರಳಿ ಪಡೆದದ್ದಷ್ಟೇ ಅಲ್ಲದೆ, ರಾಜನ ಪ್ರಾಣ ತೆಗೆಯುವ ಸಂಚನ್ನೂ ರೂಪಿಸಿದನು. ತನ್ನ ಸೋದರಳಿಯನಾದ ಬಿಜ್ಜಳ ಮತ್ತು ಪದ್ಮಾವತಿಯ ಮಗನು ಅಪ್ರಾಪ್ತ ವಯಸ್ಸಿನವನಾಗಿದ್ದಾಗ, ತಾನು ರಾಜ್ಯದ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವ ಉದ್ದೇಶವೂ ಈ ಸಂಚಿನ ಹಿಂದೆ ಇದ್ದಿರಬಹುದು.

ರಾಜನ ಹತ್ಯೆ ನಡೆದ ವಿಧಾನದ ಕುರಿತು ವಿವಿಧ ದಾಖಲೆಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಜೈನರ ಬಿಜ್ಜಳಾಂಕ ಕಾವ್ಯದ ಪ್ರಕಾರ, ಕೊಲ್ಲಾಪುರದ ಶಿಲಾಹಾರ ದೊರೆಯ ವಿರುದ್ಧದ ಯಶಸ್ವಿ ದಂಡಯಾತ್ರೆಯಿಂದ ಹಿಂದಿರುಗುವಾಗ ಭೀಮಾ ನದಿಯ ದಡದಲ್ಲಿ ಬಿಜ್ಜಳನಿಗೆ ವಿಷಪ್ರಾಶನ ಮಾಡಲಾಯಿತು. ಆದರೆ ಲಿಂಗಾಯತರ ಬಸವ ಪುರಾಣದ ಪ್ರಕಾರ, ಬಸವನ ಮೂವರು ಅನುಯಾಯಿಗಳು ಬಿಜ್ಜಳನನ್ನು ಹತ್ಯೆ ಮಾಡಿದರು. ಬಿಜ್ಜಳನ ಮಗನಾದ ರಾಯಮುರಾರಿ ಸೋವಿಯು ತನ್ನ ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದನು. ಆಗ ಬಸವನು ಮಲಬಾರ್ ಕರಾವಳಿಯ ಉಳಿವೆ ಅಥವಾ ವೃಷಭಪುರಕ್ಕೆ ಪಲಾಯನ ಮಾಡಿದನು. ರಾಜನು ಅವನನ್ನು ಹಿಂಬಾಲಿಸಿ ಆ ಸ್ಥಳಕ್ಕೆ ಮುತ್ತಿಗೆ ಹಾಕಿದನು. ಪರಿಸ್ಥಿತಿ ತೀವ್ರಗೊಂಡಾಗ ಬಸವನು ಹತಾಶನಾಗಿ ಬಾವಿಗೆ ಹಾರಿ ಮುಳುಗಿ ಮೃತಪಟ್ಟನೆಂದು ಒಂದು ನಿರೂಪಣೆ ಹೇಳುತ್ತದೆ. ಆದರೆ ಲಿಂಗಾಯತರ ನಂಬಿಕೆಯ ಪ್ರಕಾರ, ಮಲಪ್ರಭಾ ಮತ್ತು ಕೃಷ್ಣಾ ನದಿಗಳ ಸಂಗಮದಲ್ಲಿರುವ ಸಂಗಮೇಶ್ವರದಲ್ಲಿ ಬಸವನು ಲಿಂಗೈಕ್ಯನಾದನು.

ಬಿ.ಎಲ್ ರೈಸ್ ಅವರಿಗೆ ಸಂಬಂಧಿಸಿದ ಈ ಐತಿಹಾಸಿಕ ನಿರೂಪಣೆಯು ʻಬಸವ ಪುರಾಣʼದಲ್ಲಿ ಕಂಡುಬರುವ ಸಾಂಪ್ರದಾಯಿಕ ನಿರೂಪಣೆಗಿಂತ ಗಣನೀಯವಾಗಿ ಭಿನ್ನವಾಗಿದೆ. ಐತಿಹಾಸಿಕ ಹಾಗೂ ಸಾಹಿತ್ಯಿಕ ಮೂಲಗಳಲ್ಲಿರುವ ಇಂತಹ ಭಿನ್ನತೆಗಳು, ವೈರುಧ್ಯಗಳು ಮತ್ತು ವಿವಿಧ ವ್ಯಾಖ್ಯಾನಗಳ ಕುರಿತಾಗಿಯೇ ನಾನು ಸಂದರ್ಶನದಲ್ಲಿ ಚರ್ಚಿಸಲು ಪ್ರಯತ್ನಿಸಿದ್ದೆ.

