Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: RSS ಕೋಮುವಾದಿ ಸಂಘಟನೆ ಎಂದು ಬಿಂಬಿಸಿದ ಆರೋಪ – ವಿವಾದದ ಕೇಂದ್ರವಾದ ವೀರಸೌಧ ಚಿತ್ರ ಗ್ಯಾಲರಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chikkaballapur | RSS ಕೋಮುವಾದಿ ಸಂಘಟನೆ ಎಂದು ಬಿಂಬಿಸಿದ ಆರೋಪ – ವಿವಾದದ ಕೇಂದ್ರವಾದ ವೀರಸೌಧ ಚಿತ್ರ ಗ್ಯಾಲರಿ

Chikkaballapur

RSS ಕೋಮುವಾದಿ ಸಂಘಟನೆ ಎಂದು ಬಿಂಬಿಸಿದ ಆರೋಪ – ವಿವಾದದ ಕೇಂದ್ರವಾದ ವೀರಸೌಧ ಚಿತ್ರ ಗ್ಯಾಲರಿ

Public TV
Last updated: May 21, 2022 8:20 pm
Public TV
Share
3 Min Read
CKB VEERASOUDA 6
SHARE

– ಹಿಂದೂಪರ ಸಂಘಟನೆಗಳ ಆಕ್ಷೇಪ

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿರುವ ಸ್ವಾತಂತ್ರ್ಯ ಸಂಗ್ರಾಮದ ಸಂಪೂರ್ಣ ನೆನಪುಗಳನ್ನು ಮೆಲುಕು ಹಾಕುವ ವಿದುರಾಶ್ವತ್ಥ ವೀರಸೌಧದ ಚಿತ್ರ ಗ್ಯಾಲರಿ ಈಗ ವಿವಾದದ ಕೇಂದ್ರಬಿಂದುವಾಗಿದೆ.

CKB VEERASOUDA 1

ವೀರಸೌಧದ ಚಿತ್ರ ಗ್ಯಾಲರಿಯ ಕೆಲ ಚಿತ್ರಗಳು ಹಾಗೂ ಚಿತ್ರದ ಕೆಳಗೆ ಬರೆದ ಕೆಲ ಪದಗಳು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು ರಾಜ್ಯದಲ್ಲಿ ಹೊಸ ವಿವಾದವೊಂದು ಸೃಷ್ಠಿಯಾಗಿದೆ. ವಿದುರಾಶ್ವತ್ಥ ಐತಿಹಾಸಿಕ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ. ಕರ್ನಾಟಕದ ಜಲಿಯನ್ ವಾಲಾಬಾಗ್ ಖ್ಯಾತಿಯ ಸ್ವಾತಂತ್ರ್ಯ ಸಂಗ್ರಾಮದ ನೆನಪಿನ ತಾಣವೂ ಹೌದು. ಇಂತಹ ಐತಿಹ್ಯವುಳ್ಳ ಸ್ವಾತಂತ್ರ್ಯ ಸಂಗ್ರಾಮದ ಸ್ಥಳದಲ್ಲಿ ಕಳೆದ 10 ವರ್ಷಗಳ ಹಿಂದೆ ತಲೆ ಎತ್ತಿರುವ ವೀರಸೌಧದ ಫೋಟೋ ಗ್ಯಾಲರಿ ಈಗ ವಿವಾದಿತ ಕೇಂದ್ರವಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ಸಂಪೂರ್ಣ ಸನ್ನಿವೇಶಗಳನ್ನು ಫೋಟೋಗಳ ರೂಪದಲ್ಲಿ ಕಟ್ಟಿಕೊಡುವ ಕೆಲಸವನ್ನು ನಿವೃತ್ತ ಪ್ರೊಫೆಸರ್‌ ಬಿ.ಜಿ ಗಂಗಾಧರಮೂರ್ತಿ ಮಾಡಿದ್ದಾರೆ. ಆದ್ರೆ ಈ ಗ್ಯಾಲರಿಯಲ್ಲಿನ ಕೆಲ ಫೋಟೋಗಳು ಈಗ ವಿವಾದಕ್ಕೀಡಾಗಿದ್ದು. ಸ್ವಾತಂತ್ರ್ಯ ಸೇನಾನಿಗಳ ಫೋಟೋ ಜೊತೆಗೆ ಕೆಳಭಾಗದಲ್ಲಿ ಹಿಂದೂ ಕೋಮುವಾದ-ಮುಸ್ಲಿಂ ಕೋಮುವಾದ ಎಂಬ ತಲೆ ಬರಹಗಳು ಹಿಂದೂ ಸಂಘಟನೆಗಳ ಕಾರ್ಯಕರ್ತರ ಆಕ್ಷೇಪಣೆಗೆ ಕಾರಣವಾಗಿವೆ. ಇದನ್ನೂ ಓದಿ: ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್‌ – ಪೆಟ್ರೋಲ್‌, ಡೀಸೆಲ್‌ ಅಬಕಾರಿ ಸುಂಕ ಇಳಿಕೆ

