Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಶೈಕ್ಷಣಿಕ ಕಾರ್ಯಕ್ಕೆ ತೊಡಕು – NSUI, ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಶೈಕ್ಷಣಿಕ ಕಾರ್ಯಕ್ಕೆ ತೊಡಕು – NSUI, ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆ

Bengaluru City

ಶೈಕ್ಷಣಿಕ ಕಾರ್ಯಕ್ಕೆ ತೊಡಕು – NSUI, ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆ

Public TV
Last updated: November 29, 2021 12:25 pm
Public TV
Share
3 Min Read
LAW STUDENTS 3
SHARE

ಬೆಂಗಳೂರು: ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ (NSUI)ರವರ ವತಿಯಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ವಿದ್ಯಾರ್ಥಿಗಳು,ವಿದ್ಯಾರ್ಥಿ ಸಮೂಹದ ಮಾರಕವಾಗಿರುವ ಕೆಲವು ಗಂಭೀರ ವಿಷಯಗಳ ಬಗ್ಗೆ ಮೌರ್ಯ ವೃತ್ತ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.

LAW STUDENTS

ಯು.ಜಿ.ಸಿ. ಮಾರ್ಗಸೂಚಿಯನ್ವಯ 2020-21 ನೇ ಶೈಕ್ಷಣಿಕ ವರ್ಷಕ್ಕೆ ಬಡ್ತಿ ಹಾಗೂ ಇಂಟರ್‍ಮೀಡಿಯೇಟ್ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 2021-22ನೇ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸುವ ಬಗ್ಗೆ. ಹಲವಾರು ವಿದ್ಯಾರ್ಥಿಗಳು ಹೇಳುವಂತೆ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪರಿಗಣಿಸುವ ಶೈಕ್ಷಣಿಕ ದಿನಚರಿಯ ವರ್ಷವು ಯು.ಜಿ.ಸಿ ಯವರು ಮತ್ತು ಕರ್ನಾಟಕ ರಾಜ್ಯ ಸರ್ಕಾರವು ರೂಪಿಸಿರುವ ಶೈಕ್ಷಣಿಕ ದಿನಚರಿಯ ವರ್ಷಕ್ಕೆ ಪೂರಕವಾಗಿಲ್ಲ. ಇತರ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ, ಕ.ರಾ.ಕಾ.ವಿ.ಯ ವಿದ್ಯಾರ್ಥಿಗಳು ಒಂದು ಸೆಮೆಸ್ಟರ್ ಹಿಂದುಳಿದಿದ್ದಾರೆ. ದುರದೃಷ್ಟಕರವೆಂದರೆ, ಕರ್ನಾಟಕ ರಾಜ್ಯದಲ್ಲಿನ ಇತರೆ ವಿಶ್ವವಿದ್ಯಾಲಯಗಳಿಗೆ ಹೋಲಿಕೆ ಮಾಡಿದರೆ, ಕ.ರಾ.ಕಾ.ವಿ.ದ ಶೈಕ್ಷಣಿಕ ವರ್ಷವನ್ನು ವಿಳಂಬವಾಗಿ ಪ್ರಾರಂಭಿಸುವುದಿರಿಂದ, ಕ.ರಾ.ಕಾ.ವಿ.ದ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿಪರತೆಗೂ ದೂರಗಾಮಿಯಾಗಿ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಇದನ್ನೂ ಓದಿ: ಕೃಷಿ ವಿಜ್ಞಾನಗಳ ವಿವಿ 11ನೇ ಘಟಿಕೋತ್ಸವ- ರಾಜ್ಯಪಾಲರಿಂದ ಪದವಿ ಪ್ರದಾನ

LAW STUDENTS 2
ಎನ್‍ಎಸ್‍ಯುಐ ಕರ್ನಾಟಕ ಘಟಕದ ವತಿಯಿಂದ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಳಕಳಿ ಮನವಿ ಮಾಡಿಕೊಂಡಿದ್ದು, ಇಂಟರ್‍ಮೀಡಿಯೇಟ್ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ (ODD. ಸೆಮೆಸ್ಟರ್) ಯುಜಿ.ಸಿ. ಮಾರ್ಗಸೂಚಿ ಮತ್ತು ಕರ್ನಾಟಕ ಸರ್ಕಾರದ ಮಾರ್ಗಸೂಚಿಯಂತೆ (50-50 ಅನುಪಾತದ ಮೌಲ್ಯಮಾಪನದಂತೆ) ನೂತನಪ್ರಾರಂಭಿಸಬೇಕೆಂದು ಕೋರುತ್ತೇವೆ. ಶೈಕ್ಷಣಿಕ ವರ್ಷವನ್ನು ಹಿಂದಿನ ಸೆಮೆಸ್ಟರ್ ಫಲಿತಾಂಶಗಳಲ್ಲಿ ಗೊಂದಲ ಮೂಡಿರುವುದು (ಮಾರ್ಚ್-ಜುಲೈ 2021ರಲ್ಲಿನ ಓಡಿಡಿ ಸೆಮೆಸ್ಟರ್) ಹಲವಾರು ವಿದ್ಯಾರ್ಥಿಗಳು ಹೇಳುವಂತೆ, ODD ಸೆಮೆಸ್ಟರ್ ಫಲಿತಾಂಶಗಳ ಪ್ರಕಟಣೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಲವಾರು ರೀತಿಯಲ್ಲಿ ಗೊಂದಲಗಳನ್ನು ಎದುರಿಸುತ್ತಿದ್ದಾರೆ. ಇದನ್ನೂ ಓದಿ:  ಮನ್‌ ಕಿ ಬಾತ್‌: ಕೋವಿಡ್‌ ಇನ್ನೂ ಹೋಗಿಲ್ಲ- ದೇಶದ ಜನತೆಗೆ ಪ್ರಧಾನಿ ಮೋದಿ ಎಚ್ಚರಿಕೆ

