Bengaluru CityKarnatakaLatestMain Post

ನಗರಾಭಿವೃದ್ಧಿ ಕಚೇರಿಗೆ ಅಕ್ರಮವಾಗಿ ನುಗ್ಗಿದವರ ಮೇಲೆ ಕ್ರಮ ತೆಗೆದುಕೊಳ್ತೀವಿ: ಮುನಿರತ್ನ

- ಕಾಂಗ್ರೆಸ್ ಧೂಳಿಪಟ ಆಗುವ ದಿನ ಸಮೀಪಿಸುತ್ತಿದೆ

Advertisements

ಬೆಂಗಳೂರು: ಯಾರು ನಗರಾಭಿವೃದ್ಧಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ರು ಅವರನ್ನು ಬಂಧನ ಮಾಡಬೇಕು. ಈ ಕೂಡಲೇ ಅವರನ್ನು ಬಂಧಿಸಬೇಕು ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಅವರನ್ನು ಬಂಧನ ಮಾಡುವಂತೆ ಒತ್ತಾಯ ಮಾಡುತ್ತೇನೆ ಎಂದು ಸಚಿವ ಮುನಿರತ್ನ ತಿಳಿಸಿದ್ದಾರೆ.

ವಾರ್ಡ್ ಮೀಸಲಾತಿ ವಿರೋಧಿಸಿ ಇಂದು ನಗರಾಭಿವೃದ್ಧಿ ಕಚೇರಿ ನುಗ್ಗಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಸಿಟಿವಿ ದೃಶ್ಯಗಳನ್ನು ಅಧರಿಸಿ ಅಕ್ರಮವಾಗಿ ನುಗ್ಗಿದವರ ಮೇಲೆ ಕ್ರಮ ತೆಗೆದುಕೊಳ್ತೀವಿ. ಶಾಸಕರು ಬಂದರೆ ಪರವಾಗಿಲ್ಲ. ಅವರ ಬೆಂಬಲಿಗರು ನುಗ್ಗಿದ್ದಾರೆ ಪ್ರತಿಭಟನೆ ಮಾಡಿದ್ದಾರೆ. ಸರ್ವಜ್ಞ ನಗರ, ಚಾಮರಾಜಪೇಟೆ, ಪುಲಕೇಶಿ ನಗರ, ಗಾಂಧಿ ನಗರ, ಬ್ಯಾಟರಾಯನಪುರ ಕ್ಷೇತ್ರದಿಂದ ಬೆಂಬಲಿಗರು ಬಂದು ಗಲಾಟೆ ಮಾಡಿದ್ದಾರೆ. ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂಗೆ ಮನವಿ ಮಾಡ್ತೀವಿ ಎಂದಿದ್ದಾರೆ. ಇದನ್ನೂ ಓದಿ: ಜಲಜೀವನ್ ಮಿಷನ್ ಸೇರಿ ಕೇಂದ್ರದ ಯೋಜನೆಗಳ‌ ಚುರುಕಿನ ಜಾರಿಗೆ ಸಿಎಂ ತಾಕೀತು

ಕಾಂಗ್ರೆಸ್ ಇಂದು ವಿಕಾಸಸೌಧಲ್ಲಿ ನಗರಾಭಿವೃದ್ಧಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದ ವಿಚಾರವಾಗಿ ಮಾತನಾಡಿದ ಸಿಎಂ, ಮೀಸಲಾತಿ 2015ರ ಹೈಕೋರ್ಟ್ ತೀರ್ಪಿನ ಪ್ರಕಾರ ಮಾಡಿದ್ದೇವೆ. ಇವರು ಇದ್ದಾಗ ಏನ್ ಮಾಡಿದ್ರು ನಮ್ಮ ಶಾಸಕರ ಕ್ಷೇತ್ರಗಳಲ್ಲಿ ಅಂತ ಗೊತ್ತಿದೆ. ಇವರಿಗೆ ಅಬ್ಜೆಕ್ಷನ್ ಹಾಕುವುದಕ್ಕೆ ಟೈಮ್ ಇದೆ ಇವರಿಗೆ ಆದ್ರೆ ಇವರು ರೌಡಿಸಂ ಮಾಡಿದ್ದಾರೆ ವಿಕಾಸಸೌಧಕ್ಕೆ ನುಗ್ಗಿದ್ದಾರೆ. ಇದು ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ. ಇದು ಎಷ್ಟರಮಟ್ಟಿಗೆ ಸರಿ ಇದೆ. ಜನ ಇದನ್ನೆಲ್ಲ ಗಮನಸುತ್ತಿದ್ದಾರೆ ಎಂದು ಕೆಂಡಕಾರಿದ್ದಾರೆ. ಇದನ್ನೂ ಓದಿ: ಮೋದಿಯನ್ನು ಭೇಟಿಯಾದ ಮಮತಾ ಬ್ಯಾನರ್ಜಿ

ಕಂದಾಯ ಸಚಿವ ಆರ್.ಅಶೋಕ್ ಟ್ವೀಟ್ ಮೂಲಕ ಖಂಡನೆ ವ್ಯಕ್ತ ಪಡಿಸಿದ್ದು, ನಗರಾಭಿವೃದ್ಧಿ ಇಲಾಖೆಯ ಕಚೇರಿಗೆ ದಾಳಿ ಮಾಡುವ ಮೂಲಕ ಕಾಂಗ್ರೆಸ್‍ನ ಗೂಂಡಾ ಸಂಸ್ಕೃತಿ ಅನಾವರಣಗೊಂಡಿದೆ. ಇಂತಹ ವರ್ತನೆಯನ್ನು ನಾನು ಖಂಡಿಸುತ್ತೇನೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ ಮತ್ತು ತಕ್ಕ ಪಾಠ ಕಲಿಸಲು ಸಜ್ಜಾಗಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳಿಪಟ ಆಗುವ ದಿನ ಸಮೀಪಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

Live Tv

Leave a Reply

Your email address will not be published.

Back to top button