CKB VEERASOUDA 2

ಚಿತ್ರ ಗ್ಯಾಲರಿಯ ಸ್ಥಾಪಕ ಗಂಗಾಧರ ಮೂರ್ತಿ ಹೇಳೋದೇನು?
ಜಿಲ್ಲಾಡಳಿತದ ನೇತೃತ್ವದಲ್ಲಿ ಸ್ವಾತಂತ್ರ್ಯ ಸ್ಮಾರಕ ಅಭಿವೃದ್ಧಿ ಸಮತಿಯಡಿ ಬರುವ ವೀರಸೌಧದಲ್ಲಿ ಸಮಿತಿಯ ಸಲಹೆಗಾರರಾಗಿರುವ ನಿವೃತ್ತ ಪ್ರೊಫೆಸರ್‌ ಹಾಗೂ ಚಿಂತಕ ಗಂಗಾಧರ ಮೂರ್ತಿ ಈ ವೀರಸೌಧ ಗ್ಯಾಲರಿಯ ಸ್ಥಾಪಕರಾಗಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಹಗಲು ರಾತ್ರಿ ಸಾಕಷ್ಟು ವರ್ಷಗಳ ಕಾಲ ಇತಿಹಾಸವನ್ನು ಅಧ್ಯಯನ ಮಾಡೇ ಈ ಚಿತ್ರ ಗ್ಯಾಲರಿಯನ್ನು ನಿರ್ಮಾಣ ಮಾಡಿದ್ದೇವೆ. ಕಳೆದ 10-12 ವರ್ಷಗಳಿಂದ ಇಲ್ಲದ ವಿವಾದ ಈಗ ಆರಂಭವಾಗಿದೆ. ಕೆಲವರು ಉದ್ದೇಶಪೂರ್ವಕವಾಗಿಯೇ ವಿನಾಕಾರಣ ವಿವಾದ ಸೃಷ್ಟಿಸುತ್ತಿದ್ದಾರೆ. ಹಿಂದೂ ಕೋಮುವಾದ-ಮುಸ್ಲಿಂ ಕೋಮುವಾದ ಅಂತ ಬಳಸಲಾಗಿದೆ. ಹಿಂದೂ ಕೋಮುವಾದ ಅಂತ ಹೆಸರು ಈಗ ಸೃಷ್ಟಿಸಿರೋದಲ್ಲ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಿನ್ನ ಹೆಸರು ಮೊಹಮ್ಮದ್? – ಬಿಜೆಪಿ ಮಾಜಿ ಕಾರ್ಪೊರೇಟರ್ ಪತಿಯಿಂದ ಹಲ್ಲೆಗೊಳಗಾದ ವೃದ್ಧ ಸಾವು