ಫಲಿತಾಂಶಗಳು ಪ್ರಕಟವಾದ 2 ತಿಂಗಳ ನಂತರವೂ ಹಲವಾರು ವಿದ್ಯಾರ್ಥಿಗಳಿಗೆ ಥಿಯರಿ ಅಂಕಗಳನ್ನು ನಂತರ ಪ್ರಕಟಿಸಲಾಗುವುದು To be annoubced Later(TBAL) ಎಂಬುದಾಗಿ ತೋರಿಸಲಾಗಿದೆ. ಹಲವಾರು ವಿದ್ಯಾರ್ಥಿಗಳಿಗೆ ಅಂಕಪಟ್ಟಿಯಲ್ಲಿ ಸಂಬಂಧಪಟ್ಟ ವಿಷಯಗಳಲ್ಲಿ ಥಿಯರಿ ಅಂಕಗಳನ್ನು ತೋರಿಸಿದ್ದು, ಅದೇ ವಿಷಯಕ್ಕೆ ಸಂಬಂಧಪಟ್ಟಂತೆ ಆಂತರಿಕ ಅಂಕಪಟ್ಟಿಯಲ್ಲಿ ಇಂದೀಕರಿಸುವಾಗ ತಿದ್ದಲಾಗಿದೆ. ಕೆಲವು ವಿದ್ಯಾರ್ಥಿಗಳಿಗೆ, ಹಲವಾರು ವಿಷಯಗಳ (ಥಿಯರಿ+ಆಂತರಿಕ) ಫಲಿತಾಂಶವನ್ನು ಅಂಕಪಟ್ಟಿಯಿಂದ ಕೈಬಿಡಲಾಗಿದೆ.

LAW STUDENTS 1

ಮಾನ್ಯ ಕರ್ನಾಟಕ ಉಚ್ಚನ್ಯಾಯಾಲಯದಲ್ಲಿನ ದಾವೆ 30.14389/2021, 2922/2021 ಮತ್ತು 15571/201 ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯವು ತೀರ್ಪು ನೀಡಿದ್ದು, ಅದರಂತೆ ಸೆಮೆಸ್ಟರ್ ಪರೀಕ್ಷೆಗಳಿಗೆ 50-50 ಅನುಪಾತದಲ್ಲಿ ಮೌಲ್ಯಮಾಪನ ನಡೆದಿದ್ದರೂ ಸಹ, ಹಲವಾರು ವಿದ್ಯಾರ್ಥಿಗಳಿಗೆ ಜೂನ್ 2020ರ ಫಲಿತಾಂಶವು ಇನ್ನೂ ತಲುಪಿಲ್ಲ, ಅಂಕಪಟ್ಟಿಯು ಅಪ್‍ಲೋಡ್ ಆಗಿರುವುದಿಲ್ಲ. ಕೆಲವು ಪುನರಾವರ್ತಿತ ವಿದ್ಯಾರ್ಥಿಗಳಿಗೆ ಸದರಿ ಅಂಕಪಟ್ಟಿಯಲ್ಲಾದ ಲೋಪದೋಷಗಳಿಂದಾಗಿ ಅವರುಗಳನ್ನು ವೃತ್ತಿಪರ ಸದರಿ ಅಂಕಪಟ್ಟಿಯಲ್ಲಾದ ಪದವಿ ಪ್ರಮಾಣಪತ್ರಗಳನ್ನು ಪಡೆಯಲಾಗದಂತೆ ನಿರಾಕರಿಸುವಂತಾಗುತ್ತದೆ. ಆದ್ದರಿಂದ, ಎನ್‍ಎಸ್‍ಯುಐ ಕರ್ನಾಟಕ ಘಟಕವು ಕಳಕಳಿಯಿಂದ ಮನವಿ ಸಲ್ಲಿಸುವುದೇನೆಂದರೆ, ಇನ್ನೂ ಪ್ರಕಟವಾಗದ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ತಕ್ಷಣ ಪ್ರಕಟಿಸುವಂತೆ ಮತ್ತು ಅಂಕಪಟ್ಟಿಗಳಲ್ಲಿ (2.ಬಿ,2ಸಿ) ಸದರಿ ತಾಂತ್ರಿಕ ದೋಷಗಳಿಗೆ ಸೂಕ್ತ ತಿದ್ದುಪಡಿಗಳನ್ನು ಮಾಡುವಂತೆ ಕೋರಿದ್ದಾರೆ.

ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವಿಕೆ
ಹಲವಾರು ವಿದ್ಯಾರ್ಥಿಗಳು ಹೇಳುವಂತೆ, ಹಿಂದಿನ ಸೆಮೆಸ್ಟರ್ ಪರೀಕ್ಷೆಗಳಿಗೆ ಅಂತಿಗೊಳಿಸಲಾದ ಪರೀಕ್ಷಾ ವೇಳಾಪಟ್ಟಿಯನ್ನು ಪರೀಕ್ಷೆಗಳು ಶುರುವಾಗುವ ಕೇವಲ 10 ದಿನಗಳ ಮೊದಲು ಬಿಡುಗಡೆ ಮಾಡಲಾಯಿತು. ಇದರಿಂದ ತೊಂದರೆಯಾಗಿದ್ದು, ಹಾಗಾಗಿ ಈ ಬಾರಿ ಈ ತೊಂದರೆ ನಿವಾರಣೆಗೆ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ:  ನಾನು ಅಧಿಕಾರ ಬಯಸಿಲ್ಲ, ಜನ ಸೇವೆಯೇ ಗುರಿ: ಮೋದಿ

ಪ್ರತಿಭಟನೆಯಲ್ಲಿ ಎನ್.ಎಸ್.ಯು.ಐ. ಉಪಾಧ್ಯಕ್ಷರಾದ ಜಯೇಂದ್ರರ್ ಸಾಯಿ ,ಪ್ರಧಾನ ಕಾರ್ಯದರ್ಶಿಗಳಾದ ಮನೀಶ್ ಜಿ.ರಾಜ್ ಮೊಹಮ್ಮದ್ ಆಫೀದ್ ,ಮಾರುತಿ ,ದೀಪಕ್ ಗೌಡ, ರಾಹುಲ್ ಗೌಡ, ವಿಶ್ವವಿದ್ಯಾನಿಲಯದ ಸಂಯೋಜಕರಾದ ಹೃತಿಕ್, ವರುಣ್ ಗೌಡ, ರಿತ್ವಿಕ್ ಬಾಲ ಹಾಗೂ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

TAGGED:Law UniversityNSUIstudentsಕಾನೂನು ವಿಶ್ವವಿದ್ಯಾಲಯಬೆಂಗಳೂರುವಿದ್ಯಾರ್ಥಿ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Elephant
Chamarajanagar

ನೀರು ಕುಡಿಯಲು ಬಂದು ಕೆಸರಿನಲ್ಲಿ ಸಿಲುಕಿದ್ದ ಕಾಡಾನೆ 3 ದಿನಗಳ ನಂತ್ರ ಸಾವು

Public TV
By Public TV
15 minutes ago
Voting
Latest

Tamil Nadu Elections | 234 ಕ್ಷೇತ್ರಗಳಲ್ಲಿ ಮತದಾನ ಶುರು – 4.59 ಲಕ್ಷ ಫಸ್ಟ್‌ ಟೈಂ ವೋಟರ್ಸ್‌ ಹಕ್ಕು ಚಲಾವಣೆ

Public TV
By Public TV
34 minutes ago
Ballari Hotel Cylinder Blast
Bellary

ಏಕಾಏಕಿ 2 ಸಿಲಿಂಡರ್ ಬ್ಲಾಸ್ಟ್ – ಹೊತ್ತಿ ಉರಿದ ಹೋಟೆಲ್, ಬಾಲಕನಿಗೆ ಗಂಭೀರ ಗಾಯ

Public TV
By Public TV
37 minutes ago
Election vote ink
Latest

ಇಂದು ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಚುನಾವಣೆ

Public TV
By Public TV
1 hour ago
HSR Layout Crime
Bengaluru City

ಚಿನ್ನ ಖರೀದಿಗೆ ಹೋಗಿದ್ದವನಿಂದ ಕೋಟಿ ಕೋಟಿ ಹಣ ಪಡೆದು ವಂಚನೆ – ಖತರ್ನಾಕ್‌ ಲೇಡಿ ಮಾಡಿದ್ದೇನು?

Public TV
By Public TV
1 hour ago
Farmer Fertilizer
Bengaluru City

ಇನ್ಮುಂದೆ ರಸಗೊಬ್ಬರ ಬೇಕಿದ್ರೆ FID ಕಡ್ಡಾಯ

Public TV
By Public TV
1 hour ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?