ಕಾನ್ಸಾಸ್ ಸಿಟಿ, ಮಿಸೌರಿ: ಆರೋಹೆಡ್ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್ (FIFA World Cup) 2026 ರ ಭಾರಿ ಕುತೂಹಲ ಕೆರಳಿಸಿದ್ದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟಿನಾ(Argentina) ತಂಡವು ಸ್ವಿಜರ್ಲ್ಯಾಂಡ್(Switzerland) ವಿರುದ್ಧ 3-1 ಗೋಲುಗಳ ರೋಮಾಂಚಕ ಜಯ ಸಾಧಿಸಿದೆ.
ನಿಗದಿತ 90 ನಿಮಿಷಗಳ ಆಟದಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದರಿಂದ, ಪಂದ್ಯವು ಹೆಚ್ಚುವರಿ ಸಮಯಕ್ಕೆ (Extra Time) ತಲುಪಿತು. ಅಲ್ಲಿ ಅರ್ಜೆಂಟಿನಾ ಆಟಗಾರರು ಅಬ್ಬರಿಸುವ ಮೂಲಕ ಸೆಮಿಫೈನಲ್‌ಗೆ ಟಿಕೆಟ್ ಪಡೆದುಕೊಂಡಿದ್ದಾರೆ.
ಪಂದ್ಯದ 10ನೇ ನಿಮಿಷದಲ್ಲೇ ಅಲೆಕ್ಸಿಸ್ ಮ್ಯಾಕ್ ಅಲ್ಲಿಸ್ಟರ್ ಅವರು ಲಿಯೋನೆಲ್ ಮೆಸ್ಸಿ ನೀಡಿದ ಅದ್ಭುತ ಕಾರ್ನರ್ ಕ್ರಾಸ್ ನೆರವಿನಿಂದ ಹೆಡರ್ ಮೂಲಕ ಗೋಲು ಬಾರಿಸಿ ಅರ್ಜೆಂಟಿನಾಗೆ 1-0 ಮುನ್ನಡೆ ತಂದುಕೊಟ್ಟರು. ಪಂದ್ಯದ 67ನೇ ನಿಮಿಷದಲ್ಲಿ ಸ್ವಿಟ್ಜರ್ಲ್ಯಾಂಡ್‌ನ ಡನ್ ಎನ್ಡೊಯೆ ಅವರು ಅತ್ಯಂತ ಹತ್ತಿರದಿಂದ ಚೆಂಡನ್ನು ಗೋಲು ಪೆಟ್ಟಿಗೆಗೆ ತಳ್ಳುವ ಮೂಲಕ 1-1 ರಿಂದ ಸಮಬಲ ತಂದರು. ಇದನ್ನೂ ಓದಿ: ಬೆಲ್ಲಿಂಗ್‌ಹ್ಯಾಂ ಮ್ಯಾಜಿಕ್, ಹಾಲಂಡ್ ಎಡವಟ್ಟು – ನಾರ್ವೆ ವಿರುದ್ಧ ಗೆದ್ದು ಸೆಮಿಗೆ ಇಂಗ್ಲೆಂಡ್ ಎಂಟ್ರಿ
Julian Alvarez winning goal in Argentina vs Switzerland FIFA World Cup Quarterfinal game pic.twitter.com/innFIZztnu
— Daily Foot Vibes (@dailyfootvibes) July 12, 2026
72ನೇ ನಿಮಿಷದಲ್ಲಿ ಸ್ವಿಜರ್ಲ್ಯಾಂಡ್‌ನ ಬ್ರೀಲ್ ಎಂಬೊಲೊ ಅವರು ಡೈವ್ ಮಾಡುವ ಮೂಲಕ ಫೌಲ್ ನಾಟಕ ಆಡಿದ್ದಕ್ಕಾಗಿ ಎರಡನೇ ಹಳದಿ ಕಾರ್ಡ್ ಪಡೆದು ಮೈದಾನದಿಂದ ಹೊರನಡೆದರು. ಇದು ಈ ಪಂದ್ಯದಲ್ಲಿ ದೊಡ್ಡ ತಿರುವು ನೀಡಿದ್ದು ಮಾತ್ರವಲ್ಲದೇ ಸ್ವಿಸ್ ತಂಡ 10 ಆಟಗಾರರಿಗೆ ಸೀಮಿತವಾಯಿತು. ಇದನ್ನೂ ಓದಿ: ಕ್ಯಾಮೆರಾ ಕೇಬಲ್‌ಗೆ ತಗುಲಿತ್ತೇ ಚೆಂಡು?- ವಿಡಿಯೋ ನೋಡಿ ನಾರ್ವೆ ಕೆಂಡಾಮಂಡಲ, ತಪ್ಪು ಸಂಭವಿಸಿಲ್ಲ ಎಂದ ಫಿಫಾ
Com 39 anos, em sua última Copa, Lionel Messi participou de todos os gols da Argentina neste Mundial 2026. Seja dando assistência ou marcando gol. Surreal!
📽️@TaylorBurr10pic.twitter.com/z2WB2zR8nL
— LIBERTA DEPRE (@liberta___depre) July 12, 2026
ಪಂದ್ಯ ಮುಕ್ತಾಯದ ಕೊನೆಯ ಕ್ಷಣದಲ್ಲಿ (120ನೇ ನಿಮಿಷ) ಲೌಟಾರೋ ಮಾರ್ಟಿನೆಜ್ ಮತ್ತೊಂದು ಗೋಲು ಬಾರಿಸಿ ಅರ್ಜೆಂಟಿನಾದ 3-1 ಭರ್ಜರಿ ಜಯವನ್ನು ಖಚಿತಪಡಿಸಿದರು.
ಈ ಗೆಲುವಿನೊಂದಿಗೆ ಲಿಯೋನೆಲ್ ಸ್ಕಾಲೋನಿ ಮಾರ್ಗದರ್ಶನದ ಅರ್ಜೆಂಟಿನಾ ತಂಡವು ವಿಶ್ವಕಪ್‌ನಲ್ಲಿ ತನ್ನ ಸತತ 12 ಪಂದ್ಯಗಳ ಅಜೇಯ ಓಟವನ್ನು ಮುಂದುವರಿಸಿದೆ. ಜುಲೈ 15 ರಂದು ಅಟ್ಲಾಂಟಾದಲ್ಲಿ ನಡೆಯಲಿರುವ ಹೈ-ವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
