BollywoodCinemaLatest

ಹಾಲಿವುಡ್‌ಗೆ ಹಾರಲಿದ್ದಾರೆ ಬಾಲಿವುಡ್ ರಾಧೆ ಆಲಿಯಾ ಭಟ್

ಬಾಲಿವುಡ್‌ ನಟಿ ಆಲಿಯಾಗೆ ಹಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್‌ ಕ್ರಿಯೇಟ್‌ ಆಗಿದೆ. ಕರಣ್ ಜೋಹರ್ ನಿರ್ದೇಶನದ `ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಿರೋ ಬೆನ್ನೆಲ್ಲೆ ಹಾಲಿವುಡ್ ಚಿತ್ರದಿಂದ ನಟಿ ಆಲಿಯಾಗೆ ಬುಲಾವ್ ಬಂದಿದೆ.

ಪ್ರತಿಭಾವಂತ ನಟಿ ಆಲಿಯಾಗೆ ಬಾಲಿವುಡ್, ಟಾಲಿವುಡ್, ಜತೆಗೆ ಹಾಲಿವುಡ್ ಚಿತ್ರರಂಗದಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಆಲಿಯಾ ನಟನೆ ನೋಡಿ ಹಾಲಿವುಡ್ ಚಿತ್ರರಂಗ ಕೈಬೀಸಿ ಕರೆದಿದೆ. ಕೆಲ ದಿನಗಳ ಹಿಂದೆಯೇ ಆಲಿಯಾ ಭಟ್ ಹಾಲಿವುಡ್ ಚಿತ್ರಕ್ಕೆ ಎಂಟ್ರಿ ಆಗೋದರ ಕುರಿತಿ ಅನೌನ್ಸ್ ಆಗಿತ್ತು. ಈಗ ಚಿತ್ರದ ಶೂಟಿಂಗ್ ಶುರು ಮಾಡಲು ಆಲಿಯಾಗೆ ಬುಲಾವ್ ಬಂದಿದೆ.

`ಹಾರ್ಟ್ ಆಫ್ ಸ್ಟೋನ್’ ಚಿತ್ರದಲ್ಲಿ ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಮೇ ಮಿಡಲ್‌ನಲ್ಲಿ ಶೂಟಿಂಗ್ ಶುರುವಾಗಲಿದೆ. ಹಾಲಿವುಡ್ ಸ್ಟಾರ್ ನಟಿ ಗಾಲ್ ಗಡೋಟ್ ಜತೆ ಆಲಿಯಾ ತೆರೆಹಂಚಿಕೊಳ್ತಿದ್ದಾರೆ. ಡಿಫರೆಂಟ್ ಸಬ್‌ಜೆಕ್ಟ್ ಮತ್ತು ಭಿನ್ನ ಪಾತ್ರದ ಮೂಲಕ ಹಾಲಿವುಡ್ ಅಖಾಡಕ್ಕೆ ನಟಿ ಸಜ್ಜಾಗಿದ್ದಾರೆ. ಇದನ್ನೂ ಓದಿ: ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

ಟಾಪ್ ಹಾರ್ಪರ್ ನಿರ್ದೇಶನದ `ಹಾರ್ಟ್ ಆಫ್ ಸ್ಟೋನ್’ ಚಿತ್ರವು ಮೇಯಿಂದ ಆಗಸ್ಟ್ ಅಂತ್ಯದವರೆಗೆ ಹೊರ ದೇಶದಲ್ಲಿ ಶೂಟಿಂಗ್ ನಡೆಯಲಿದೆ. `ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದ ಶೂಟಿಂಗ್ ಮುಗಿದ ಬಳಿಕ ಹಾಲಿವುಡ್ ಚಿತ್ರಕ್ಕೆ ಆಲಿಯಾ ಹಾಜರ್ ಆಗಲಿದ್ದಾರೆ. ಒಟ್ನಲ್ಲಿ ಹಾಲಿವುಡ್ ಅಂಗಳಕ್ಕೂ ಲಗ್ಗೆ ಇಟ್ಟಿರುವ ಆಲಿಯಾ ಬೆಳವಣಿಗೆ ನೋಡಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.

Leave a Reply

Your email address will not be published.

Back to top button