Bengaluru CityCinemaKarnatakaLatestMain PostSandalwood

ನಟ ರಮೇಶ್ ಅರವಿಂದ್‌ಗೆ ಗೌರವ ಡಾಕ್ಟರೇಟ್

ನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ರಮೇಶ್ (Ramesh Aravind)  ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ತಮ್ಮದೇ ರೀತಿಯಲ್ಲಿ ಚಿತ್ರರಂಗಕ್ಕೆ ಕೊಡುಗೆ ನೀಡುತ್ತಲೇ ಬಂದಿದ್ದಾರೆ. ಇದೀಗ ಈ ಮಹಾನ್ ನಟನನ್ನ ಗುರುತಿಸಿ ರಾಣಿ ಚೆನ್ನಮ್ಮ ವಿವಿಯಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ.

ನಟ, ನಿರ್ದೇಶಕ, ಬರಹಗಾರನಾಗಿ ಸೈ ಎನಿಸಿಕೊಂಡಿರುವ ರಮೇಶ್ ಅರವಿಂದ್ ಅವರು ಚಿತ್ರರಂಗಕ್ಕೆ ನೀಡಿರುವ ಅಪಾರ ಕೊಡುಗೆಯನ್ನು ಗುರುತಿಸಿ ಸುವರ್ಣಸೌಧ ಸಭಾಭವನದಲ್ಲಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ 10ನೇ ಘಟಿಕೋತ್ಸವ ಇಂದು (ಸೆ.14) ನಡೆದಿದೆ. ಸಮಾಜ ಸೇವಕರಾದ ವ್ಹಿ.ರವಿಚಂದನ್ ವೆಂಕಟರಾಮನ್ ಅವರಿಗೆ `ಡಾಕ್ಟರ್ ಆಫ್ ಸೈನ್ಸ್’, ಚಿತ್ರರಂಗ ಮತ್ತು ಧಾರ್ಮಿಕ ವಲಯದ ಸೇವೆಯನ್ನ ಗುರುತಿಸಿ ನಟ ರಮೇಶ್ ಅರವಿಂದ್ (Ramesh Aravind) ಮತ್ತು ಅಕ್ಕ ಅನ್ನಪೂರ್ಣ (Akka Annapoorna) ಅವರಿಗೆ `ಡಾಕ್ಟರ್ ಆಫ್ ಲೆಟರ್ಸ್’ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ಕನ್ನಡದ ಖ್ಯಾತ ಕಿರುತೆರೆ ನಟ ಮಂಡ್ಯ ರವಿ ಸ್ಥಿತಿ ಚಿಂತಾಜನಕ: ಬೆಂಗಳೂರಿನಿಂದ ಮಂಡ್ಯ ಆಸ್ಪತ್ರೆಗೆ ಶಿಫ್ಟ್

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಈ ವೇಳೆ ಡಾಕ್ಟರೇಟ್ ಅನ್ನು ಪ್ರಧಾನ ಮಾಡಿದ್ದಾರೆ. ರಾಣಿ ಚೆನ್ನಮ್ಮ ವಿವಿ. ಕುಲಪತಿ ಪ್ರೋ. ರಾಮಚಂದ್ರೆಗೌಡ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇನ್ನು ನೆಚ್ಚಿನ ನಟನಿಗೆ ಅಭಿಮಾನಿಗಳು, ಸಿನಿಮಾರಂಗದ ಸ್ನೇಹಿತರು ಶುಭಹಾರೈಸಿದ್ದಾರೆ.

ಗೌರವ ಡಾಕ್ಟರೇಟ್ ಬಳಿಕ ರಮೇಶ್ ಅರವಿಂದ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ನನ್ನ ಈ ಸಂಭ್ರಮದ ಕ್ಷಣದಲ್ಲಿ ತಂದೆ ಇರಬೇಕಿತ್ತು. ನನಗೆ ಗೌರವ ಡಾಕ್ಟರೇಟ್ ಸಿಗ್ತಿದ್ದಂತೆ ಸಂಬಂಧಿಕರಿಗೆ ವಾಟ್ಸಪ್ ಮೆಸೇಜ್ ಮಾಡಿದೆ. ಅಭಿನಂದನೆಗಳು, ನಿಮ್ಮ ತಂದೆ ಇರಬೇಕಿತ್ತು ಎಂದು ಆ ಕಡೆಯಿಂದ ಪ್ರತಿಕ್ರಿಯೆ ಬಂದಿದೆ ಎಂದು ತಂದೆ ಅವರನ್ನ ನೆನೆದು ನಟ ರಮೇಶ್ ಭಾವುಕರಾಗಿದ್ದಾರೆ. 30 ವರ್ಷ ಚಿತ್ರರಂಗದಲ್ಲಿ ಸಲ್ಲಿಸಿದ ಸೇವೆಗೆ ಗೌರವ ಡಾಕ್ಟರೇಟ್ ಸಿಕ್ಕಿದೆ. ಟಿಕೆಟ್ ತೆಗೆದುಕೊಂಡು ನನ್ನ ಸಿನಿಮಾ ನೋಡಿದ ಪ್ರತಿ ಪ್ರೇಕ್ಷಕನಿಗೆ ನಾನು ಋಣಿ ಆಗಿದ್ದೇನೆ. ಈ ವೇಳೆ ನನ್ನ ಜೊತೆಗೆ ನಟಿಸಿರುವ ಹಲವು ಕಲಾವಿದರನ್ನು ನಾನು ಸ್ಮರಿಸುವೆ. ಎಲ್ಲರ ಸಹಾಕರವೇ ನನ್ನ ಈ ಸಾಧನೆಗೆ ಕಾರಣ ಎಂದು ರಮೇಶ್ ಅರವಿಂದ್ ಮಾತನಾಡಿದ್ದಾರೆ.

Live Tv

Leave a Reply

Your email address will not be published.

Back to top button