ಬೆಂಗಳೂರು: ಭವಾನಿ ಕೊಲೆ ಪ್ರಕರಣದಲ್ಲಿ (Bhavani Murder Case) ಬೆಚ್ಚಿಬೀಳಿಸುವ ಸಂಗತಿಗಳು ಒಂದೊಂದಾಗಿ ಹೊರಬರುತ್ತಿವೆ. ಆಟೋ ಚಾಲಕ ಚಂದ್ರಶೇಖರ್ ಅಲಿಯಾಸ್ ಚಂದ್ರು, ಭವಾನಿಗೆ ವಿಷ ಕುಡಿಸಿ ಕೊಲೆ ಮಾಡಿದ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದಂತೆ ನಾಟಕವಾಡಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಚಂದ್ರು ಮತ್ತು ಭವಾನಿ ಗುಟ್ಟಾಗಿ ಮದುವೆಯಾಗಿದ್ದರು ಎನ್ನಲಾಗಿದೆ. ಆದರೆ ಈ ಸಂಬಂಧ ಬಹಿರಂಗವಾಗುತ್ತಿದ್ದಂತೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು. ಘಟನೆಯ ದಿನ ಚಂದ್ರು ಭವಾನಿಗೆ ವಿಷ ಕುಡಿಸಿದ್ದಾನೆ. ಬಳಿಕ ಆಕೆ ಸಾವನ್ನಪ್ಪಿಲ್ಲ ಎಂದು ಶಂಕಿಸಿ ಕತ್ತು ಹಿಸುಕಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಉದ್ಧವ್ ಬಣದ ಸಂಸದರಿಗೆ 50 ಕೋಟಿ ಆಫರ್, 15 ಕೋಟಿ ಅಡ್ವಾನ್ಸ್: ಸಂಜಯ್ ರಾವತ್ ಬಾಂಬ್
ಘಟನೆಯ ನಂತರ ಚಂದ್ರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ, ತಾನು ಹಾಗೂ ಭವಾನಿ ಇಬ್ಬರೂ ವಿಷ ಸೇವಿಸಿದ್ದೇವೆ ಎಂಬ ರೀತಿಯ ಪೋಸ್ಟ್ ಹಾಕಿದ್ದಾನೆ ಎನ್ನಲಾಗಿದೆ. ಇದರಿಂದ ಪ್ರಕರಣವನ್ನು ಆತ್ಮಹತ್ಯೆಯಂತೆ ಬಿಂಬಿಸಲು ಯತ್ನಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ವಿಧವೆ ಮೇಲಿನ ಮೋಹಕ್ಕೆ ಪತ್ನಿಗೆ ಇಲಿ ಪಾಷಾಣ ಕುಡಿಸಿ ಚಟ್ಟಕಟ್ಟಿದ ಪತಿ

ಇದೇ ವೇಳೆ ಭವಾನಿ ಮನೆಯವರು ಹಲವು ಬಾರಿ ಕರೆ ಮಾಡಿದರೂ ಚಂದ್ರು ಫೋನ್ ಸ್ವೀಕರಿಸಿರಲಿಲ್ಲ. ಅನುಮಾನಗೊಂಡ ಕುಟುಂಬಸ್ಥರು ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದು, ಅವರು ಮನೆಗೆ ಬಂದು ನೋಡಿದಾಗ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಭಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಕ್ಷಣಾ ಕ್ಷೇತ್ರದಲ್ಲಿ ಭಾರತದ ಮಹತ್ವದ ಸಾಧನೆ – 1.78 ಲಕ್ಷ ಕೋಟಿ ರೂ. ತಲುಪಿದ ಉತ್ಪಾದನೆ
ಸ್ಥಳಕ್ಕೆ ಪೊಲೀಸರು ಮತ್ತು ಕುಟುಂಬಸ್ಥರು ಬಂದು ನೋಡಿದಾಗ ಭವಾನಿಯ ಮೃತದೇಹವನ್ನು ತಬ್ಬಿಕೊಂಡ ಸ್ಥಿತಿಯಲ್ಲಿ ಚಂದ್ರು ಮಲಗಿದ್ದ. ಪಕ್ಕದಲ್ಲೇ ವಿಷದ ಬಾಟಲಿ ಕೂಡ ಪತ್ತೆಯಾಗಿದ್ದರಿಂದ, ಮೊದಲಿಗೆ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಭಾವಿಸಿದ್ದರು. ಇದನ್ನೂ ಓದಿ: Tumakuru | ತೋಟಕ್ಕೆ ವಾಕಿಂಗ್ ತೆರಳಿದ್ದ ವೃದ್ಧೆಯ ಭೀಕರ ಕೊಲೆ
