ತಿರುವನಂತಪುರಂ: ವಿಶೇಷ ಚೇತನ ಬಾಲಕನ ಕೊಲೆ ಪ್ರಕರಣದಲ್ಲಿ ಸೌದಿ ಅರೇಬಿಯಾದಲ್ಲಿ ಮರಣದಂಡನೆಗೆ ಗುರಿಯಾಗಿ ಬಳಿಕ ಬಿಡುಗಡೆಗೊಂಡ ಕೋಯಿಕ್ಕೋಡ್ ನಿವಾಸಿ ಅಬ್ದುಲ್ ರಹೀಮ್ (Abdul Raheem) 20 ವರ್ಷಗಳ ಬಳಿಕ ಕೇರಳಕ್ಕೆ (Kerala) ಮರಳಿದ್ದಾರೆ.
2006ರಲ್ಲಿ ಬಾಲಕನ ಕೊಲೆ ನಡೆದಿದ್ದು, ರಹೀಮ್‌ಗೆ ಅಲ್ಲಿನ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. 20 ವರ್ಷಗಳ ಬಳಿಕ ಮನೆಗೆ ಮರಳಿದ ಮಗನನ್ನು ಕಂಡು ರಹೀಮ್ ತಾಯಿ ಫಾತಿಮಾ ಭಾವುಕರಾಗಿದ್ದಾರೆ. ಬಕ್ರೀದ್ ಹಬ್ಬದ ಸಂದರ್ಭ ಮನೆಗೆ ಮರಳಿದ ರಹೀಮ್‌ನನ್ನು ಕಂಡು ಸ್ನೇಹಿತರು, ಸಂಬಂಧಿಕರು ಆನಂದಭಾಷ್ಪ ಸುರಿಸಿದ್ದಾರೆ. ಇದನ್ನೂ ಓದಿ: ಸಕಲ ದೋಷ ನೋಡಿಕೊಂಡು ಡಿಕೆಶಿ ಮುನ್ನಡೆಯಬೇಕಾಗುತ್ತೆ – ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿ ಎಚ್ಚರಿಕೆ
ಮರಣದಂಡನೆ ಶಿಕ್ಷೆಯಿಂದ ರಹೀಮ್ ಅವರನ್ನು ಕೈಬಿಡಲು ಮೃತ ಬಾಲಕನ ಕುಟುಂಬ ಸುಮಾರು 38 ಕೋಟಿ ಪರಿಹಾರಕ್ಕೆ ಬೇಡಿಕೆ ಇಟ್ಟಿತ್ತು. ಇದನ್ನು ಒಪ್ಪಿಕೊಂಡಿದ್ದ ರಹೀಮ್ ಕುಟುಂಬ ದೇಣಿಗೆ ಸಂಗ್ರಹಿಸಿ ಸುಮಾರು 34 ಕೋಟಿ ರೂ. ನೀಡಿದೆ. ಸಾವಿಗೆ ಪರಿಹಾರವಾಗಿ ನೀಡುವ ಬ್ಲಡ್ ಮನಿ ನೀಡಿ ತಮ್ಮನ್ನು ಮರಣದಂಡನೆಯಿಂದ ಪಾರು ಮಾಡಿದ ಎಲ್ಲರಿಗೂ ರಹೀಮ್ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ರಾಜೀನಾಮೆ ಬೆನ್ನಲ್ಲೇ ದೆಹಲಿಗೆ ಸಿದ್ದರಾಮಯ್ಯ – ಹೈಕಮಾಂಡ್ ನಾಯಕರ ಭೇಟಿ ಹಿಂದಿನ ಗುಟ್ಟೇನು?

ಪ್ರಕರಣವೇನು?
2006ರಲ್ಲಿ ಸೌದಿ ಅರೇಬಿಯಾಗೆ ತೆರಳಿದ್ದ ರಹೀಮ್ ಅಲ್ಲಿನ ಮನೆಯೊಂದರಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು. ತಾವು ಕೆಲಸ ಮಾಡುತ್ತಿದ್ದ ಮನೆಯಲ್ಲಿ ವಿಶೇಷ ಚೇತನ ಬಾಲಕನೊಂದಿಗೆ ರಹೀಮ್‌ಗೆ ಜಗಳವಾಗಿತ್ತು. ಈ ವೇಳೆ ಬಾಲಕನ ದೇಹಕ್ಕೆ ಅಳವಡಿಸಲಾಗಿದ್ದ ಉಸಿರಾಟದ ಸಾಧನ ಕಳಚಿಬಿದ್ದು, ಬಾಲಕ ಮೃತಪಟ್ಟಿದ್ದ. ಬಾಲಕನ ನಿಧನಕ್ಕೆ ರಹೀಮ್ ಕಾರಣ ಎಂದು ಅಲ್ಲಿನ ನ್ಯಾಯಾಲಯ ತರ‍್ಪು ನೀಡಿ ಮರಣದಂಡನೆ ವಿಧಿಸಿತ್ತು. ಇದನ್ನೂ ಓದಿ: ಕೆನಡಾದಲ್ಲಿ ಭಾರತದ ವಿದ್ಯಾರ್ಥಿನಿಗೆ ಚಾಕು ಇರಿದು ಹತ್ಯೆ
