2024ರಲ್ಲಿ ತೆರೆಕಂಡ ಪ್ರಭಾಸ್ ಅಭಿನಯದ ಕಲ್ಕಿ 2898 AD (Kalki 2898 AD) ಸಿನಿಮಾ ( Cinema News) ಸಾಕಷ್ಟು ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಕಲ್ಕಿ ಸಿನಿಮಾದ ಸಿಕ್ವೆಲ್ ಬಗ್ಗೆ ಹಲವು ತಿಂಗಳಿಂದ ಒಂದಿಲ್ಲೊಂದು ಸುದ್ದಿ ಹರಿದಾಡುತ್ತಲೇ ಇದೆ. ನಿರ್ದೇಶಕ ನಾಗ್ ಅಶ್ವಿನ್, ಈಗಾಗಲೇ ಎರಡು ಹಂತದ ಚಿತ್ರೀಕರಣ ಕೂಡ ಮುಗಿಸಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದ ನಾಯಕಿ ಯಾರು? ಅನ್ನುವ ಪ್ರಶ್ನೆ ಮೂಡಿದೆ.
ಕಲ್ಕಿ ಸಿನಿಮಾದಲ್ಲಿ ಕಲ್ಕಿ ತಾಯಿ ಸುಮತಿ ಅವರ ಪಾತ್ರವನ್ನು ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಮಾಡಬೇಕಿತ್ತು, ಆದರೆ ಇತ್ತೀಚೆಗೆ ನಟಿ ಸಿನಿಮಾದಿಂದ ಹೊರಬಂದಿದ್ದರಿಂದ ಅವರ ಬದಲಾಗಿ ಯಾರು ಆ ಪಾತ್ರವನ್ನು ನಿರ್ವಹಿಸುತ್ತಾರೆ ಎಂಬ ಗೊಂದಲ ಅಭಿಮಾನಿಗಳಲ್ಲಿ ಮೂಡಿತ್ತು. ಆ ಪಾತ್ರಕ್ಕೆ ಬೇರೆ ನಟಿಯನ್ನು ಆಯ್ಕೆ ಮಾಡಲಾಗುತ್ತಿದೆ ಎನ್ನುವ ಸುದ್ದಿ ಇತ್ತು. ಆದರೆ ಈಗ ದೀಪಿಕಾ ಸ್ಥಾನವನ್ನು ಸಾಯಿ ಪಲ್ಲವಿ (Sai Pallavi) ತುಂಬಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಕುರಿತು ಚಿತ್ರತಂಡ ಯಾವುದೇ ಸ್ಪಷ್ಟನೆ ನೀಡಿಲ್ಲ.
ಎರಡು ಹಂತದ ಚಿತ್ರೀಕರಣ ಮುಗಿದಿದ್ದರೂ, ನಾಯಕಿ ಯಾರು ಅನ್ನುವ ಗೊಂದಲ ಹಾಗೆಯೇ ಇದೆ. ಇದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ನಾಗ್ ಅಶ್ವಿನ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸುಮತಿ ಪಾತ್ರವನ್ನು ಮಾಡೋರು ಯಾರು ಅನ್ನುವ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.ಇದನ್ನೂ ಓದಿ: ಗೆಳೆಯನೊಂದಿಗೆ ಮದುವೆಯಾಗಿದ್ದು ನನ್ನ ಜೀವನದ ಅತ್ಯಂತ ಸಂತೋಷದ ಕೆಲಸ ಎಂದ ರಶ್ಮಿಕಾ
ಸುಮತಿ ಪಾತ್ರವು ಕಲ್ಕಿ 2 ಸಿನಿಮಾದಲ್ಲಿ ಮುಂದುವರೆದಿದೆ. ಆ ಪಾತ್ರವನ್ನು ಯಾರು ಮಾಡುತ್ತಾರೆ ಅನ್ನುವ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗಲಿದೆ. ಯಾರೋ ಒಬ್ಬರು ಆ ಪಾತ್ರವನ್ನು ಮಾಡೇ ಮಾಡುತ್ತಾರೆ ಎನ್ನುವ ಮೂಲಕ ಮತ್ತಷ್ಟು ಕುತೂಹಲವನ್ನು ಮೂಡಿಸಿದ್ದಾರೆ ನಿರ್ದೇಶಕರು. ಅವರು ಯಾರು ಅನ್ನೋದನ್ನು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಇದನ್ನೂ ಓದಿ: ಇಂಡಸ್ಟ್ರಿಗೆ ಶಾಕ್ ಕೊಟ್ಟ ಸಲ್ಮಾನ್ ಖಾನ್ ಬಾಲ್ಡ್ ಲುಕ್
