– ಮತ್ತೊಬ್ಬ ಒಕ್ಕಲಿಗ ನಾಯಕ ಸಿಎಂ ಆಗಿರೋದನ್ನ ಸಹಿಸ್ತಿಲ್ಲ
ರಾಮನಗರ: ಕುಮಾರಸ್ವಾಮಿ (HD Kumaraswamy) ಬಿಜೆಪಿ (BJP) ಜೊತೆ ಸೇರಿಕೊಂಡಿರೋದೆ ನಮಗೆ ತೊಂದರೆ ಕೊಡಲು. ನಮ್ಮ ಮೇಲಿನ ತನಿಖೆಗೆ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದು ಅವರೇ ಎಂದು ಕುಮಾರಸ್ವಾಮಿ ವಿರುದ್ಧ ಮಾಗಡಿ ಶಾಸಕ ಹೆಚ್‌ಸಿ ಬಾಲಕೃಷ್ಣ (HC Balakrishna) ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಯಾರ‍್ಯಾರಿಗೆ ಫೋನ್ ಮಾಡಿದ್ದಾರೆ, ನಮ್ಮನ್ನ ಹೇಗೆ ಬಲಿ ಹಾಕಬೇಕು ಎಲ್ಲಾ ಪ್ಲ್ಯಾನ್ ಮಾಡಿದ್ದಾರೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇವೆ. ಒಬ್ಬ ಒಕ್ಕಲಿಗ ಜನಾಂಗದ ನಾಯಕ ಇನ್ಯಾರು ಕೂಡ ಸಿಎಂ ಆಗಬಾರದು ಅಂತ ಅವರ ಮನಸ್ಸಿನಲ್ಲಿ ಇತ್ತು. ಅವರಿಗೆ ಅವಕಾಶ ಸಿಗಬಾರದು ಎಂಬ ಪ್ರಯತ್ನ ಕೂಡ ನಡೆದಿವೆ. ಅದಕ್ಕಾಗಿ ಯಾರ‍್ಯಾರ ಬಳಿ ಮಾತಡಿದ್ದಾರೆ ಅಂತ ಅವರ ಆತ್ಮ ಮುಟ್ಟಿ ಹೇಳಲಿ. ಈಗ ಅಧಿಕಾರ ಸಿಕ್ಕಿತಲ್ಲ ಎಂದು ಹೊಟ್ಟೆಕಿಚ್ಚು. ಈಗ ನಮ್ಮ ಕಮ್ಯುನಿಟಿಯಲ್ಲಿ ಎರಡನೇ ನಾಯಕತ್ವ ಪ್ರಬಲವಾಗಿ ಬೆಳೆಯುತ್ತಿದೆ. ಇದನ್ನ ಏನಾದರು ಮಾಡಿ ಮುಟುಕು ಮಾಡಬೇಕು ಎಂದು ಮಾಡುತ್ತಿದ್ದಾರೆ. ಡಿಕೆಶಿ ಸಿಎಂ ಆಗುವ ಮುಂಚೆ ಯಾಕೆ ಈ ಹೋರಾಟ ಮಾಡಲಿಲ್ಲ? ಡಿಕೆಶಿ ಸಿಎಂ ಆದಮೇಲೆ ನಿಖಿಲ್ ಎರಡು ಬಾರಿ ಹೋರಾಟಕ್ಕೆ ಬಂದಿದ್ದಾರೆ. ಈ ಮುಂಚೆ ಬಂದು ಯಾಕೆ ಹೋರಾಟ ಮಾಡಲಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಲಘಟಗಿ | ಕಲ್ಲು ಮಾಫಿಯಾ ಅಬ್ಬರ – ಹಗಲಲ್ಲೇ ಪ್ರಕೃತಿ ಲೂಟಿ, ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಆಕ್ರೋಶ!
