ಕರಾವಳಿ ಕರ್ನಾಟಕದ ಮೂರೂ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಇಂದು ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಇದರೊಂದಿಗೆ ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿಯೂ ಜುಲೈ 13 ರಿಂದ 15ರ ಅವಧಿಯಲ್ಲಿ ಸಾಧಾರಣ ಮಳೆ ಸುರಿಯಲಿದೆ. ಜು.15ರವರೆಗೆ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವಾಮಾನ ಇರುವ ಸಾಧ್ಯತೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 31-20
ಮಂಗಳೂರು: 31-26
ಶಿವಮೊಗ್ಗ: 30-22
ಬೆಳಗಾವಿ: 28-22
ಮೈಸೂರು: 31-21
ಮಂಡ್ಯ: 32-21
ಮಡಿಕೇರಿ: 26-20
ರಾಮನಗರ: 32-21
ಹಾಸನ: 28-19
ಚಾಮರಾಜನಗರ: 32-21
ಚಿಕ್ಕಬಳ್ಳಾಪುರ: 32-20

ಕೋಲಾರ: 32-21
ತುಮಕೂರು: 31-20
ಉಡುಪಿ: 31-26
ಕಾರವಾರ: 29-28
ಚಿಕ್ಕಮಗಳೂರು: 24-19
ದಾವಣಗೆರೆ: 30-23
ಹುಬ್ಬಳ್ಳಿ: 29-23
ಚಿತ್ರದುರ್ಗ: 30-22
ಹಾವೇರಿ: 29-23
ಬಳ್ಳಾರಿ: 33-24
ಗದಗ: 29-22
ಕೊಪ್ಪಳ: 32-23

ರಾಯಚೂರು: 34-25
ಯಾದಗಿರಿ: 34-25
ವಿಜಯಪುರ: 32-23
ಕಲಬುರಗಿ: 33-24
ಬಾಗಲಕೋಟೆ: 32-23