CKB VEERASOUDA 4

ನಾನು 2006ರಲ್ಲಿ ಕೆಲಸ ಆರಂಭ ಮಾಡಿ 2009ರಲ್ಲಿ ಮುಗಿಸಿ 2012ರಲ್ಲಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶ ನೀಡಲಾಗಿದೆ. 1985ರಲ್ಲಿ ಎನ್‍ಸಿಇಆರ್‌ಟಿ ಸಂಸ್ಥೆಯ ಮೂಲಗ್ರಂಥದ ಆಧಾರದ ಜೊತೆಗೆ ಗೊಂದಲ ಬಂದಾಗ ಇತಿಹಾಸಕಾರರ ಪುಸ್ತಕಗಳನ್ನು ಅಧ್ಯಯನ ಮಾಡಿ ಈ ಗ್ಯಾಲರಿ ನಿರ್ಮಿಸಿದ್ದೇವೆ. ತುಂಬಾ ದೊಡ್ಡ ರಾಜಕಾರಣಿಗಳು, ಅಧಿಕಾರಿಗಳು, ವಿದ್ಯಾರ್ಥಿಗಳು ವೀಕ್ಷಣೆ ಮಾಡಿದ್ದಾರೆ. ಒಳ್ಳೆಯ ಕೆಲಸ ಅಂತ ಅಭಿನಂದಿಸಿದ್ದಾರೆ, ಕಳೆದ 20 ದಿನಗಳಿಂದ ಕೆಲ ಪ್ರತಿರೋಧಗಳು ಬರ್ತಿವೆ. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕೆಲ ಫೋಟೋಗಳು ಒಪ್ಪಿಗೆ ಇಲ್ಲ ಎಂದು ಅವನ್ನು ತೆಗೆದು ಹಾಕಲು ಒತ್ತಡ ಹಾಕಿದ್ದಾರೆ. ತೆಗೆಯದೆ ಹೋದರೆ ಬೆಂಕಿ ಹಾಕ್ತೀವಿ ಅನ್ನೋ ಬಾಷೆ ಸಹ ಕೆಲವರು ಬಳಸಿದ್ದಾರೆ ಅಂತ ಗಂಗಾಧರ ಮೂರ್ತಿ ಆರೋಪಿಸಿದ್ದಾರೆ. ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕಲ್ಲೆಸೆದ ಕಿಡಿಗೇಡಿಗಳು

CKB VEERASOUDA 3

ಗಂಗಾಧರ ಮೂರ್ತಿಯವರ ಪ್ರಕಾರ ಹಿಂದೂ ಸಂಘಟನೆಗಳು ಚಿತ್ರ ಗ್ಯಾಲರಿಯಲ್ಲಿ ಮುಸ್ಲಿಮರಿಗೂ ಸ್ವಾತಂತ್ರ್ಯ ಹೋರಾಟಗಾರರಿಗೂ ಏನು ಸಂಬಂಧ ಯಾಕೆ ಆ ರೀತಿ ಬಿಂಬಿಸಿದ್ದೀರಿ? ಗೋಡ್ಸೆ-ಸಾರ್ವಕರ್‌ಗೆ ಅನ್ಯಾಯ ಆಗುವ ರೀತಿ ಬಿಂಬಿಸಿರುವ ಆರೋಪ, ಟಿಪ್ಪು ವೈಭವೀಕರಣ ಮಾಡಿರುವ ಆರೋಪ, ಹಿಂದೂ ಕೋಮುವಾದ ಪದ ಬಳಕೆಗೆ ಆಕ್ಷೇಪ, ಆ ಪದ ಬಳಸದಂತೆ ಒತ್ತಡ, ನಾವು ಹಿಂದೂ ಕೋಮುವಾದ ಅಂತಲೂ ಮುಸ್ಲಿಂ ಕೋಮುವಾದ ಅಂತಲೂ ಬಳಸಿದ್ದೇವೆ. ಕೋಮುವಾದ ಎಲ್ಲ ಧಾರ್ಮಿಕ ಸಂಘಟನೆಗಳಲ್ಲಿ ಇರುವಂತಹದ್ದು. ಆಯಾ ಧರ್ಮದವರು ಆ ಕೋಮಿನ ಪರವಾಗಿ ವಾದ ಮಾಡ್ತೀವಿ ಅನ್ನೋರಿಗೆ ಕೋಮುವಾದ ಪದ ಬಳಸುತ್ತೇವೆ. ಆದ್ರೆ ಇದಕ್ಕೆ ತಗಾದೆ ತಗೆದಿದ್ದಾರೆ ಎಂದು ದೂರಿದ್ದಾರೆ.