basavanna

ಒಬ್ಬ ಸಂಶೋಧಕನಾಗಿ ರೈಸ್ ಅವರ ದಾಖಲಾತಿ ಹಾಗೂ ಜೈನ ಪುರಾಣಗಳಲ್ಲಿರುವ ಉಲ್ಲೇಖಗಳನ್ನು ಪ್ರಸ್ತಾಪಿಸುವುದು ಅತ್ಯಗತ್ಯ. ಏಕೆಂದರೆ ನಿಜವಾದ ಸಂಶೋಧಕನು ತನ್ನ ಅಧ್ಯಯನದಲ್ಲಿ ತನಗೆ ಅನುಕೂಲಕರವಾದ ಅಂಶಗಳನ್ನು ಮಾತ್ರವಲ್ಲದೆ, ತನ್ನ ನಿಲುವಿಗೆ ವಿರುದ್ಧವಾಗಿರುವ ದಾಖಲೆಗಳು ಮತ್ತು ಆಕರಗಳನ್ನೂ ಪ್ರಾಮಾಣಿಕವಾಗಿ ಉಲ್ಲೇಖಿಸಬೇಕು. ಇದೇ ಸಂಶೋಧನಾ ಧರ್ಮ. ಈ ಕಾರಣಕ್ಕಾಗಿಯೇ ಆ ಐತಿಹಾಸಿಕ ಉಲ್ಲೇಖವನ್ನು ನಾನು ಪ್ರಸ್ತಾಪಿಸಿದ್ದೇನೆ.

ಆದರೆ, ಒಂದು ಐತಿಹಾಸಿಕ ಗ್ರಂಥದಲ್ಲಿರುವ ವಿಷಯವನ್ನು ಉಲ್ಲೇಖಿಸುವುದು, ಪರಿಶೀಲಿಸುವುದು ಅಥವಾ ಪ್ರಶ್ನಿಸುವುದು ಎಂದರೆ ಆ ಗ್ರಂಥದಲ್ಲಿರುವ ಪ್ರತಿಯೊಂದು ಹೇಳಿಕೆಯನ್ನೂ ಒಪ್ಪಿಕೊಂಡಂತೆ ಆಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅದೇ ರೀತಿ, ಐತಿಹಾಸಿಕ ದಾಖಲೆಗಳಲ್ಲಿನ ಪರಸ್ಪರ ವಿರುದ್ಧವಾದ ನಿರೂಪಣೆಗಳನ್ನು ಚರ್ಚಿಸುವುದರಿಂದ ಆ ಐತಿಹಾಸಿಕ ವ್ಯಕ್ತಿಯ ವಿರುದ್ಧ ವೈಯಕ್ತಿಕ ತೀರ್ಪು ನೀಡಿದಂತೆಯೂ ಆಗುವುದಿಲ್ಲ.

ನಾನು ಶ್ರೀ ಬಸವಣ್ಣನವರನ್ನ ಕಳ್ಳ ಅಥವಾ ಕೊಲೆಗಾರ ಎಂದು ಕರೆದಿದ್ದೇನೆ ಎಂಬ ಆರೋಪವನ್ನು ಸಂಪೂರ್ಣವಾಗಿ ಮತ್ತು ಖಚಿತವಾಗಿ ತಳ್ಳಿಹಾಕುತ್ತೇನೆ. ಈ ಆರೋಪವು ನನ್ನ ಸಂದರ್ಶನದ ನೈಜ ಆಶಯ ಮತ್ತು ಸಂದರ್ಭವನ್ನು ತಪ್ಪಾಗಿ ಬಿಂಬಿಸುವುದಲ್ಲದೇ, ನಾನು ಹೇಳದ ಮಾತುಗಳನ್ನ ಮತ್ತು ಹೊಂದಿರದ ಉದ್ದೇಶಗಳನ್ನು ನನ್ನ ಮೇಲೆ ಆರೋಪಿಸುವ ಹತಾಶ ಪ್ರಯತ್ನವಾಗಿದೆ.

ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಗೆ ಸಂಬಂಧಿಸಿದ ಐತಿಹಾಸಿಕ ಚರ್ಚೆಗಳನ್ನು ಬೌದ್ಧಿಕ ಪ್ರಾಮಾಣಿಕತೆ, ಪರಸ್ಪರ ಗೌರವ ಮತ್ತು ಮೂಲ ಆಕರಗಳನ್ನ ಪರಿಶೀಲಿಸುವ ಮುಕ್ತ ಮನೋಭಾವದೊಂದಿಗೆ ನಡೆಸಬೇಕು ಎಂಬುದು ನನ್ನ ದೃಢವಾದ ನಿಲುವು. ನ್ಯಾಯಸಮ್ಮತವಾದ ಐತಿಹಾಸಿಕ ಚರ್ಚೆಯಲ್ಲಿ ಭಾಗವಹಿಸಿದ ಕಾರಣಕ್ಕೆ ಯಾವುದೇ ವ್ಯಕ್ತಿಯನ್ನು ತಪ್ಪಾಗಿ ಉಲ್ಲೇಖಿಸುವುದಾಗಲಿ, ವೈಯಕ್ತಿಕ ದಾಳಿಗೆ ಗುರಿಪಡಿಸುವುದಾಗಲಿ ಸರಿಯಲ್ಲ. ಆದ್ದರಿಂದ, ನನ್ನ ವಿರುದ್ಧ ಇಂತಹ ಆರೋಪಗಳನ್ನು ಮಾಡುತ್ತಿರುವವರು ಪ್ರತ್ಯೇಕ ಹೇಳಿಕೆಗಳನ್ನು ಅಥವಾ ಆಯ್ದ ವ್ಯಾಖ್ಯಾನಗಳನ್ನು ಆಧರಿಸುವ ಬದಲು, ದಯವಿಟ್ಟು ಸಂಪೂರ್ಣ ಸಂದರ್ಶನವನ್ನು ವೀಕ್ಷಿಸಿ, ಅದರ ನೈಜ ಸಂದರ್ಭ ಮತ್ತು ಆಶಯವನ್ನು ಅರ್ಥಮಾಡಿಕೊಳ್ಳಬೇಕೆಂದು ವಿನಂತಿಸುತ್ತೇನೆ.

ನನ್ನ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಆಧಾರರಹಿತವಾಗಿದ್ದು, ದಾರಿ ತಪ್ಪಿಸುವಂತಹವುಗಳಾಗಿವೆ. ಅಲ್ಲದೆ, ನನ್ನ ಚರ್ಚೆಯ ನೈಜ ವಿಷಯಕ್ಕೆ ಸಂಬಂಧವಿಲ್ಲದ ಬೇರೆ ಉದ್ದೇಶಗಳಿಂದ ಇಂತಹ ತಪ್ಪು ಚಿತ್ರಣ ನೀಡಲಾಗುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ರೀತಿಯ ತಪ್ಪು ವ್ಯಾಖ್ಯಾನಗಳ ಹಿಂದಿನ ಕಾರಣಗಳು ಏನೆಂಬುದು ಊಹಿಸಲು ಕಷ್ಟವೇನಲ್ಲ. ನನ್ನ ಉದ್ದೇಶ ಸದಾ ಜ್ಞಾನಪೂರ್ಣ ಸಂವಾದಕ್ಕೆ ಪ್ರೋತ್ಸಾಹ ನೀಡುವುದು, ಐತಿಹಾಸಿಕ ಸಂಶೋಧನೆಯನ್ನ ಉತ್ತೇಜಿಸುವುದು ಮತ್ತು ಕರ್ನಾಟಕದ ಪರಂಪರೆಯ ಕುರಿತು ಆಳವಾದ ಅರಿವು ಮೂಡಿಸುವುದೇ ಹೊರತು, ಬಸವಣ್ಣನವರ ವ್ಯಕ್ತಿತ್ವಕ್ಕೆ ಕಳಂಕ ತರುವುದು ಅಥವಾ ಅವರನ್ನು ಅಗೌರವಿಸುವುದಲ್ಲ.

