ಕಾನ್ಸಾಸ್ ಸಿಟಿ, ಮಿಸೌರಿ: ಫಿಫಾ ವಿಶ್ವಕಪ್ (FIFA World Cup) 2026 ರ ಹೈ-ವೋಲ್ಟೇಜ್ ಅರ್ಜೆಂಟಿನಾ ವಿರುದ್ದದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸ್ವಿಜರ್ಲ್ಯಾಂಡ್ ತಂಡದ ಪ್ರಮುಖ ಸ್ಟ್ರೈಕರ್ ಬ್ರೀಲ್ ಎಂಬೊಲೊ(Breel Embolo) ಅವರಿಗೆ ರೆಡ್ ಕಾರ್ಡ್ (Red Card) ನೀಡಿದ್ದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪಂದ್ಯವು 1-1 ಗೋಲುಗಳಿಂದ ರೋಮಾಂಚನಕಾರಿಯಾಗಿ ಸಾಗುತ್ತಿದ್ದಾಗ ಹಾಗೂ ಸ್ವಿಜರ್ಲ್ಯಾಂಡ್ ಭರ್ಜರಿ ಫಾರ್ಮ್‌ನಲ್ಲಿದ್ದಾಗಲೇ ಎಂಬೊಲೊ ಅವರಿಗೆ ರೆಡ್ ಕಾರ್ಡ್ ನೀಡಲಾಯಿತು. ಇದು ಇಡೀ ಪಂದ್ಯಕ್ಕೆ ದೊಡ್ಡ ತಿರುವು ನೀಡಿತಲ್ಲದೆ ಸ್ವಿಸ್ ಪಡೆ ಕೇವಲ 10 ಆಟಗಾರರೊಂದಿಗೆ ಹೋರಾಡಬೇಕಾದ ಅನಿವಾರ್ಯತೆಗೆ ಸಿಲುಕಿತು.
ರೆಡ್ ಕಾರ್ಡ್ ಯಾಕೆ?
ಪಂದ್ಯದ ಮೊದಲಾರ್ಧದಲ್ಲಿ ಅರ್ಜೆಂಟಿನಾದ(Argentina) ಆಟಗಾರನ ವಿರುದ್ಧ ಕಠಿಣವಾಗಿ ಫೌಲ್ ಮಾಡಿದ್ದಕ್ಕಾಗಿ ಎಂಬೊಲೊ ಅವರಿಗೆ 44ನೇ ನಿಮಿಷದಲ್ಲಿ ಮೊದಲ ಹಳದಿ ಕಾರ್ಡ್ ನೀಡಲಾಗಿತ್ತು.
ಪಂದ್ಯದ 72ನೇ ನಿಮಿಷದಲ್ಲಿ ಎಂಬೊಲೊ ಅವರು ಅರ್ಜೆಂಟಿನಾದ ಪೆನಾಲ್ಟಿ ಬಾಕ್ಸ್‌ನೊಳಗೆ ನುಗ್ಗಲು ಪ್ರಯತ್ನಿಸಿದರು. ಈ ವೇಳೆ ಅರ್ಜೆಂಟಿನಾದ ಮಿಡ್‌ಫೀಲ್ಡರ್ ಲಿಯಾಂಡ್ರೊ ಪರೇಡೆಸ್ ಅವರ ತೀವ್ರ ಒತ್ತಡಕ್ಕೆ ಸಿಲುಕಿದ ಸ್ವಿಸ್ ಫಾರ್ವರ್ಡ್ ಆಟಗಾರ ಎಂಬೊಲೊ ಮೈದಾನದಲ್ಲಿ ಕೆಳಗೆ ಬಿದ್ದರು. ಇದನ್ನೂ ಓದಿ: 10 ಆಟಗಾರರ ಸ್ವಿಸ್ ಪಡೆ ಮಣಿಸಿ ಸೆಮಿಫೈನಲ್‌ಗೆ ಅರ್ಜೆಂಟಿನಾ ಲಗ್ಗೆ
I’m sorry but if you think this wasn’t a dive from Embolo you shouldn’t watch football again in your life, this sport isn’t meant for you
Even the commentators knew it was a dive.
Simulation of play pic.twitter.com/e2TI4b3Agj
— Emmitt (@EmmittePaah) July 12, 2026
ಇದನ್ನು ನೋಡಿದ ಮುಖ್ಯ ರೆಫ್ರಿ ಜೊವಾವೊ ಪಿನ್ಹೈರೊ ಅವರು ಪರೇಡೆಸ್ ಅವರೇ ಎಂಬೊಲೊ ವಿರುದ್ಧ ಫೌಲ್ ಮಾಡಿದ್ದಾರೆ ಎಂದು ತಪ್ಪಾಗಿ ಭಾವಿಸಿದರು. ತಕ್ಷಣವೇ ಆಟ ನಿಲ್ಲಿಸಿದ ರೆಫ್ರಿ ಪರೇಡೆಸ್ ಅವರಿಗೆ ಹಳದಿ ಕಾರ್ಡ್ (Yellow Card) ಪ್ರದರ್ಶಿಸಿ ಶಿಕ್ಷೆ ನೀಡಿದರು.
