ತಮಿಳುನಾಡು ಸಿಎಂ ವಿಜಯ್ (CM Vijay) ಹಾಗೂ ನಟಿ ತ್ರಿಷಾ (Trisha) ಅವರ ಸಂಬಂಧದ ಬಗ್ಗೆ ಹಲವು ರೀತಿಯ ಚರ್ಚೆಗಳು, ವದಂತಿಗಳು ಹರಿದಾಡುತ್ತಿವೆ. ವಿಜಯ್ ಅವರ ವೈಯಕ್ತಿಕ ಜೀವನದ ಬಗ್ಗೆಯೂ ತ್ರಿಷಾ ಹೆಸರು ಕೇಳಿಬಂದಿತ್ತು. ಈ ನಡುವೆ ತ್ರಿಷಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಿಗೂಢ ಪೋಸ್ಟ್‌ಗಳು ಇದೀಗ ಭಾರಿ ಚರ್ಚೆಗೆ ಕಾರಣವಾಗಿವೆ.
ಇನ್‌ಸ್ಟಾಗ್ರಾಂ (Instagram) ಸ್ಟೋರಿಯಲ್ಲಿ ತ್ರಿಷಾ, ಈ ವಯಸ್ಸಿನಲ್ಲಿ ಡ್ರಾಮಾ ಮಾಡೋದು ನಿಜಕ್ಕೂ ನಾಚಿಕೆಗೇಡು. ಹೋಗಿ ಒಂದಷ್ಟು ಹಣ ಸಂಪಾದಿಸಿ ಹಾಗೂ ಜೀವನದಲ್ಲಿ ಶಾಂತಿ ಕಂಡುಕೊಳ್ಳಿ ಎಂಬರ್ಥದ ಸಂದೇಶವನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ, ಒಮ್ಮೆ ನೀವು ದೇವರಲ್ಲಿ ಪ್ರಾರ್ಥಿಸಿದ್ದ ಸುಂದರ ಜೀವನ ಇಂದು ನಿಮಗೆ ಸಿಕ್ಕಿರುವುದು ಎಂತಹ ಮಹಾನ್ ಭಾಗ್ಯ ಎಂಬ ಮತ್ತೊಂದು ಪೋಸ್ಟ್‌ನ್ನೂ ಶೇರ್ ಮಾಡಿದ್ದಾರೆ.
ತ್ರಿಷಾ ಯಾರನ್ನು ಉದ್ದೇಶಿಸಿ ಈ ಪೋಸ್ಟ್ ಮಾಡಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ. ಆದರೆ, ಇತ್ತೀಚೆಗೆ ತಮ್ಮ ಹಾಗೂ ವಿಜಯ್ ಬಗ್ಗೆ ಕೇಳಿಬರುತ್ತಿರುವ ಟೀಕೆಗಳು ಮತ್ತು ವಿವಾದಗಳ ಹಿನ್ನೆಲೆಯಲ್ಲಿ ಈ ಪೋಸ್ಟ್ ಮಾಡಿದ್ದಾರಾ ಎಂಬ ಚರ್ಚೆ ಶುರುವಾಗಿದೆ.
ಇತ್ತೀಚೆಗೆ ತ್ರಿಷಾ ಹಾಗೂ ವಿಜಯ್ ಬಗ್ಗೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಾಡಿದ್ದ ದ್ವಂದ್ವಾರ್ಥದ ಹೇಳಿಕೆ ಕೂಡ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಬಳಿಕ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಂಧನವಾಗಿ ಬಿಡುಗಡೆಯೂ ಆಗಿತ್ತು ಎಂದು ವರದಿಯಾಗಿದೆ.
ಇತ್ತ ಎಐಎಡಿಎಂಕೆ ನಾಯಕ ಉದಯಕುಮಾರ್ ಕೂಡ ಶೀಘ್ರದಲ್ಲೇ ತ್ರಿಷಾ ಡಿಸಿಎಂ ಆಗ್ತಾರೆ ಎಂಬ ಹೇಳಿಕೆ ನೀಡಿದ್ದರು. ಮತ್ತೊಂದೆಡೆ ವಿಜಯ್ ಅವರ ಪತ್ನಿ ಸಂಗೀತಾ ವಿಚ್ಛೇದನ ಅರ್ಜಿ ಸಲ್ಲಿಸಿರುವುದಕ್ಕೂ ತ್ರಿಷಾ ಜೊತೆಗಿನ ವಿಜಯ್ ಅವರ ಸಂಬಂಧವೇ ಕಾರಣ ಎಂಬ ವದಂತಿಗಳು ಹರಿದಾಡಿದ್ದವು. ಇದನ್ನೂ ಓದಿ: ಪುರಿ ಜಗನ್ನಾಥ್ ನಿರ್ದೇಶನದ ಚಿತ್ರದಲ್ಲಿ ನಟಿ ಟಬು ಪವರ್ ಫುಲ್ ಪಾತ್ರ
ಈ ಎಲ್ಲ ವಿವಾದಗಳ ನಡುವೆಯೂ ತ್ರಿಷಾ ಇದುವರೆಗೆ ನೇರವಾಗಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಅವರು ಹಂಚಿಕೊಂಡಿರುವ ಪೋಸ್ಟ್‌ಗಳು ಯಾರಿಗೆ ಟಕ್ಕರ್ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ಆದರೆ ನೆಟ್ಟಿಗರು ಮಾತ್ರ ಇದನ್ನು ಇತ್ತೀಚಿನ ವಿವಾದಗಳಿಗೆ ತ್ರಿಷಾ ನೀಡಿರುವ ಪರೋಕ್ಷ ತಿರುಗೇಟು ಎಂದೇ ವ್ಯಾಖ್ಯಾನಿಸುತ್ತಿದ್ದಾರೆ. ಇದನ್ನೂ ಓದಿ: ಡಿಕೆಶಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