CKB VEERASOUDA 5

ವೀರಸೌಧಕ್ಕೆ ಪೊಲೀಸ್ ಭದ್ರತೆ
ವಿವಾದಗಳ ನಂತರ ವೀರಸೌಧಕ್ಕೆ ಭದ್ರತೆಗಾಗಿ ಮನವಿ ಮಾಡಲಾಗಿದ್ದು ವೀರಸೌಧಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೀರಸೌಧಕ್ಕೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ವಿವಾದಿತ ವೀರಸೌಧಕ್ಕೆ ಹಲವು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಗಮಿಸಿ ಆಕ್ಷೇಪಣೆಗಳನ್ನು ಸಂದರ್ಶಕರ ಪುಸ್ತಕದಲ್ಲಿ ಬರೆಯುತ್ತಿದ್ದಾರೆ. ಈ ನಡುವೆ ಕೆಲವರು ಮೌಖಿಕವಾಗಿ ವೀರಸೌಧದಲ್ಲಿರುವ ಸಿಬ್ಬಂದಿಗೆ ಧಮ್ಕಿ ಹಾಕಿರುವ ಆರೋಪ ಮಾಡಲಾಗಿದ್ದು, 10-12 ವರ್ಷಗಳಿಂದ ಇಲ್ಲದ ವಿವಾದ ಈಗ ಆರಂಭವಾಗಿದ್ದು ಚರ್ಚೆಗೆ ಗ್ರಾಸವಾಗಿದೆ.

TAGGED:ChikkaballapurarssVeera SoudhaVidurashwathaಆರ್‍ಎಸ್‍ಎಸ್ಪೊಲೀಸ್ವಿದುರಾಶ್ವತ್ಥ ವೀರಸೌಧವೀರಸೌಧ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Trump announces three week extension of Israel Lebanon ceasefire
Latest

ಇಸ್ರೇಲ್-ಲೆಬನಾನ್ ಕದನ ವಿರಾಮ 3 ವಾರಗಳವರೆಗೆ ವಿಸ್ತರಣೆ: ಟ್ರಂಪ್‌ ಸಂಧಾನ ಯಶಸ್ವಿ

Public TV
By Public TV
1 minute ago
Bidar Farmers Death
Bidar

ಸಿಡಿಲು ಬಡಿದು ಬೀದರ್‌ನ ಇಬ್ಬರು ಯುವ ರೈತರು ಸಾವು

Public TV
By Public TV
5 minutes ago
Weather 1
Bagalkot

ರಾಜ್ಯದಲ್ಲಿ ಏ.29ರವರೆಗೆ, ಬೆಂಗ್ಳೂರಲ್ಲಿ ಮೇ 5ರವರೆಗೆ ಮಳೆ ಮುನ್ಸೂಚನೆ

Public TV
By Public TV
21 minutes ago
Chikkamagaluru marriage
Chikkamagaluru

ಕಾಫಿನಾಡಲ್ಲೊಂದು ಅಪರೂಪದ ಮದ್ವೆ – ATMನಿಂದ ಲವ್ ಶುರು, ಈಗ ಜಾತಿ ಸಂಕೋಲೆ ಮೀರಿ ಕೈಹಿಡಿದ ಜೋಡಿ

Public TV
By Public TV
49 minutes ago
Chinnaswamy Stadium RCB
Bengaluru City

ಚಿನ್ನಸ್ವಾಮಿಯಲ್ಲಿ ಇಂದು ಬಿಗ್ ಫೈಟ್ – ಆರ್‌ಸಿಬಿ ತವರು ನೆಲದ ಕೊನೆಯ ಲೀಗ್ ಪಂದ್ಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್‌

Public TV
By Public TV
50 minutes ago
Public tv Vidhyapeeta 2026 9th edition karnataka biggest education Expo April 25 27 Palace ground Bengaluru
Bengaluru City

ನಾಳೆ ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಚಾಲನೆ – ವಿದ್ಯಾರ್ಥಿಗಳೇ, ಪೋಷಕರೇ ಬನ್ನಿ

Public TV
By Public TV
1 hour ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?