ಚಂಡೀಗಢ: ಕೊರೊನಾ ಸಾಂಕ್ರಾಮಿಕದಿಂದಾಗಿ ಸಂಕಷ್ಟಕ್ಕೊಳಗಾಗಿದ್ದ ಜನತೆಗೆ ನೆರವಾಗುವ ಮೂಲಕ ರಿಯಲ್ ಹೀರೋ ಎನಿಸಿಕೊಂಡಿದ್ದ ಬಾಲಿವುಡ್ ನಟ ಸೋನು ಸೂದ್ ಅವರು ಶುಕ್ರವಾರ ಸ್ವಯಂಪ್ರೇರಿತರಾಗಿ ಪಂಜಾಬ್‌ನ ʻಸ್ಟೇಟ್ ಐಕಾನ್ʼ ಸ್ಥಾನದಿಂದ ಕೆಳಗಿಳಿದಿದ್ದಾರೆ. ಪಂಜಾಬ್ ರಾಜ್ಯ ಚುನಾವಣೆಗೂ ಮುನ್ನ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
Advertisement
ಸ್ಟೇಟ್ ಐಕಾನ್ ಸ್ಥಾನದಿಂದ ಹೊರಬಂದಿರುವ ಬಗ್ಗೆ ಟ್ವೀಟ್ ಮಾಡಿರುವ ಅವರು, ಎಲ್ಲಾ ಒಳ್ಳೆಯ ವಿಷಯಗಳಂತೆ ಈ ಪ್ರಯಾಣವೂ ಕೊನೆಗೊಂಡಿದೆ. ನಾನು ಸ್ವಯಂಪ್ರೇರಣೆಯಿಂದ ಪಂಜಾಬ್‌ನ ಸ್ಟೇಟ್ ಐಕಾನ್ ಸ್ಥಾನದಿಂದ ಕೆಳಗಿಳಿದಿದ್ದೇನೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ನನ್ನ ಕುಟುಂಬದ ಸದಸ್ಯರು ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದೊಂದಿಗೆ ಚರ್ಚಿಸಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡ್ರ್ಯಾಗನ್ ಫ್ರೂಟ್‍ನಲ್ಲಿ ಕೊರೊನಾ!
Advertisement
Advertisement
ಬಾಲಿವುಡ್ ನಟನ ನೇಮಕಾತಿಯನ್ನು ಹಿಂಪಡೆದಿರುವುದಾಗಿ ಚುನಾವಣಾ ಆಯೋಗ ಟ್ವೀಟ್ ಮಾಡಿ ತಿಳಿಸಿದೆ. ಪಂಜಾಬ್‌ನ ಮೋಗಾ ಜಿಲ್ಲೆಯವರಾದ ಸೋನು ಸೂದ್ ಅವರನ್ನು ಕಳೆದ ವರ್ಷ ಚುನಾವಣೆ ಸಂಸ್ಥೆ ʻಸ್ಟೇಟ್ ಐಕಾನ್ʼ ಎಂದು ಆಯ್ಕೆ ಮಾಡಿತ್ತು.
Advertisement
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸೋನು ಸೂದ್ ಅವರ ಸಹೋದರಿ ಮಾಳಿವಕಾ ಸೂದ್ ಸ್ಪರ್ಧಿಸುತ್ತಿದ್ದಾರೆ. ಆದರೆ ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಎಂಬ ವಿಚಾರ ಇನ್ನೂ ಸ್ಪಷ್ಟವಾಗಿಲ್ಲ. ಎಎಪಿ ಅಥವಾ ಕಾಂಗ್ರೆಸ್ ಎರಡರಲ್ಲಿ ಒಂದು ಪಕ್ಷದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಅವರೊಂದಿಗೆ ಸೋನು ಸೂದ್ ಸಭೆ ನಡೆಸಲಿದ್ದಾರೆಂಬ ಮಾತುಗಳಿವೆ. ಇದನ್ನೂ ಓದಿ: ಆಸ್ಕರ್ ವಿಜೇತ ಮೊದಲ ಕಪ್ಪುವರ್ಣೀಯ ಸಿಡ್ನಿ ಪೊಯ್ಟಿಯರ್ ನಿಧನ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ʻದೇಶ್ ಕಿ ಮೆಂಟರ್ʼ ಕಾರ್ಯಕ್ರಮದ ರಾಯಭಾರಿಯಾಗಿ ಸೋನ್ ಸೂದ್ ಅವರನ್ನು ಆಯ್ಕೆ ಮಾಡಿದ್ದರು.