ಕುಂಕುಮ್ ಭಾಗ್ಯ ಧಾರಾವಾಹಿ ಖ್ಯಾತಿಯ ಸಂಚಿತಾ (Sanchita Ugale) ಭಾನುವಾರವಷ್ಟೇ ಅವರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಸಾವಿಗೂ ಮುನ್ನ ಅವರು ಯಾವುದೇ ಡೆತ್ ನೋಟ್ ಬರೆಯದೇ ಇರುವ ಕಾರಣದಿಂದಾಗಿ ಅವರ ಸಾವು ನಿಗೂಢವಾಗಿ ಉಳಿದಿತ್ತು. ಸಾವಿಗೂ ಒಂದು ದಿನ ಮುನ್ನ ಅವರು ನಗು ನಗುತ್ತಲೇ ರೀಲ್ಸ್ ಕೂಡ ಮಾಡಿದ್ದರು. ಹಾಗಾಗಿ ಸಾವಿಗೆ ಕಾರಣ ಏನು ಅನ್ನೋದು ಯಕ್ಷ ಪ್ರಶ್ನೆಯಾಗಿತ್ತು.
ನಟಿಯ ಸಾವಿಗೆ ಪೊಲೀಸ್ ಅಧಿಕಾರಿಗಳು ಇನ್ನೂ ಕಾರಣವನ್ನು ಹುಡುಕುತ್ತಲೇ ಇದ್ದಾರೆ. ಅಷ್ಟರಲ್ಲಿ ಆ ನಟಿಯ ಆಪ್ತರು ಸಾವಿಗೆ ನಾನಾ ಕಾರಣಗಳನ್ನು ಕೊಡುತ್ತಿದ್ದಾರೆ. ವೃತ್ತಿಯ ಒತ್ತಡದ ಕಾರಣದಿಂದಾಗಿ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಅಂತ ಕೆಲವರು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಪ್ರೇಮ ವೈಫಲ್ಯ ಕಾರಣ ಅಂತ ಕಾಮೆಂಟ್ ಮಾಡುತ್ತಿದ್ದಾರೆ.
ಆ ನಟಿಯು ಸಹನಟ ಉಜ್ವಲ್ ಶರ್ಮಾ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದರಂತೆ. ಆದರೆ, ಇತ್ತೀಚಿನ ದಿನಗಳಲ್ಲಿ ಆತನ ನಡವಳಿಕೆಯಿಂದಾಗಿ ಬೇಸತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ವದಂತಿಗೆ ಉಜ್ವಲ್ ಪ್ರತಿಕ್ರಿಯೆ ನೀಡಿದ್ದು, ಸಂಚಿತಾ ಜೊತೆ ಯಾವುದೇ ಪ್ರೇಮ ಹೊಂದಿರಲಿಲ್ಲ ಅಂತ ಹೇಳಿದ್ದಾರೆ. ಸಂಚಿತಾ ಬೇರೊಬ್ಬ ಯುವಕನ ಜೊತೆ ಲಿವ್ ಇನ್ ರಿಲೇಶನ್ ಶಿಪ್ ಇದ್ದರು ಅಂತಾನೂ ಹೇಳಿದ್ದಾರೆ.
ಆತನಿಂದ ಸಂಚಿತಾ ತುಂಬಾ ಸಂಕಷ್ಟ ಎದುರಿಸುತ್ತಿದ್ದರು. ಪ್ರೊಡಕ್ಷನ್ ಹೌಸ್ ಕೂಡ ಆಕೆಗೆ ತುಂಬಾ ಸಹಾಯ ಮಾಡಿತ್ತು. ಹೀಗೆ ಆಕೆ ಸಾವನ್ನಪ್ಪಿರುವುದು ದುಃಖದ ಸಂಗತಿ ಅಂತ ಹೇಳಿಕೊಂಡಿದ್ದಾರೆ. ಪೊಲೀಸರು ಸದ್ಯ ಸಂಚಿತಾ ಜೊತೆ ಇರುವ ಹುಡುಗ ಯಾರು ಅನ್ನುವುದರ ಸುತ್ತ ತನಿಖೆ ಆರಂಭಿಸಿದ್ದಾರೆ.