ಕುಮಾರಸ್ವಾಮಿ ಬಹಳ ಬುದ್ಧಿವಂತರು. ಯೋಜನಾ ವ್ಯಾಪ್ತಿಯಲ್ಲಿ ಅವರ ಶ್ರೀಮತಿ, ಮಗನ ಹೆಸರಲ್ಲಿ 60 ಎಕರೆ ಇದೆ. ಅದರ ಬಗ್ಗೆ ಮಾತನಾಡಿ ಅಂದ್ರೆ ಕೇತಗಾನಹಳ್ಳಿ ಜಮೀನು ಬಗ್ಗೆ ಮಾತನಾಡುತ್ತಾರೆ. 60 ಎಕರೆ ಬೇನಾಮಿ ಇದೆ ಅಲ್ವಾ, ಅದರ ಬಗ್ಗೆ ಮಾತನಾಡಿ. ಎಲ್ಲರೂ ಗಾಜಿನ ಮನೆಲಿ ಕೂತಿದ್ದೇವೆ, ಸುಮ್ಮನೆ ಕಲ್ಲು ಹೊಡೆಯೋದು ಬೇಡ. ಯಾರು ಸತ್ಯಹರಿಶ್ಚಂದ್ರರು ಅಂತ ಎದೆ ತಟ್ಟಿಕೊಳ್ಳೋದು ಬೇಡ. ನಾನು ರಿಯಲ್ ಎಸ್ಟೇಟ್, ಬಿಸಿನೆಸ್ ಮಾಡಿದೀನಿ ಅಂತ ನಮ್ಮ ಲೀಡರ್ ಹೇಳಿದ್ದಾರೆ. ಕುಮಾರಸ್ವಾಮಿ ಕೂಡಾ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲಿ ನೋಡೋಣ. ಅಶೋಕ್ ಅವರದ್ದು ಎಷ್ಟಿದೆ, ಕುಮಾರಸ್ವಾಮಿ ಕುಟುಂಬದ್ದು ಎಷ್ಟಿದೆ ಆದಾಯ? ಅದು ಎಲ್ಲಿಂದ ಬಂತು ಅಂತ ನೀವೆ ವಿಮರ್ಶೆ ಮಾಡಿ ಎಂದರು. ಇದನ್ನೂ ಓದಿ: ಟೈರ್ ಬ್ಲಾಸ್ಟ್ ಆಗಿ ಬಸ್ಸಿಗೆ ಟಿಪ್ಪರ್ ಡಿಕ್ಕಿ – ಮೂವರು ದುರ್ಮರಣ, 10 ಮಂದಿಗೆ ಗಾಯ
ನಮ್ಮ ನಾಯಕರು ಒಪ್ಪಿಕೊಂಡ ಹಾಗೆ ನೀವು ಒಪ್ಪಿಕೊಳ್ಳಿ. ಡಿಕೆಶಿ ಸುಳ್ಳು ಹೇಳುವುದಿಲ್ಲ, ಸತ್ಯ ಹೇಳುತ್ತಾರೆ. ಅವರ ಆದಾಯ ನೋಡಿ ದೇಶದಲ್ಲಿ ಇರುವ ಎಲ್ಲಾ ಇಲಾಖೆಯಿಂದಲೂ ತನಿಖೆ ಮಾಡಿಸಿದ್ರಲ್ಲ. ಇವರು ಆ ತನಿಖೆಗಳಿಗೆ ಒಪ್ಪಿಕೊಳ್ತಾರಾ? ಅಷ್ಟೆಲ್ಲ ತನಿಖೆ ಮಾಡಿದ್ರೂ ಏನು ಸಿಗಲಿಲ್ಲ. ಸುಪ್ರೀಂ ಕೋರ್ಟ್ನಲ್ಲಿ ಆ ಕೇಸ್ ವಜಾ ಆಯ್ತು. ಈಗ ಅಶೋಕಣ್ಣ, ಕುಮಾರಸ್ವಾಮಿ ಸ್ವಯಂ ಪ್ರೇರಿತವಾಗಿ ತನಿಖೆಗೆ ಒಪ್ತಾರಾ? ಅವರ ಕುಟುಂಬದ ಆಸ್ತಿ ಎಲ್ಲ ತನಿಖೆಯಾಗಲಿ ಅಂತ ನಾವು ಆಗ್ರಹ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್ – ತನಿಖಾ ತಂಡದ ಕಾರು ಚಾರ್ಮಾಡಿಯಲ್ಲಿ ಪಲ್ಟಿ
