-ರೈತರ ಹೋರಾಟಕ್ಕೆ ಬಿಜೆಪಿ-ಜೆಡಿಎಸ್ ಬೆಂಬಲ
ರಾಮನಗರ: ಬಿಡದಿ ಟೌನ್‌ಶಿಪ್ (Bidadi Township) ಜಟಾಪಟಿ ತೀವ್ರಗೊಂಡಿದ್ದು, ಯೋಜನೆಯ ಅಂತಿಮ ಅಧಿಸೂಚನೆ ಪ್ರಕಟ ಬೆನ್ನಲ್ಲೇ ರೈತರ (Farmers) ಆಕ್ರೋಶ ಸ್ಫೋಟಗೊಂಡಿದೆ. ಈ ಹಿನ್ನೆಲೆ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ರೈತರು ಸಿದ್ಧತೆ ನಡೆಸಿದ್ದಾರೆ. ಜೂ.22ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಬಿಜೆಪಿ-ಜೆಡಿಎಸ್ (BJP-JDS) ಕೂಡಾ ರೈತರ ಹೋರಾಟಕ್ಕೆ ಸಾಥ್ ನೀಡಲಿವೆ.
ರೈತರ ವಿರೋಧದ ನಡುವೆಯೂ ಬಿಡದಿ ಟೌನ್‌ಶಿಪ್‌ಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸರ್ಕಾರದ ವಿರುದ್ಧ ರೈತರ ಆಕ್ರೋಶ ಸ್ಫೋಟಗೊಂಡಿದೆ. ಬೃಹತ್ ಹೋರಾಟಕ್ಕೆ ರೈತಸಂಘ ಸಜ್ಜಾಗಿದೆ. ರಾಮನಗರದ ಎಪಿಎಂಸಿ ಆವರಣದ ರೈತಭವನದಲ್ಲಿ ಪೂರ್ವಭಾವಿ ಸಭೆ ನಡೆಸಿದ ಕರ್ನಾಟಕ ರಾಜ್ಯ ರೈತಸಂಘ, ಭೈರಮಂಗಲ ಚಲೋ ಹೋರಾಟಕ್ಕೆ ಕರೆಕೊಟ್ಟಿದೆ. ಜೂ.22ರ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಬಿಡದಿಯ ಬಿಜಿಎಸ್ ವೃತ್ತದಿಂದ ಭೈರಮಂಗಲ ಗ್ರಾಮದವರೆಗೂ ಬೈಕ್ ರ‍್ಯಾಲಿ ಹಾಗೂ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ಜೂನ್ 17 ರಂದು ಮೋದಿ – ಟ್ರಂಪ್ ದ್ವಿಪಕ್ಷೀಯ ಸಭೆ
ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕಾನೂನು ಹೋರಾಟಕ್ಕೂ ಸಿದ್ಧತೆ ನಡೆಸಿದೆ. ಯಾವುದೇ ಅಧಿಕಾರಿಗಳು ಗ್ರಾಮ ಪ್ರವೇಶ ಮಾಡದಂತೆ ತಡೆ ನೀಡುವ ಬಗ್ಗೆಯೂ ರೈತರು ಚಿಂತನೆ ಮಾಡಿದ್ದಾರೆ. ಜೂ.22ರ ಹೋರಾಟಕ್ಕೆ ಸುಮಾರು 7 ಜಿಲ್ಲೆಗಳಿಂದ 4 ಸಾವಿರ ರೈತರು ಆಗಮಿಸುವ ನಿರೀಕ್ಷೆ ಇದೆ. ರೈತರ ಹೋರಾಟಕ್ಕೆ ಬಿಜೆಪಿ-ಜೆಡಿಎಸ್ ಕೂಡಾ ಬೆಂಬಲ ಘೋಷಣೆ ಮಾಡಿದೆ. ವಿವಿಧ ಕಾರ್ಮಿಕ ಸಂಘಟನೆಗಳು, ಕನ್ನಡಪರ ಸಂಘಟನೆಗಳೂ ಕೂಡಾ ರೈತರ ಹೋರಾಟಕ್ಕೆ ಸಾಥ್ ನೀಡಿವೆ. ಇದನ್ನೂ ಓದಿ: ಗ್ಯಾರಂಟಿ ದುರ್ಬಳಕೆ ತಡೆಗೆ ಸ್ಮಾರ್ಟ್‌ಕಾರ್ಡ್ – ಲಂಚ ಕೇಳಿದ್ರೆ ದೂರು ನೀಡಲು ನಂಬರ್ ಡಿಸ್‌ಪ್ಲೇ
ರೈತರಿಗೆ ಜಿಬಿಡಿಎ ವತಿಯಿಂದ ನೋಟಿಸ್ ಜಾರಿ:
ಇನ್ನೂ ಮತ್ತೊಂದೆಡೆ ಟೌನ್‌ಶಿಪ್ ಅಂತಿಮ ಅಧಿಸೂಚನೆ ಕುರಿತು ರೈತರಿಗೆ ನೋಟಿಸ್ ನೀಡುವ ಕಾರ್ಯ ಭರದಿಂದ ಸಾಗಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನೋಟಿಸ್ ವಿತರಣೆ ಮಾಡಲಾಗುತ್ತಿದೆ. ಬಿಡದಿ ಹೋಬಳಿಯ ಕೆಂಪಯ್ಯನ ಪಾಳ್ಯ ಗ್ರಾಮದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ನೋಟಿಸ್ ವಿತರಣೆ ಮಾಡುತ್ತಿದ್ದಾರೆ. ಒಟ್ಟು 9 ಕಂದಾಯ ಗ್ರಾಮಗಳ ಪೈಕಿ 3 ಗ್ರಾಮಗಳ 518 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕೆಂಪಯ್ಯನಪಾಳ್ಯದ 598 ಖಾತೆದಾರರ ಭೂಸ್ವಾಧೀನ ಆಗಿದೆ. ಈ ಪೈಕಿ 180 ಮಂದಿ ಖಾತೆದಾರರು ಜಿಬಿಡಿಎ ನೋಟಿಸ್ ಸ್ವೀಕಾರ ಮಾಡಿ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನೂ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ರೈತರು ನೋಟಿಸ್ ತಿರಸ್ಕಾರ ಮಾಡಿದ್ದಾರೆ. ಈ ಮಧ್ಯೆ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಬಿಡದಿ ಹೋಬಳಿಯ ವಡೇರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ರೈತರಿಗೆ ಬೆಂಬಲಿಸಲಿದ್ದಾರೆ. ಹೋರಾಟದ ಕುರಿತು ರೈತರ ಜೊತೆ ಚರ್ಚೆ ಮಾಡಲಿದ್ದಾರೆ. ಇದನ್ನೂ ಓದಿ: ಯಾರ ಹತ್ರನೂ ಕೆಟ್ಟವನು ಅನ್ನಿಸಿಕೊಳ್ಳದೆ ಕೊನೆಯುಸಿರು ಎಳೆಯಬೇಕು: ಡಿ.ಕೆ ಸುರೇಶ್
ಪಬ್ಲಿಕ್ ಟಿವಿ ಜೊತೆ ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಿ, ನಾನು ಟೌನ್‌ಶಿಪ್ ಮಾಡಲು ಹೊರಟಿದ್ದು ನಿಜ. ಆದರೆ ರೈತರ ವಿರೋಧದಿಂದ ನಿಲ್ಲಿಸಿದೆ. ಆದರೆ ಈಗ ಏಕಾಏಕಿ ಡಿನೋಟಿಫಿಕೇಷನ್ ಹೊರಡಿಸಿದ್ದಾರೆ. ಮೊದಲು ಹೇಳಿದ್ದು 2 ಸಾವಿರ ಎಕರೆ ಸರ್ಕಾರಿ ಭೂಮಿ. ಈಗ 700 ಎಕರೆ ಸರ್ಕಾರಿ ಭೂಮಿ ಲೆಕ್ಕ ತೋರಿಸುತ್ತಿದ್ದಾರೆ. ಆ ಸರ್ಕಾರಿ ಭೂಮಿ ಎಲ್ಲೋಯ್ತು? ಯರ‍್ಯಾರ ಹೆಸರಿಗೆ ಏನೇನು ಮಾಡಿಕೊಂಡಿದ್ದೀರಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಅಲಿ ಖಮೇನಿ ಅಂತಿಮ ವಿದಾಯ – ಜುಲೈ 4 ರಂದೇ ಕಾರ್ಯಕ್ರಮ ಆರಂಭ ಯಾಕೆ?
ಇದಕ್ಕೆ ಸಿಎಂ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಜೆಡಿಎಸ್ ಹೋರಾಟ ಮಾಡಲಿ. ಕುಮಾರಸ್ವಾಮಿ ಹಾಕಿಕೊಟ್ಟ ಮಾರ್ಗದಲ್ಲೇ ಟೌನ್‌ಶಿಪ್ ಮಾಡಿತ್ತಿದ್ದೇವೆ. ಪ್ರಧಾನಿಯವರೇ ಶ್ಲಾಘಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಹಳ್ಳಕ್ಕೆ ಬಿದ್ದ ಬೈಕ್ – ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವನ ಸ್ಥಿತಿ ಗಂಭೀರ
ಒಟ್ಟಾರೆ ಬಿಡದಿ ಟೌನ್‌ಶಿಪ್ ಯೋಜನೆ ವಿಚಾರ ರಾಜಕೀಯ ಸಂಘರ್ಷಕ್ಕೂ ಕಾರಣವಾಗಿದ್ದು, ಡಿಕೆಶಿ ಹಾಗೂ ಹೆಚ್‌ಡಿಕೆ ನಡುವಿನ ವಾಕ್ಸಮರವನ್ನ ತೀವ್ರಗೊಳಿಸಿದೆ. ಇದನ್ನೂ ಓದಿ: ಮಾರ್ಕ್ಸ್ ಕಾರ್ಡ್ ದಂಧೆಯ ಸ್ಫೋಟಕ ಸತ್ಯ ಬಯಲು – ಕೃಷ್ಣದೇವರಾಯ ವಿವಿ ಕುಲಪತಿ ಮುಂದೆಯೇ ಮಧ್ಯವರ್ತಿ ಆಡಿಯೋ ಬಾಂಬ್!
