‘ರಾಮಾಯಣ’ (Ramayana Film) ಚಿತ್ರದ ಪ್ರೀಮಿಯರ್ ಪ್ರದರ್ಶನದಲ್ಲಿ ಪತ್ನಿ ರಾಧಿಕಾ ಪಂಡಿತ್ (Radhika Pandit) ಜೊತೆ ಯಶ್ ಮಿಂಚಿದ್ದಾರೆ. ಚಿತ್ರತಂಡದ ಹಲವು ಕಲಾವಿದರು ಹಾಜರಿದ್ದರೂ, ಯಶ್ ಮತ್ತು ರಾಧಿಕಾ ಜೋಡಿಯ (Yash-Radhika) ಲುಕ್ ವಿಶೇಷವಾಗಿ ಗಮನ ಸೆಳೆದಿದೆ.
ಪ್ರೀಮಿಯರ್ ಪ್ರದರ್ಶನಕ್ಕೆ ಪತ್ನಿ ರಾಧಿಕಾ ಪಂಡಿತ್ ಅವರ ಕೈಹಿಡಿದು ಬಂದ ಯಶ್ಗೆ ಅಮೆರಿಕದಲ್ಲಿರುವ ಭಾರತೀಯರು, ಅಮೆರಿಕದ ನಿವಾಸಿಗಳು ಹಾಗೂ ಸಾಮಾಜಿಕ ಜಾಲತಾಣದ ಇನ್ಫ್ಲುಯೆನ್ಸರ್ಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಯಶ್ ಅವರನ್ನು ಕಂಡ ಅಭಿಮಾನಿಗಳು ‘ರಾವಣ ರಾವಣ’ ಎಂದು ಕೂಗಿದ್ದು, ಥಿಯೇಟರ್ನಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಯಿತು.
ರಣಬೀರ್ ಕಪೂರ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೂ, ಯಶ್ ಅವರ ಆಗಮನ ಅಭಿಮಾನಿಗಳಲ್ಲಿ ವಿಶೇಷ ಉತ್ಸಾಹ ಮೂಡಿಸಿದೆ.
ಅಮೆರಿಕದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹಸಿರು ಸೀರೆಯಲ್ಲಿ ರಾಧಿಕಾ ಮಿಂಚಿದರೆ, ಯಶ್ ತಮ್ಮ ವಿಭಿನ್ನ ಲುಕ್ನಿಂದ ಗಮನ ಸೆಳೆದಿದ್ದಾರೆ. ಈ ಜೋಡಿಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ.ಇದನ್ನೂ ಓದಿ: ಶೆಡ್ ಬಳಿ ದರ್ಶನ್, ಪವಿತ್ರಾ ಗೌಡ ಬಂದಿರಲಿಲ್ಲ – ಉಲ್ಟಾ ಹೊಡೆದ ಐ ವಿಟ್ನೆಸ್ ಪುನೀತ್
‘ರಾಮಾಯಣ’ ಚಿತ್ರದಲ್ಲಿ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರದ ಬಗ್ಗೆ ಈಗಾಗಲೇ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ. ಲಾಸ್ ಏಂಜಲೀಸ್ನ ಪ್ರೀಮಿಯರ್ನಲ್ಲಿ ಅಭಿಮಾನಿಗಳು ತೋರಿದ ಉತ್ಸಾಹ, ಯಶ್ ಅವರ ಅಂತರರಾಷ್ಟ್ರೀಯ ಅಭಿಮಾನಿ ಬಳಗದ ಗಮನ ಸೆಳೆಯುವ ಮತ್ತೊಂದು ಕ್ಷಣವಾಗಿದೆ.
‘ರಾಮಾಯಣ’ ಚಿತ್ರದ ಪ್ರೀಮಿಯರ್ನಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಜೋಡಿ ಗಮನ ಸೆಳೆದಿದ್ದು, ರಾವಣನ ಪಾತ್ರದಲ್ಲಿ ಯಶ್ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.ಇದನ್ನೂ ಓದಿ: ಉತ್ತರ ಪ್ರದೇಶ ಮತದಾರರ ಪಟ್ಟಿಯಲ್ಲಿ ಲೋಪ; ಹೃತಿಕ್ ಹೆಸರಿನಲ್ಲಿ 2, ಸೈಫ್ ಅಲಿ ಖಾನ್ ಹೆಸರಿನಲ್ಲಿ 3 ಐಡಿ
