ಬೆಂಗಳೂರು: ಹಲವು ಸುತ್ತಿನ ಸಭೆಯ ಬಳಿಕ ಡಿಕೆ ಶಿವಕುಮಾರ್ (DK Shivakumar) ಸಂಪುಟದ ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಚಲುವರಾಯಸ್ವಾಮಿ ಅವರಿಗೆ ಕೃಷಿ, ಜಮೀರ್ ಅಹ್ಮದ್ ಅವರಿಗೆ ಗೃಹ ಮತ್ತು ವಕ್ಫ್ ಖಾತೆಯನ್ನು ನೀಡಲಾಗಿದೆ.
ಸಿದ್ದರಾಮಯ್ಯ ಸಂಪುಟದಲ್ಲಿ ಮುನಿಯಪ್ಪ (Muniyappa) ಅವರಿಗೆ ಆಹಾರ ಖಾತೆಯನ್ನು ನೀಡಲಾಗಿತ್ತು. ಆದರೆ ಈ ಬಾರಿ ಸಮಾಜ ಕಲ್ಯಾಣ ಸಚಿವಾಲಯವನ್ನು ನೀಡಲಾಗಿದೆ. ಮುನಿಯಪ್ಪ ಅವರು ಸಮಾಜಕಲ್ಯಾಣ ಖಾತೆ ಬೇಕೇಂದು ಪಟ್ಟು ಹಿಡಿದಿದ್ದರು. ಅದರಂತೆ ಈಗ ಆ ಖಾತೆಯನ್ನೇ ಹಂಚಿಕೆ ಮಾಡಲಾಗಿದೆ.
ಪ್ರಮಾಣವಚನ ಸ್ವೀಕರಿಸಿದ 19 ಮಂದಿ ಪೈಕಿ 13 ಮಂದಿಗೆ ಮಾತ್ರ ಈ ಗ ಖಾತೆ ಹಂಚಿಕೆ ಮಾಡಲಾಗಿದೆ. 6 ಮಂದಿಗೆ ಇನ್ನೂ ಖಾತೆ ಹಂಚಿಕೆಯಾಗಿಲ್ಲ. ಎಲ್ಲವೂ ಅಂತಿಮವಾದ ಬಳಿಕ ಡಿಕೆಶಿ ಸಚಿವರ ಪಟ್ಟಿಯನ್ನು ಲೋಕಭವನಕ್ಕೆ ಕಳುಹಿಸಲಿದ್ದಾರೆ.
ಯಾರಿಗೆ ಯಾವ ಖಾತೆ?
ಚಲುವರಾಯಸ್ವಾಮಿ – ಕೃಷಿ
ರಿಜ್ವಾನ್ ಅರ್ಷದ್ – ಆಹಾರ
ಮುನಿಯಪ್ಪ – ಸಮಾಜ ಕಲ್ಯಾಣ
ಸಂತೋಷ್ ಲಾಡ್ – ಕಾರ್ಮಿಕ
ಬಸಂತಪ್ಪ- ಮೀನುಗಾರಿಕೆ
ಮಧು ಬಂಗಾರಪ್ಪ – ಪ್ರಾಥಮಿಕ ಶಿಕ್ಷಣ
ರಾಯರೆಡ್ಡಿ- ಉನ್ನತ ಶಿಕ್ಷಣ
ಜಮೀರ್ – ಹೌಸಿಂಗ್ ವಕ್ಪ್
ಲಕ್ಷ್ಮಣ ಸವದಿ – ಸಹಕಾರಿ
ಅಜಯ್ ಸಿಂಗ್ – ಅರಣ್ಯ
ಎಸ್ ಎಸ್ ಮಲ್ಲಿಕಾರ್ಜುನ – ಗಣಿ
ಬಾಲಕೃಷ್ಣ- ಸಣ್ಣ ನೀರಾವರಿ
ಪುಟ್ಟರಂಗ ಶೆಟ್ಟಿ – ಪಶು ಸಂಗೋಪನೆ

