ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ (NEET Question Paper Leak) ಹಿನ್ನೆಲೆಯಲ್ಲಿ ಜೂನ್ 22 ರ ವರೆಗೆ ಭಾರತದಲ್ಲಿ ಟೆಲಿಗ್ರಾಮ್ ಅಪ್ಲಿಕೇಶನ್ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರದ ಈ ಆದೇಶ ಪ್ರಶ್ನಿಸಿ ಟೆಲಿಗ್ರಾಮ್ (Telegram) ಸಂಸ್ಥೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.
ದೆಹಲಿ ಹೈಕೋರ್ಟ್‌ಗೆ (Delhi Highcourt) ಟೆಲಿಗ್ರಾಮ್ ಅರ್ಜಿ ಸಲ್ಲಿಸಿದ್ದು, ಆದೇಶವನ್ನು ಮರುಪರಿಶೀಲಿಸುವಂತೆ ಕೋರಿದೆ. ಇಂದು ನ್ಯಾಯಮೂರ್ತಿ ತೇಜಸ್ ಕರಿಯಾ ನೇತೃತ್ವದ ಪೀಠ ಅರ್ಜಿ ವಿಚಾರಣೆ ನಡೆಸಲಿದೆ. ಇದನ್ನೂ ಓದಿ: ಜೂ.22 ರವರೆಗೆ ದೇಶದಲ್ಲಿ ಟೆಲಿಗ್ರಾಂ ನಿಷೇಧ – ನೀಟ್ ಮರು ಪರೀಕ್ಷೆಗೂ ಮುನ್ನ ಕೇಂದ್ರ ಆದೇಶ

ಒಂದು ದಿನದ ಹಿಂದೆಯಷ್ಟೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಶಿಫಾರಸಿನ ಮೇರೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಈ ಆದೇಶ ಹೊರಡಿಸಿತು. ಈ ನಿರ್ಧಾರದ ಜೊತೆ ಜೂನ್ 30ರ ವರೆಗೆ ಹಳೆಯ ಸಂದೇಶಗಳನ್ನು ಎಡಿಟ್ ಮಾಡುವ ವೈಶಿಷ್ಟ್ಯವನ್ನು (Message Editing Feature) ನಿಷ್ಕ್ರಿಯಗೊಳಿಸಲಾಗಿದೆ. ಜೂನ್ 21 ರಂದು ನೀಟ್ ಮರುಪರೀಕ್ಷೆ ನಡೆಯಲಿರುವ ಹಿನ್ನೆಲೆ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಅಕ್ರಮಗಳನ್ನ ತಡೆಯಲು ಕೇಂದ್ರ ಈ ಕಠಿಣ ಕ್ರಮ ಕೈಗೊಂಡಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಶಿಫಾರಸಿನ ಮೇರೆಗೆ ʻಮಾಹಿತಿ ತಂತ್ರಜ್ಞಾನ ಕಾಯ್ದೆ-2020 ರ ಸೆಕ್ಷನ್ 69Aʼ ಅಡಿಯಲ್ಲಿ ಟೆಲಿಗ್ರಾಂ ಗೆ ತಾತ್ಕಾಲಿಕ ನಿರ್ಬಂಧ ಹೇರಿದೆ. ಇದನ್ನೂ ಓದಿ: NEET Paper Leak| ಟೆಲಿಗ್ರಾಮ್ ಮೇಲೆ ಕ್ರಮ – ವಾಟ್ಸಪ್ ಮೇಲೆ ನಿಷೇಧ ಯಾಕಿಲ್ಲ?
ವಿದ್ಯಾರ್ಥಿಗಳಿಗೆ ಸೂಚನೆ
ಕಳೆದ ಬಾರಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ 20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಯಿತು. ಆದ್ದರಿಂದ ಈಬಾರಿ ಸಮಗ್ರತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಎನ್‌ಟಿಎ ಮುಂದಾಗಿದೆ.

ಜೂನ್ 21 ರಂದು ನಡೆಯಲಿರುವ UG-NEET 2026 ಮರು ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ವರದಿ ಮಾಡುವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಎನ್‌ಡಿಎ ಸೂಚನೆ ನೀಡಿದೆ. ದೂರು ನೀಡುವ ಸಲುವಾಗಿಯೇ ಎನ್‌ಟಿಎ ವಿಶೇಷ ಪೋರ್ಷಲ್ ಅನ್ನು ಪ್ರಾರಂಭಿಸಿದೆ. ಇದನ್ನೂ ಓದಿ: ಲಡಾಖ್‌ಗೆ ಸರ್ವಋತು ಸಂಪರ್ಕ – ಝೋಜಿಲಾ ಸುರಂಗದ ವಿಶೇಷತೆ ಏನು? ಭಾರತಕ್ಕೆ ಏಕೆ ಮುಖ್ಯ?
ಯಾವುದೇ ಕಾರಣಕ್ಕೂ ಈ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗೋದಿಲ್ಲ. ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ವೀಕ್ಷಣೆಗೆ ಯಾರಿಗೂ ಅವಕಾಶ ಇಲ್ಲ. ಆದ್ದರಿಂದ ನಕಲಿ ವೆಬ್‌ಸೈಟ್‌ಗಳು ಮತ್ತು ಎನ್‌ಟಿಎ ಅಧಿಕಾರಿ ಎಂದು ಹೇಳಿಕೊಂಡು ಬಂದರೆ ಅದನ್ನು ತಕ್ಷಣವೇ ತಿಳಿಸಿ, ನಾವು ನಿಮ್ಮ ಬೆಂಬಲಕ್ಕೆ ಇರುತ್ತೇವೆ ಎಂದು ಎನ್‌ಡಿಎ ಎಚ್ಚರಿಸಿದೆ.
ಏನು ವರದಿ ಮಾಡಬೇಕು?
* NEET (UG) 2026 ಪ್ರಶ್ನೆ ಪತ್ರಿಕೆ ಅಥವಾ ಕೀ ಉತ್ತರ ಪ್ರವೇಶ ಪಡೆಯಲು ಅನಧಿಕೃತ ವೆಬ್‌ಸೈಟ್‌ಗಳು, ಸೋಷಿಯಲ್ ಮೀಡಿಯಾ ಖಾತೆಗಳು ಅಥವಾ ಮೆಸೇಜ್ ಕಳುಹಿಸುವ ಚಾನಲ್‌ಗಳ ಬಗ್ಗೆ ವರದಿಮಾಡಬೇಕು
* ಪ್ರಶ್ನೆಪತ್ರಿಕೆ ಸೋರಿಕೆ, ಹಣ ಕೊಟ್ರೆ ಫಲಿತಾಂಶ ಬರುವುದಾಗಿ ಆಫರ್ ನೀಡುವ ವ್ಯಕ್ತಿಗಳು ಅಥವಾ ಗುಂಪುಗಳು, ಎನ್‌ಟಿಎ ಅಧಿಕಾರಿಗಳು, ಪರೀಕ್ಷಾ ಕಾರ್ಯನಿರ್ವಾಹಕರು ಅಥವಾ ನಕಲಿ ಸರ್ಕಾರಿ ಪ್ರತಿನಿಧಿಗಳು ಮತ್ತು ದಾರಿ ತಪ್ಪಿಸಲು ಉದ್ದೇಶಿಸಿರುವ ಯಾವುದೇ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಬೇಕು.
ಎಲ್ಲಿ ವರದಿ ಮಾಡಬೇಕು?
NTA ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಆರಂಭಿಸಲಾದ ನೂತನ ಪೋರ್ಟಲ್‌ನಲ್ಲೇ ವರದಿ ಮಾಡಬೇಕು.
