ರಾಮನಗರ: ಕಾಂಗ್ರೆಸ್ (Congress) ಹಾಗೂ ಮೈತ್ರಿಪಕ್ಷಗಳ ನಡುವೆ ಬಿಡದಿ ಟೌನ್‌ಶಿಪ್ (Bidadi Township) ಜಟಾಪಟಿ ಜೋರಾಗಿದ್ದು, ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದ ಬಿಜೆಪಿ-ಜೆಡಿಎಸ್ (BJP-JDS) ವಿರುದ್ಧ ಕಾಂಗ್ರೆಸ್ ಪೋಸ್ಟರ್ ವಾರ್ ಆರಂಭಿಸಿದೆ.
ಇಂದು ಬಿಡದಿಗೆ ಬಿಜೆಪಿ ನಿಯೋಗ ಭೇಟಿ ಹಿನ್ನೆಲೆ ಕಾಂಗ್ರೆಸ್ ಪೋಸ್ಟರ್‌ಗಳನ್ನ (Poster) ಅಂಟಿಸಿ ಬಿಜೆಪಿಯನ್ನ ಟೀಕಿಸಿದೆ. ಯೋಜನೆ ವಿರುದ್ಧ ಪಾದಯಾತ್ರೆಗೆ ಕರೆ ನೀಡಿರುವ ಜೆಡಿಎಸ್ ವಿರುದ್ಧವೂ ಪೋಸ್ಟರ್ ಹಾಕಿ ವ್ಯಂಗ್ಯಮಾಡಿದೆ. ರೈತರ ಭೂಮಿ ಕದ್ದ ಆರ್.ಅಶೋಕ್, ಬಿರಿಯಾನಿ ಅಡ್ಡೆಯ ಚಿಲ್ಲರೆ ನಾರಾಯಣಸ್ವಾಮಿ, ಆರ್‌ಟಿಜಿಎಸ್ ಕಳ್ಳ ವಿಜಯೇಂದ್ರಗೆ ಬಿಡದಿ ಟೌನ್ ಶಿಪ್‌ಗೆ ಸ್ವಾಗತ ಎಂದು ಪೋಸ್ಟರ್ ಅಂಟಿಸಲಾಗಿದೆ. ಇದನ್ನೂ ಓದಿ: ಜೂ.22 ರವರೆಗೆ ನಿಷೇಧ – ಕೇಂದ್ರದ ಆದೇಶ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಟೆಲಿಗ್ರಾಮ್; ಇಂದು ವಿಚಾರಣೆ

ಅಲ್ಲದೇ ಹೆಚ್‌ಡಿಕೆ, ನಿಖಿಲ್, ಅನಿತಾ ಕುಮಾರಸ್ವಾಮಿ ಫೋಟೋವನ್ನೂ ಹಾಕಿ ಬೇನಾಮಿ ಆಸ್ತಿ ಒಡೆಯ ಎಂದು ಕಾಂಗ್ರೆಸ್ ಕಾರ್ಯಕರ್ತರು ಬಿಡದಿಯ ಹಲವೆಡೆ ಪೋಸ್ಟರ್ ಅಂಟಿಸಿ ಮೈತ್ರಿ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ನೀಟ್ ವಿದ್ಯಾರ್ಥಿಗಳಿಗೆ ಪ್ರಯಾಣದಲ್ಲಿ 50% ರಿಯಾಯತಿ – ಯೋಗಿ ಸರ್ಕಾರದಿಂದ ಆದೇಶ