ಈ ಮಾಹಿತಿ ಹಿರಿಯ ಅಧಿಕಾರಿಗಳಿಗೂ ರವಾನೆಯಾಗಿತ್ತು. ಸುಮಾರು ಒಂದೂವರೆ ಗಂಟೆಗಳ ಕಾಲ ಚಂದ್ರು ಯಾವುದೇ ಚಲನವಲನವಿಲ್ಲದೆ ಮೃತದೇಹದ ಪಕ್ಕದಲ್ಲೇ ಮಲಗಿದ್ದ ಕಾರಣ ಆತ ಮೃತಪಟ್ಟಿದ್ದಾನೆ ಎಂಬ ಅನುಮಾನ ಮತ್ತಷ್ಟು ಬಲವಾಗಿತ್ತು. ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಜಟಾಪಟಿ – ಭೂಸ್ವಾಧೀನ ಆದೇಶ ತಕ್ಷಣ ಕೈ ಬಿಡಬೇಕು: ವಿಜಯೇಂದ್ರ ಆಗ್ರಹ

ಆದರೆ ಮೃತದೇಹಗಳನ್ನು ಅಂಬುಲೆನ್ಸ್‌ಗೆ ಸ್ಥಳಾಂತರಿಸುವ ವೇಳೆ ಚಂದ್ರುವಿನ ಕೈಕಾಲುಗಳು ಅಲ್ಲಾಡಿರುವುದು ಗಮನಕ್ಕೆ ಬಂದಿದೆ. ಇದರಿಂದ ಶಾಕ್ ಆದ ಪೊಲೀಸರು ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಚಂದ್ರು ಪ್ರಕರಣದ ನಿಜಾಂಶಗಳನ್ನು ಬಾಯ್ಬಿಟ್ಟಿದ್ದಾನೆ. ಭವಾನಿ ಸಾವಿಗೆ ಸಂಬಂಧಿಸಿದ ಹಲವು ಮಹತ್ವದ ಮಾಹಿತಿಗಳನ್ನು ಆತ ನೀಡಿರುವುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಎದೆ ಉರಿಯಿಂದ 4 ವರ್ಷದ ಬಾಲಕ ಸಾವು – ಹೃದಯಾಘಾತ ಶಂಕೆ
ಇನ್ನೊಂದೆಡೆ, ಚಂದ್ರು ಮತ್ತು ಭವಾನಿಯ ನಡುವಿನ ಸಂಬಂಧದ ಬಗ್ಗೆ ಆತನ ಪತ್ನಿಗೂ ಮಾಹಿತಿ ಇತ್ತು. ಇದೇ ವಿಚಾರವಾಗಿ ಪತ್ನಿ ಮತ್ತು ಚಂದ್ರು ನಡುವೆ ಹಲವು ಬಾರಿ ಜಗಳ ನಡೆದಿತ್ತು. ಅಷ್ಟೇ ಅಲ್ಲದೆ, ಭವಾನಿಯೊಂದಿಗೂ ಚಂದ್ರುವಿನ ಪತ್ನಿ ವಾಗ್ವಾದ ನಡೆಸಿದ್ದ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ. ಇದನ್ನೂ ಓದಿ: ಕಾಂಗ್ರೆಸ್, ಮೈತ್ರಿಪಕ್ಷಗಳ ನಡುವೆ ಬಿಡದಿ ಟೌನ್‌ಶಿಪ್ ಜಟಾಪಟಿ – ಪೋಸ್ಟರ್ ವಾರ್
ಚಂದ್ರುವಿನ ಪತ್ನಿಯೂ ಪ್ರೇಮ ವಿವಾಹ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದ್ದು, ಪ್ರಕರಣದ ವಿವಿಧ ಆಯಾಮಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಂದ್ರುವನ್ನು ವಶಕ್ಕೆ ಪಡೆಯಲು ಬ್ಯಾಡರಹಳ್ಳಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಸ್ಫೋಟಕ ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ. ಇದನ್ನೂ ಓದಿ: ಜೂ.22 ರವರೆಗೆ ನಿಷೇಧ – ಕೇಂದ್ರದ ಆದೇಶ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಟೆಲಿಗ್ರಾಮ್; ಇಂದು ವಿಚಾರಣೆ