ವೈಯಕ್ತಿಕವಾಗಿ, 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಹೆಜ್ಜೆಗಳನ್ನ ಇಟ್ಟು, ವೀರಶೈವ ಲಿಂಗಾಯತ ಧರ್ಮವನ್ನ ಹೊಸ ಎತ್ತರಕ್ಕೆ ಕೊಂಡೊಯ್ದ ಬಸವಣ್ಣನವರ ಬಗ್ಗೆ ನನಗೆ ಗೌರವವಿದೆ. ಹಾಗೆಂದು ಚಾರಿತ್ರಿಕ ಸತ್ಯವನ್ನ ಅಲ್ಲಗಳೆಯದೇ, ವಿಮರ್ಶಿಸಲಾಗದೇ, ಸಂಶೋಧಿಸಲಾಗದೇ ಇರಬೇಕು ಎನ್ನುವದು ಸಂವಿಧಾನ ವಿರೋಧಿ ನಡೆ ಎನಿಸುತ್ತದೆ. ಅಖಂಡ ಹಿಂದೂ ವೀರಶೈವ ಲಿಂಗಾಯತ ಧರ್ಮೀಯರು ಸಮಾಜದಲ್ಲಿ ಕುತಂತ್ರ, ಕಲುಷಿತ ವಾತಾವರಣವನ್ನು ಸೃಷ್ಟಿಸುತ್ತಿರುವ ಧರ್ಮ ಭಂಜಕರ ಬಗ್ಗೆ ಎಚ್ಚರ ವಹಿಸಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

Share This Article
Facebook Whatsapp Whatsapp Telegram Copy Link
Cinema News
Bhale Huchcha
ಹಾಡಾಗಿ ಬಂದ `ಭಲೇ ಹುಚ್ಚ’ – ಅಣ್ಣಾವ್ರ ಅಭಿಮಾನಿ ಕಥೆ
Pili Channe Tulu Movie
ಅಂತಾರಾಷ್ಟ್ರೀಯ ಚಿತ್ರೋತ್ಸವದ ಭಾರತೀಯ ಪನೋರಮಾಗೆ ತುಳು ಚಿತ್ರ
ramayana
ವಿಶ್ವದ ಟಾಪ್‌ 10 ಸಿನಿಮಾಗಳ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಯಶ್‌ ʻರಾಮಾಯಣʼ
Javed Akhtar
ಪ್ರತಿಯೊಬ್ಬ ಭಾರತೀಯನ ರಕ್ತದ ಕಣದಲ್ಲಿ ರಾಮನಿದ್ದಾನೆ – ಜಾವೇದ್ ಅಖ್ತರ್ ಹೇಳಿಕೆಗೆ ಮುಸ್ಲಿಂ ಮುಖಂಡರ ವಿರೋಧ

You Might Also Like

Cardiac Disease Cancer Hospital

ಮಂಡ್ಯ ಜನತೆಗೆ ಸಿಹಿಸುದ್ದಿ – ಡಿಸೆಂಬರ್‌ನಲ್ಲಿ ಜಯದೇವ ಹೃದ್ರೋಗ ಉಪಕೇಂದ್ರ, ಕ್ಯಾನ್ಸರ್ ಆಸ್ಪತ್ರೆ ಆರಂಭಕ್ಕೆ ಮಹತ್ವದ ನಿರ್ಧಾರ

49 minutes ago
Malaysia Visa

ಭಾರತೀಯರಿಗೆ ಇನ್ಮುಂದೆ ಮಲೇಷ್ಯಾಗೆ ವೀಸಾ ಕಡ್ಡಾಯ – 2027ರ ಜ.1ರಿಂದ ವೀಸಾ ರಹಿತ ಪ್ರವೇಶ ರದ್ದು

54 minutes ago
Padmaja Venugopal BJP

ಸಿದ್ಧಾಂತ ನೋಡದೇ ಪಕ್ಷ ಸೇರಿ ತಪ್ಪು ಮಾಡಿದೆ – ಬಿಜೆಪಿಗೆ ಕೇರಳ ಮಾಜಿ ಸಿಎಂ ಕರುಣಾಕರನ್ ಪುತ್ರಿ ಪದ್ಮಜಾ ವೇಣುಗೋಪಾಲ್ ರಾಜೀನಾಮೆ

57 minutes ago
Delhi Cab Protest

ಆಟೋ, ಟ್ಯಾಕ್ಸಿ ಮುಷ್ಕರದ ಬಿಸಿ – 300 ರೂ. ಇದ್ದ ಕ್ಯಾಬ್‌ ಪ್ರಯಾಣ ದರ ಏಕಾಏಕಿ 800 ರೂ.ಗೆ ಏರಿಕೆ!

1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
© Public TV. Design Company Knowtable. All Rights Reserved.
  • Privacy Policy
  • CSR-Policy
  • Terms of Service
  • POSH POLICY
  • Complaints Redressal
  • Terms and Conditions
  • Contact