ಫಿಫಾದ ವಿಸ್ತೃತ ವಿಡಿಯೋ ಅಸಿಸ್ಟೆಂಟ್ ರೆಫ್ರಿ (VAR) ಪ್ರೊಟೊಕಾಲ್ ಅಡಿಯಲ್ಲಿ ಈ ಘಟನೆಯನ್ನು ತಕ್ಷಣವೇ ಮರುಪರಿಶೀಲನೆಗೆ ಒಳಪಡಿಸಲಾಯಿತು. ಹಳದಿ ಕಾರ್ಡ್ ನೀಡುವಲ್ಲಿ ಆಟಗಾರರ ಗುರುತು ತಪ್ಪಾಗಿದ್ದರೆ ಅಥವಾ ತಪ್ಪು ತೀರ್ಪು ನೀಡಿದ್ದರೆ ಅದನ್ನು ಸರಿಪಡಿಸಲು ಈ ನಿಯಮ ರೆಫ್ರಿಗೆ ಅವಕಾಶ ನೀಡುತ್ತದೆ. ಇದನ್ನೂ ಓದಿ: ಕ್ಯಾಮೆರಾ ಕೇಬಲ್‌ಗೆ ತಗುಲಿತ್ತೇ ಚೆಂಡು?- ವಿಡಿಯೋ ನೋಡಿ ನಾರ್ವೆ ಕೆಂಡಾಮಂಡಲ, ತಪ್ಪು ಸಂಭವಿಸಿಲ್ಲ ಎಂದ ಫಿಫಾ
Embolo llorando y destrozado tras la injusticia.
ES INCREÍBLE 🫠🫠🫠pic.twitter.com/k9HEZE6XFP
— (fan) REAL MADRID FANS 🤍 (@AdriRM33) July 12, 2026
ರಿಪ್ಲೇ ನೋಡಿದ ತಕ್ಷಣ ಮೈದಾನಕ್ಕೆ ಮರಳಿದ ರೆಫ್ರಿ ಪರೇಡೆಸ್ ಅವರಿಗೆ ನೀಡಿದ್ದ ಹಳದಿ ಕಾರ್ಡ್ ಅನ್ನು ರದ್ದುಗೊಳಿಸಿದರು. ಅದರ ಬದಲಾಗಿ ನಾಟಕ ಆಡಿ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿ ವರ್ತಿಸಿದ್ದಕ್ಕಾಗಿ ಎಂಬೊಲೊ ಅವರಿಗೆ ಎರಡನೇ ಹಳದಿ ಕಾರ್ಡ್ ಪ್ರದರ್ಶಿಸಿದರು. ಈಗಾಗಲೇ ಮೊದಲಾರ್ಧದಲ್ಲಿ ಒಂದು ಹಳದಿ ಕಾರ್ಡ್ ಪಡೆದಿದ್ದ ಎಂಬೊಲೊ ಈ ಎರಡನೇ ಕಾರ್ಡ್‌ನೊಂದಿಗೆ ರೆಡ್ ಕಾರ್ಡ್ ಪಡೆದು ಮೈದಾನದಿಂದ ಹೊರನಡೆಯಬೇಕಾಯಿತು. ನಿಯಮಗಳ ಪ್ರಕಾರ ಒಬ್ಬ ಆಟಗಾರ ಎರಡು ಹಳದಿ ಕಾರ್ಡ್ ಪಡೆದರೆ ಅದು ಸ್ವಯಂಚಾಲಿತವಾಗಿ ರೆಡ್ ಕಾರ್ಡ್ ಆಗಿ ಬದಲಾಗುತ್ತದೆ.
ಎಂಬೊಲೊ ಹೊರನಡೆದಿದ್ದರಿಂದ ಸ್ವಿಸ್ ತಂಡವು ಕೇವಲ 10 ಆಟಗಾರರೊಂದಿಗೆ ಪಂದ್ಯವನ್ನು ಮುಂದುವರಿಸಬೇಕಾಯಿತು. ನಿಗದಿತ ಸಮಯದವರೆಗೂ (90 ನಿಮಿಷ) ಡಿಫೆನ್ಸ್ ಆಟ ಆಡಿ 1-1 ಸಮಬಲ ಕಾಯ್ದುಕೊಳ್ಳುವಲ್ಲಿ ಸ್ವಿಸ್ ಪಡೆ ಯಶಸ್ವಿಯಾಯಿತಾದರೂ, ಹೆಚ್ಚುವರಿ ಸಮಯದಲ್ಲಿ (Extra Time) ಹತ್ತು ಆಟಗಾರರ ದಣಿದ ಪಡೆಯನ್ನು ಅರ್ಜೆಂಟಿನಾ ಸುಲಭವಾಗಿ ಮಣಿಸಿ 3-1 ರಿಂದ ಜಯಭೇರಿ ಬಾರಿಸಿತು. ಎಂಬೊಲೊ ಮಾಡಿದ ಆ ಒಂದು ಸಣ್ಣ ತಪ್ಪು ಸ್ವಿಜರ್ಲ್ಯಾಂಡ್ ತಂಡ ವಿಶ್ವಕಪ್‌ನಿಂದಲೇ ಹೊರಬೀಳುವಂತೆ ಮಾಡಿತು.
