ಬೆಂಗಳೂರು: ಜೂನ್ 19ರಂದು ರಾಜ್ಯಾದ್ಯಂತ ಬಿಡುಗಡೆ ಆಗಬೇಕಿದ್ದ ಬಹುಚರ್ಚಿತ ಬಾಸ್ (Boss) ಚಲನಚಿತ್ರಕ್ಕೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ. ನಟ ದರ್ಶನ್ (Darshan) ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್(Vijayalakshmi Darshan) ಅವರು ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ನಲ್ಲಿ (Karnataka High Court) ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.
ನಗರ ಸಿವಿಲ್ ನ್ಯಾಯಾಲಯವು ಈ ಹಿಂದೆ ಚಿತ್ರದ ಬಿಡುಗಡೆಗೆ ವಿಧಿಸಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿ ಬಿಡುಗಡೆಗೆ ಅವಕಾಶ ನೀಡಿತ್ತು. ಅದರ ಬೆನ್ನಲ್ಲೇ ಚಿತ್ರತಂಡವು ಜೂನ್ 19ರಂದು ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಸದ್ಯಕ್ಕೆ ಬಿಡುಗಡೆ ಆಗುವುದು ಬಹುತೇಕ ಅನುಮಾನ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್| ವಾರದಲ್ಲಿ 4 ದಿನ ಟ್ರಯಲ್, ಖುದ್ದು ಹಾಜರಾತಿ ಕೇಳಿದ ದರ್ಶನ್
ಸಿವಿಲ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿರುವ ಅರ್ಜಿದಾರರು, ಚಿತ್ರದ ಬಿಡುಗಡೆಗೆ ತಕ್ಷಣದ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದಾರೆ. ಚಿತ್ರದ ಕಥಾವಸ್ತು, ಪಾತ್ರಗಳ ನಿರೂಪಣೆ ಹಾಗೂ ಇತರ ವಿವಾದಿತ ಅಂಶಗಳಿಗೆ ಸಂಬಂಧಿಸಿದಂತೆ ಗಂಭೀರ ಆಕ್ಷೇಪಣೆಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಬಾಸ್ ಸಿನಿಮಾದ ಕಥೆಯು ರೇಣುಕಾಸ್ವಾಮಿ (Renukaswamy) ಕೊಲೆಯ ಹಿನ್ನೆಲೆಯಾಗಿ ಬಂದಿರುವ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಾಗಿಯೇ ದರ್ಶನ್ ಕುಟುಂಬ ಸಿನಿಮಾಗೆ ತಡೆಯಾಜ್ಞೆ ತರುತ್ತಿದೆ.
